BJP ನಾಯಕನ ಹೆಂಡತಿಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಕಿರಾತಕರು

ಬಿಜೆಪಿ ನಾಯಕನ ಹೆಂಡತಿಯ ಕತ್ತಿನಲ್ಲಿದ್ದ ಮೌಲ್ಯದ ಚಿನ್ನದ ಸರವನ್ನು ಇಬ್ಬರು ದುಷ್ಕರ್ಮಿಗಳು ಕಿತ್ತುಕೊಂಡು ಓಡಿ ಹೋಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

author-image
Bhimappa
Haryana_BJP
Advertisment

ಚಂಡೀಗಢ: ಬಿಜೆಪಿ ನಾಯಕನ ಹೆಂಡತಿಯ ಕತ್ತಿನಲ್ಲಿದ್ದ ಮೌಲ್ಯದ ಚಿನ್ನದ ಸರವನ್ನು ಇಬ್ಬರು ದುಷ್ಕರ್ಮಿಗಳು ಕಿತ್ತುಕೊಂಡು ಓಡಿ ಹೋಗಿರುವ ಘಟನೆ ಹರಿಯಾಣದ ಜಿಂದಾ ಜಿಲ್ಲೆಯ ನರ್ವಾನದಲ್ಲಿ ನಡೆದಿದೆ.     

ಜಿಲ್ಲೆಯ ನರ್ವಾನ ನಗರದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಶರ್ಮಾ ಫ್ಯಾಮಿಲಿ ಇದೆ. ಎಂದಿನಂತೆ ಇವರ ಹೆಂಡತಿ ಮನೆಯ ಮುಂದಿನ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಇದೇ ವೇಳೆ ಕೆಂಪು ಬಣ್ಣದ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವನ್ನು ಎಸಗಿದ್ದಾರೆ. ಒಬ್ಬ ಬೈಕ್​ ಸ್ಟಾರ್ಟ್​ ಮಾಡಿಕೊಂಡು ಪಕ್ಕದ ರಸ್ತೆಯಲ್ಲಿ ನಿಂತುಕೊಂಡಿರುವುದು ಸಿಸಿಟಿವಿ ವಿಡಿಯೋದಲ್ಲಿ ಕಂಡು ಬಂದಿದೆ.

ಇನ್ನೊಬ್ಬ ಕಿರಾತಕ, ಪ್ರಮೋದ್ ಶರ್ಮಾ ಅವರ ಹೆಂಡತಿಯನ್ನ ಫಾಲೋ ಮಾಡಿಕೊಂಡು ಬಂದು ಅವರ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಓಡಿ ಹೋಗಿ ಪಕ್ಕದ ರಸ್ತೆಯಲ್ಲಿ ನಿಂತಿದ್ದ ಬೈಕ್​ ಹತ್ತಿಕೊಂಡು ಪರಾರಿಯಾಗಿದ್ದಾನೆ. ಇನ್ನು ಈ ಬಂಗಾರದ ಸರ ಮಾಂಗಲ್ಯ ಸರ ಎನ್ನಲಾಗುತ್ತಿದ್ದು ಒಂದೂವರೆ (1.5) ತೊಲೆ ಇದೆ. ಇದರ ಮೌಲ್ಯ ಒಂದು ಲಕ್ಷದ 50 ಸಾವಿರ ರೂಪಾಯಿಗಳು ಎಂದು ಹೇಳಲಾಗುತ್ತಿದೆ.  

ಇದನ್ನೂ ಓದಿ:ಇಂದಿನಿಂದ ವಿಧಾನಮಂಡಲ ಅಧಿವೇಶನ.. ಸರ್ಕಾರದ ವಿರುದ್ಧ BJP-JDS ಬತ್ತಳಿಕೆಯಲ್ಲಿರೋ ಅಸ್ತ್ರಗಳು ಯಾವ್ಯಾವು?

Haryana_BJP_1

ಸರ ಕಿತ್ತುಕೊಳ್ಳುತ್ತಿದ್ದಂತೆ ಬಿಜೆಪಿ ನಾಯಕನ ಹೆಂಡತಿ ಕಿರುಚಿದ್ದಾರೆ. ತಕ್ಷಣ ಅಕ್ಕಪಕ್ಕದ ಜನರು ಓಡಿ ಬಂದರು. ಆದ್ರೆ ಕಳ್ಳರು ಅಷ್ಟೊತ್ತಿಗೆ ಬೈಕ್​ನಲ್ಲಿ ಪರಾರಿಯಾಗಿದ್ದರು. ಸದ್ಯ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಹೇಳಿದ್ದಾರೆ. 

ಇನ್ನು ಈ ನಗರದಲ್ಲಿ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಹೋಗುತ್ತಿರುವ ಘಟನೆಗಳು  ಕಳೆದ ಎರಡು ತಿಂಗಳಿಂದ 50 ಬಾರಿ ನಡೆದಿವೆ. ಇದರಲ್ಲಿ ಸುಮಾರು 45 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ  ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಈಗ ರಾಜಕಾರಣಿಯ ಪತ್ನಿಗೆ ಈ ರೀತಿ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇನ್ನು ಈ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದು ನಿಮ್ಮವರಿಗೆ ಭದ್ರತೆ ಇಲ್ಲವೆಂದರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BJP leader
Advertisment