Advertisment

ಅಮ್ಮನಿಗೆ ಕೊಟ್ಟ ಅದೊಂದು ಮಾತು.. ಇವತ್ತು ಈ ಜ್ಞಾನ ಭಂಡಾರಕ್ಕೆ 150ಕ್ಕೂ ಹೆಚ್ಚು ಪದವಿಗಳು..!

ಓದಿ ಪರೀಕ್ಷೆ ಬರೆಯೋದು ಅಂದ್ರೆ ನಮ್ಮಲ್ಲಿ ಬಹುತೇಕರಿಗೆ ದೊಡ್ಡ ಆತಂಕ. ಏನೋ, ಹೇಗೋ ಎಂಬ. ವಿದ್ಯಾರ್ಥಿಗಳಾಗಿದ್ದಾಗ ಫೈನಲ್ ಎಕ್ಸಾಂ ಬರೆದ ಮೇಲೆ ದೊಡ್ಡ ನಿಟ್ಟುಸಿರು. ಅಂತೂ, ಇಂತೂ ಓದು ಮುಗಿದೇ ಹೋಯ್ತು. ಹೊಸ ಜೀವನ ಆರಂಭ! ಉದ್ಘಾರ!

author-image
Ganesh Kerekuli
Professor VN Parthiban (1)
Advertisment

ಓದಿ ಪರೀಕ್ಷೆ ಬರೆಯೋದು ಅಂದ್ರೆ ನಮ್ಮಲ್ಲಿ ಬಹುತೇಕರಿಗೆ ದೊಡ್ಡ ಆತಂಕ. ಏನೋ, ಹೇಗೋ ಎಂಬ. ವಿದ್ಯಾರ್ಥಿಗಳಾಗಿದ್ದಾಗ ಫೈನಲ್ ಎಕ್ಸಾಂ ಬರೆದ ಮೇಲೆ ದೊಡ್ಡ ನಿಟ್ಟುಸಿರು. ಅಂತೂ, ಇಂತೂ ಓದು ಮುಗಿದೇ ಹೋಯ್ತು. ಹೊಸ ಜೀವನ ಆರಂಭ! ಉದ್ಘಾರ! 
ಆದರೆ ಇಲ್ಲೊಬ್ಬ ಪ್ರೊಫೆಸರ್ ಇದ್ದಾರೆ. ಅವರು ನಮ್ಮ, ನಿಮ್ಮ ಹಾಗೆ ಅಲ್ಲವೇ ಅಲ್ಲ. ಈಗಲೂ ವಿದ್ಯಾರ್ಥಿಯಾಗಿರುವ ಅವರು, ಇಲ್ಲಿಯವರೆಗೆ ಬರೋಬ್ಬರಿ 150 ಡಿಗ್ರಿ ಪಡೆದುಕೊಂಡಿದ್ದಾರೆ. ಅವರ ಹೆಸರು ಪ್ರೊಫೆಸರ್ ಡಾ. ವಿ.ಎನ್. ಪಾರ್ಥಿಬನ್ (Professor VN Parthiban). ಚೆನ್ನೈನಲ್ಲಿರುವ ಇವರನ್ನು ಪ್ರೀತಿಯಿಂದ ‘ಪದವಿಗಳ ಭಂಡಾರ’ (Repository of Degree) ಮತ್ತು ‘ವಾಕಿಂಗ್ ಎನ್ಸೈಕ್ಲೋಪೀಡಿಯಾ ಆಫ್ ನಾಲೆಡ್ಜ್’ (Walking Encyclopedia) ಎಂದು ಕರೆಯಲಾಗುತ್ತದೆ..

Advertisment

ಎಲ್ಲಿಂದ ಬಂತು ಈ ಸ್ಫೂರ್ತಿ..?

ಪಾರ್ಥಿಬನ್​ ಸಾಧನೆಯ ಹಿಂದಿರೋದು ಜನನಿ ಮೊದಲ ಗುರು. ಪ್ರೊಫೆಸರ್ ಡಾ.ವಿ.ಎನ್ . ಪಾರ್ಥಿಬನ್, ತಮ್ಮ ಮೊದಲ ಪದವಿಯನ್ನು ತುಂಬಾನೇ ಕಷ್ಟಪಟ್ಟು ಪಾಸು ಮಾಡುತ್ತಾರೆ. ಮಗ ತೆಗೆದ  ಅಂಕ ನೋಡಿದ ತಾಯಿ ದುಃಖಿತರಾದರು. ಆ ಕ್ಷಣವೇ ಅವರ ಜೀವನ ಮಹತ್ವದ ತಿರುವು ಪಡೆಯಿತು. ಇನ್ನುಂದೆ ಜಸ್ಟ್ ಪಾಸ್ ಆಗೋದಲ್ಲ, ದೊಡ್ಡ ಸಾಧನೆ ಮಾಡೋದಾಗಿ ನಿರ್ಧರಿಸಿದರು. ಅಮ್ಮ ನೋಡುತ್ತ ಇರು ಮುಂದೊಂದು ದಿನ ನೀನು ಹೆಮ್ಮೆ ಪಡುವಂತಹ ಸಾಧನೆ ಮಾಡಿ ತೋರಿಸ್ತೀನಿ ಎಂದು ಭರವಸೆ ನೀಡಿದರು. ಅಲ್ಲಿಂದ ಶುರುವಾದ ಛಲ ಇಂದಿಗೂ ನಿಂತಿಲ್ಲ. 

ಇದನ್ನೂ ಓದಿ:100, 200 ಅಲ್ಲ, BEL ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ಹುದ್ದೆಗಳು ಖಾಲಿ..ಖಾಲಿ.. ಅರ್ಜಿ ಆಹ್ವಾನ

Professor VN Parthiban

1981 ರಿಂದ ಇಲ್ಲಿಯವರೆಗೆ ಅಧ್ಯಯನಗಳು ನಿಂತಿಲ್ಲ

ಅಮ್ಮನಿಗೆ ನೀಡಿದ ಭರವಸೆ ಕ್ರಮೇಣ ಉರಿಯುವ ಉತ್ಸಾಹವಾಗಿ ಅರಳಿತು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಣಿಸದ ಬಾಯಾರಿಕೆಯಾಗಿದೆ. 1981 ರಿಂದ ಇಂದಿನವರೆಗೆ ಅವರು ತಮ್ಮ ಅಧ್ಯಯನವನ್ನು ನಿಲ್ಲಿಸಿಲ್ಲ. ಆರಂಭದಲ್ಲಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಗುರಿಯಾಗಿ, ಇಂದು ಜ್ಞಾನಕ್ಕೆ  ಮಿತಿಯಿಲ್ಲದ ಹಸಿವಾಗಿ ಮಾರ್ಪಟ್ಟಿದೆ.

Advertisment

150 ಕ್ಕೂ ಹೆಚ್ಚು ಪದವಿಗಳು ಮತ್ತು ಡಿಪ್ಲೊಮಾಗಳು

ಪ್ರೊಫೆಸರ್ ಪಾರ್ಥಿಬನ್ ಸಾಧನೆಗಳು ಬೆರಗುಗೊಳಿಸುವಂತಿವೆ. ಅವರು ಇಲ್ಲಿಯವರೆಗೆ ಅವರು 150 ಕ್ಕೂ ಹೆಚ್ಚು ಪದವಿಗಳು ಮತ್ತು ಡಿಪ್ಲೊಮಾಗಳನ್ನು ಗಳಿಸಿದ್ದಾರೆ. ಅವರ ಶೈಕ್ಷಣಿಕ ಅರ್ಹತೆಗಳು ವಿಶ್ವವಿದ್ಯಾಲಯದ ಸಂಪೂರ್ಣ ಕೋರ್ಸ್ ಕ್ಯಾಟಲಾಗ್‌ಗೆ ಹೋಲಿಸಬಹುದು. ಅವರು ಅರ್ಥಶಾಸ್ತ್ರ, ಸಾರ್ವಜನಿಕ ಆಡಳಿತ, ರಾಜ್ಯಶಾಸ್ತ್ರ ಮತ್ತು ಕಾನೂನಿನಂತಹ ವಿಷಯಗಳಲ್ಲಿ ಹಲವಾರು ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಅವರು 12 ಎಂ.ಫಿಲ್ ಪದವಿಗಳನ್ನು ಗಳಿಸಿದ್ದಾರೆ. ಪ್ರಸ್ತುತ ತಮ್ಮ ನಾಲ್ಕನೇ ಪಿಎಚ್‌ಡಿ ಪದವಿಯನ್ನು ಪಡೆಯುತ್ತಿದ್ದಾರೆ.

ಸಂಬಳದ ಶೇ. 90 ಶಿಕ್ಷಣಕ್ಕಾಗಿ ಖರ್ಚು

ಪಾರ್ಥಿಬನ್ ತಮ್ಮ ಅಧ್ಯಯನಕ್ಕೆ ತಮ್ಮ ಸ್ವಂತ ಗಳಿಕೆಯಿಂದ ಹಣ ಖರ್ಚು ಮಾಡುತ್ತಾರೆ. ಅವರು ತಮ್ಮ ಸಂಬಳದ ಸರಿಸುಮಾರು ಶೇಕಡಾ 90 ರಷ್ಟು ಹಣವನ್ನು ವಿಶ್ವವಿದ್ಯಾಲಯದ ಶುಲ್ಕಗಳು, ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಕೊಳ್ಳಲು ಖರ್ಚು ಮಾಡುತ್ತಾರೆ. 

200 ಡಿಗ್ರಿ ಕನಸು

ಪ್ರೊಫೆಸರ್ ಡಾ.ವಿ.ಎನ್. ಪಾರ್ಥಿಬನ್ 150 ಡಿಗ್ರಿಗಳಿಗಿಂತ ಹೆಚ್ಚು ಗಳಿಸಿದ್ದಾರೆ. ಅವರ ಕನಸು ಅಲ್ಲಿಗೆ ನಿಲ್ಲೋದಿಲ್ಲ. 200 ಡಿಗ್ರಿಗಳಿಗಿಂತ ಹೆಚ್ಚು ಸಾಧಿಸುವುದು ಅವರ ಗುರಿಯಾಗಿದೆ.

Advertisment

ಯಾವೆಲ್ಲ ಡಿಗ್ರಿ ಪಡ್ಕೊಂಡಿದ್ದಾರೆ..? 

13 ಮಾಸ್ಟರ್ಸ್​ ಆಫ್ ಆರ್ಟ್ಸ್
8 ಮಾಸ್ಟರ್ಸ್​​ ಆಫ್ ಕಾಮರ್ಸ್​
4 ಮಾಸ್ಟರ್ಸ್​ ಆಫ್ ಸೈನ್ಸ್​ 
13 ಮಾಸ್ಟರ್ಸ್​ ಆಫ್ ಲಾ
12 ಮಾಸ್ಟರ್ಸ್​​ ಆಫ್ ಫಿಲೊಸಫಿ (MPhil)
14 ಮಾಸ್ಟರ್ಸ್ ಆಫ್ ಬ್ಯುಸಿನೆಸ್​ ಅಡ್ಮಿಸ್ಟ್ರೇಷನ್ 
20 ಪ್ರೊಫೇಷನಲ್ ಕೋರ್ಸ್
11 ಸರ್ಟಿಫಿಕೇಟ್ ಕೋರ್ಸ್​
9 PG ಡಿಪ್ಲೋಮಾ ಕೋರ್ಸ್​
ಹಲವಾರು ಡಿಪ್ಲೋಮಗಳು ಹಾಗೂ ಪಿಜಿ ಡಿಪ್ಲೋಮಾಗಳು 

ಪದವಿಗಳು ಕೇವಲ ಅರ್ಹತೆ ಇದ್ದವರಿಗೆ ಮಾತ್ರ ನಂಬಿಕೆಯನ್ನ ಪಾರ್ಥಿಬನ್ ಓದು ಪ್ರಶ್ನೆ ಮಾಡುತ್ತದೆ. ಅವರಿಗೆ ಸಿಕ್ಕ ಪ್ರತಿಯೊಂದು ಪ್ರಮಾಣಪತ್ರವು ಈಡೇರಿದ ಭರವಸೆಯಾಗಿದೆ. ಕಲಿಕೆ ನಿರಂತರವಾಗಿದೆ. ಅವರ ಪರಿಶ್ರಮವನ್ನು ನೀವು ಒಪ್ಪುತ್ತಿರೋ ಇಲ್ಲವೋ ಗೊತ್ತಿಲ್ಲ. ಆದರೆ ಸರಳ ಪ್ರಶ್ನೆ ಏನಂದರೆ ಕಲಿಯುವುದೇ ನಿಮ್ಮ ಕೆಲಸವಾಗಿರುವಾಗ ನೀವು ಏನು ಮಾಡುತ್ತಿದ್ದೀರಿ ಎಂದು. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Professor VN Parthiban
Advertisment
Advertisment
Advertisment