/newsfirstlive-kannada/media/media_files/2025/12/27/full-stack-web-development-2025-12-27-07-09-32.jpg)
ಇದು ಡಿಜಿಟಲ್​​ ಜಗತ್ತು. ಈ ಡಿಜಿಟಲ್​​​ ಯುಗದಲ್ಲಿ ಸಾಫ್ಟ್‌ವೇರ್ ಮತ್ತು ವೆಬ್ ಅಪ್ಲಿಕೇಶನ್‌ಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದ್ರಲ್ಲೂ ತಂತ್ರಜ್ಞಾನ ಕ್ಷೇತ್ರದಲ್ಲಿ 'ಫುಲ್ ಸ್ಟಾಕ್ ವೆಬ್ ಡೆವಲಪ್‌ಮೆಂಟ್' ಅನ್ನೋ ಯೂನಿಕ್​ ಕೋರ್ಸ್​ಗೆ ಭಾರೀ ಡಿಮ್ಯಾಂಡ್​ ಇದೆ. ಈ ಕೋರ್ಸ್​ ಮಾಡಿದ್ರೆ ಅತ್ಯಂತ ಆಕರ್ಷಕ ವೃತ್ತಿಜೀವನ ಕಟ್ಟಿಕೊಳ್ಳಬಹುದು.
ಫುಲ್ ಸ್ಟಾಕ್ ವೆಬ್ ಡೆವಲಪ್‌ಮೆಂಟ್ ಅಂದ್ರೇನು?
ಒಂದು ವೆಬ್ ಅಪ್ಲಿಕೇಶನ್‌ನ ಸಂಪೂರ್ಣ ಭಾಗಗಳನ್ನು ಅಂದರೆ ಫ್ರಂಟ್-ಎಂಡ್ (ಬಳಕೆದಾರರಿಗೆ ಕಾಣುವ ಇಂಟರ್ಫೇಸ್) ಮತ್ತು ಬ್ಯಾಕ್-ಎಂಡ್ (ಸರ್ವರ್ ಮತ್ತು ಡೇಟಾಬೇಸ್) ಎರಡನ್ನೂ ನಿರ್ಮಿಸುವ ಪ್ರಕ್ರಿಯೆಯನ್ನು ಫುಲ್ ಸ್ಟಾಕ್ ವೆಬ್ ಡೆವಲಪ್‌ಮೆಂಟ್ ಎನ್ನಲಾಗುತ್ತದೆ. ಒಬ್ಬ ಫುಲ್ ಸ್ಟಾಕ್ ಡೆವಲಪರ್‌ಗೆ HTML, CSS, JavaScript ನಂತಹ ಫ್ರಂಟ್-ಎಂಡ್ ತಂತ್ರಜ್ಞಾನಗಳು ಹಾಗೂ Node.js, MongoDB, SQL ನಂತಹ ಬ್ಯಾಕ್-ಎಂಡ್ ತಂತ್ರಜ್ಞಾನಗಳ ಸಂಪೂರ್ಣ ಅರಿವಿರುತ್ತದೆ.
ಇದನ್ನೂ ಓದಿ: ಕೆಲಸ ಹುಡುಕುತ್ತಿರೋರಿಗೆ ಗುಡ್​ನ್ಯೂಸ್.. ಇವತ್ತೇ ಅಪ್ಲೇ ಮಾಡಿ..!
ಭಾರತದಲ್ಲಿ ವಿವಿಧ ಹಂತಗಳಲ್ಲಿ ಈ ಕೋರ್ಸ್‌ಗಳನ್ನು ಮಾಡಬಹುದು. ವಿಶ್ವವಿದ್ಯಾಲಯಗಳು ಬಿ.ಟೆಕ್ ಅಥವಾ ಎಂ.ಎಸ್ಸಿ (ಫುಲ್ ಸ್ಟಾಕ್ ಸ್ಪೆಷಲೈಸೇಶನ್) ಕೋರ್ಸ್​ಗಳು ಶುರು ಮಾಡಿವೆ. ಅಷ್ಟೇ ಅಲ್ಲ 3 ರಿಂದ 12 ತಿಂಗಳ ಅವಧಿಯ ಕೋರ್ಸ್‌ಗಳು ಈ ಸ್ಪೆಷಲೈಜೇಷನ್​​ನಲ್ಲಿ ಇವೆ.
ಪ್ರವೇಶಾತಿ ಅರ್ಹತೆಗಳು ಏನು?
B.Tech/BCA ಮಾಡಲು ದ್ವಿತೀಯ ಪಿಯುಸಿ (10+2) ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಉತ್ತೀರ್ಣರಾಗಿರಬೇಕು. ಸ್ನಾತಕೋತ್ತರ ಪದವಿ (M.Sc) ಮಾಡಲು ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರಬೇಕು. ಸರ್ಟಿಫಿಕೇಟ್ ಕೋರ್ಸ್​​ಗೆ ಯಾವುದೇ ಪದವೀಧರರು ಅಥವಾ ಪ್ರೋಗ್ರಾಮಿಂಗ್‌ನಲ್ಲಿ ಆಸಕ್ತಿ ಇರುವ ಪಿಯುಸಿ ಪಾಸಾದವರು ಸೇರಬಹುದು.
ಇದನ್ನೂ ಓದಿ:ಹೊಸ ವರ್ಷದಲ್ಲಿ 6 ದೊಡ್ಡ ಬದಲಾವಣೆ.. WhatsApp, ಇನ್‌ಸ್ಟಾ, ಟೆಲಿಗ್ರಾಮ್ ಬಳಸೋರು ಕೂಡ ಓದಲೇಬೇಕು..!
ಕರ್ನಾಟಕದ ಹಲವು ಪ್ರತಿಷ್ಠಿತ ಸಂಸ್ಥೆಗಳು ಈ ಕೋರ್ಸ್ ಅನ್ನು ಕಲಿಸುತ್ತಿವೆ. ಜೈನ್ ವಿಶ್ವವಿದ್ಯಾಲಯ (ಬೆಂಗಳೂರು) 2 ವರ್ಷದ ಎಂ.ಎಸ್ಸಿ (ಫುಲ್ ಸ್ಟಾಕ್) ಕೋರ್ಸ್ ನೀಡುತ್ತಿದ್ದು, ಒಟ್ಟು ಶುಲ್ಕ ಸುಮಾರು ₹3.20 ಲಕ್ಷ ರೂ. ಇದೆ. ಯೆನೆಪೋಯಾ ವಿಶ್ವವಿದ್ಯಾಲಯ (ಬೆಂಗಳೂರು) ಫುಲ್ ಸ್ಟಾಕ್ ಮತ್ತು ಡೆವ್‌ಆಪ್ಸ್ ಒಳಗೊಂಡ ಬಿಸಿಎ (BCA) ಕೋರ್ಸ್ ಕಲಿಸುತ್ತಿದ್ದು, ಸುಮಾರು ₹3.21 ಲಕ್ಷ ಶುಲ್ಕವಿದೆ. ಅಲಯನ್ಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಬಿ.ಟೆಕ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಫುಲ್ ಸ್ಟಾಕ್ ವಿಷಯವನ್ನು ವಿಶೇಷ ಅಧ್ಯಯನವಾಗಿ ನೀಡುತ್ತಿದೆ. ರೈ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 4 ತಿಂಗಳ ವಿಶೇಷ ಡಿಪ್ಲೊಮಾ ಕೋರ್ಸ್ ಲಭ್ಯವಿದೆ. ವಿಶ್ವವಿದ್ಯಾಲಯ ಪದವಿ ₹2 ಲಕ್ಷದಿಂದ ₹15 ಲಕ್ಷದವರೆಗೆ ಇದೆ. ಖಾಸಗಿ ಡಿಪ್ಲೊಮಾ ₹25,000 ದಿಂದ ₹3 ಲಕ್ಷದವರೆಗೆ ಇದೆ.
ವೃತ್ತಿ ಅವಕಾಶಗಳು ಹೇಗಿದೆ
ಈ ಕೋರ್ಸ್ ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳು ಈ ಕೆಳಗಿನ ಹುದ್ದೆಗಳನ್ನು ಅಲಂಕರಿಸಬಹುದು. ಫುಲ್ ಸ್ಟಾಕ್ ಡೆವಲಪರ್, ಫ್ರಂಟ್-ಎಂಡ್ / ಬ್ಯಾಕ್-ಎಂಡ್ ಎಂಜಿನಿಯರ್, ಸಾಫ್ಟ್‌ವೇರ್ ಡೆವಲಪರ್, ವೆಬ್ ಅಪ್ಲಿಕೇಶನ್ ಡೆವಲಪರ್ ಆಗಬಹುದು. ಮಾಹಿತಿ ತಂತ್ರಜ್ಞಾನ (IT) ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಫ್ರೀಲ್ಯಾನ್ಸ್ ಮಾರುಕಟ್ಟೆಯಲ್ಲಿ ಇವರಿಗೆ ಭಾರಿ ಬೇಡಿಕೆಯಿದೆ. ಆರಂಭಿಕವಾಗಿ ವಾರ್ಷಿಕ ಸರಾಸರಿ ₹6 ಲಕ್ಷದವರೆಗೂ ವೇತನ ಪಡೆಯುವ ಅವಕಾಶವಿರುತ್ತದೆ.
ಇದನ್ನೂ ಓದಿ:Mahindra XUV 400: ಮಹೀಂದ್ರಾ ಕಾರಿನ ಮೇಲೆ ರೂ. 4.45 ಲಕ್ಷ ರಿಯಾಯಿತಿ! ಬಂಪರ್ ಆಫರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us