ಕೆಲಸ ಹುಡುಕುತ್ತಿರೋರಿಗೆ ಗುಡ್​ನ್ಯೂಸ್.. ಇವತ್ತೇ ಅಪ್ಲೇ ಮಾಡಿ..!

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರೋ ಆರ್ಥಿಕ ವ್ಯವಹಾರಗಳ ಇಲಾಖೆ ಯುವ ವೃತ್ತಿಪರರು ಮತ್ತು ಸಲಹೆಗಾರರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಸಂಪೂರ್ಣವಾಗಿ ಒಪ್ಪಂದದ ಆಧಾರದ ಮೇಲೆ ಇರಲಿದ್ದು, ಆರಂಭಿಕ ನೇಮಕಾತಿಯು ಒಂದು ವರ್ಷದ್ದಾಗಿರುತ್ತದೆ.

author-image
Ganesh Kerekuli
JOB (1)
Advertisment

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರೋ ಆರ್ಥಿಕ ವ್ಯವಹಾರಗಳ ಇಲಾಖೆ ಯುವ ವೃತ್ತಿಪರರು ಮತ್ತು ಸಲಹೆಗಾರರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಸಂಪೂರ್ಣವಾಗಿ ಒಪ್ಪಂದದ ಆಧಾರದ ಮೇಲೆ ಇರಲಿದ್ದು, ಆರಂಭಿಕ ನೇಮಕಾತಿಯು ಒಂದು ವರ್ಷದ್ದಾಗಿರುತ್ತದೆ. ಅಭ್ಯರ್ಥಿಗಳ ಕಾರ್ಯವೈಖರಿಯನ್ನು ಆಧರಿಸಿ ಈ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಆಕರ್ಷಕ ವೇತನ ದೊರೆಯಲಿದೆ.

ಒಟ್ಟು ಎಷ್ಟು ಹುದ್ದೆಗಳು ಇವೆ? 

ಒಟ್ಟು 57 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆಯು ಮುಂದಾಗಿದ್ದು, ಮೂಲಸೌಕರ್ಯ, ಬಜೆಟ್, ಹಣಕಾಸು ಮಾರುಕಟ್ಟೆಗಳು ಮತ್ತು ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳಂತಹ ಪ್ರಮುಖ ವಿಭಾಗಗಳಲ್ಲಿ ಕೆಲಸ ಮಾಡಲು ಅವಕಾಶವಿದೆ. ವಾರ್ಷಿಕವಾಗಿ ಸುಮಾರು 18 ಲಕ್ಷ ರೂಪಾಯಿಗಳವರೆಗಿನ ವೇತನ ಪ್ಯಾಕೇಜ್ ಪಡೆಯುವ ಈ ಸುವರ್ಣಾವಕಾಶವು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಲಭ್ಯವಿದೆ.

ಇದನ್ನೂ ಓದಿ: ಮೆಡಿಕಲ್, ಇಂಜಿನಿಯರಿಂಗ್ ಕೋರ್ಸ್ ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್ ಸ್ಕೀಮ್ : ಐದು ವರ್ಷದವರೆಗೂ ಸ್ಕಾಲರ್ ಷಿಪ್

ಯುವ ವೃತ್ತಿಪರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 30 ವರ್ಷದೊಳಗಿನವರಾಗಿರಬೇಕು. ಅರ್ಥಶಾಸ್ತ್ರ, ಹಣಕಾಸು ಅಥವಾ ಐಟಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ MBA (ಹಣಕಾಸು)/LLM ಹೊಂದಿರಬೇಕು. ಇವರಿಗೆ ಮಾಸಿಕ 70,000 ರೂ. ವೇತನ ನಿಗದಿಪಡಿಸಲಾಗಿದೆ. ಇನ್ನು 3 ರಿಂದ 5 ವರ್ಷಗಳ ಕೆಲಸದ ಅನುಭವ ಹೊಂದಿರುವವರು 'ಸಲಹೆಗಾರ' ಹುದ್ದೆಗೆ ಅರ್ಜಿ ಸಲ್ಲಿಸಬಹುದು, ಇವರಿಗೆ ತಿಂಗಳಿಗೆ 1 ಲಕ್ಷ ರೂ. ಸಂಭಾವನೆ ನೀಡಲಾಗುತ್ತದೆ.

ಇದನ್ನೂ ಓದಿ: Bus accident: ಮದ್ವೆ ತಯಾರಿಯಲ್ಲಿದ್ದರು.. ಮಗಳ ಕೊರಳಿನಲ್ಲಿದ್ದ ಸರ ನೋಡಿ ಮೃತದೇಹ ಪತ್ತೆ ಹಚ್ಚಿದ ತಂದೆ

ಅನುಭವದ ಆಧಾರದ ಮೇಲೆ ಹೆಚ್ಚಿನ ವೇತನದ ಹುದ್ದೆಗಳೂ ಲಭ್ಯವಿದ್ದು, 5 ರಿಂದ 9 ವರ್ಷಗಳ ಅನುಭವವಿರುವವರು 'ಹಿರಿಯ ಸಲಹೆಗಾರ' ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಇವರಿಗೆ ಮಾಸಿಕ 1.2 ಲಕ್ಷ ರೂ. ವೇತನವಿರುತ್ತದೆ. ಇದರೊಂದಿಗೆ ವಿಶೇಷ ಯೋಜನೆಗಳಿಗಾಗಿ ನೇಮಕಗೊಳ್ಳುವ 'ವಿಶೇಷ ನಿಯೋಜನೆ ಸಲಹೆಗಾರರು' ತಿಂಗಳಿಗೆ 1.5 ಲಕ್ಷ ರೂಪಾಯಿಗಳ ಅತಿ ಹೆಚ್ಚಿನ ಸಂಭಾವನೆಯನ್ನು ಪಡೆಯಲಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 27 ರ ಸಂಜೆ 5 ಗಂಟೆಯೊಳಗೆ ಅಧಿಕೃತ ಪೋರ್ಟಲ್ mofapp.nic.in/cadre/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸಚಿವಾಲಯವು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿದ ನಂತರ, ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ ಸಂದರ್ಶನ ಅಥವಾ ವೈಯಕ್ತಿಕ ಸಂವಾದಕ್ಕೆ ಕರೆಯಲಿದೆ. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ dea.gov.in ಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ದಯಾಳ್​​ಗೆ ಕೋರ್ಟ್ ಶಾಕ್.. ಈತನ ಉಳಿಸಿಕೊಂಡು ತಪ್ಪು ಮಾಡ್ತಾ RCB?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Recruitment Job eduction
Advertisment