ದಯಾಳ್​​ಗೆ ಕೋರ್ಟ್ ಶಾಕ್.. ಈತನ ಉಳಿಸಿಕೊಂಡು ತಪ್ಪು ಮಾಡ್ತಾ RCB?

ಬಂಧನದ ಭೀತಿಯಿಂದ ಪಾರಾಗಿದ್ದ ಯಶ್​ ದಯಾಳ್ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವತ್ತು ಬಚಾವ್ ಆಗಿ ನೆಮ್ಮದಿಯಲ್ಲಿದ್ದ ಯಶ್​ ದಯಾಳ್​ಗೆ, ಈಗ ಮತ್ತೆ ಅರೆಸ್ಟ್​ ಆಗೋ ಭೀತಿ ಶುರುವಾಗಿದೆ. ಯಶ್​ ದಯಾಳ್​ ಪೋಕ್ಸೋ ಬೇಲ್ ಅರ್ಜಿ ವಜಾ ಆಗಿದ್ದು, ಯಾವುದೇ ಕ್ಷಣದಲ್ಲೂ ಅರೆಸ್ಟ್ ಆಗೋ ಸಾಧ್ಯತೆ ಹೆಚ್ಚಿದೆ.

author-image
Ganesh Kerekuli
Yash Dayal (3)
Advertisment
  • RCB ವೇಗಿ ಯಶ್​ ದಯಾಳ್​ ಸದ್ಯದಲ್ಲೇ ಅರೆಸ್ಟ್..!
  • POCSO ಕೋರ್ಟ್​ನಿಂದ ಬೇಲ್ ಅರ್ಜಿ ವಜಾ..!
  • ಆರ್​​ಸಿಬಿ ವೇಗಿ ವಿರುದ್ಧ ಪೋಕ್ಸೋ ಕಾಯ್ದೆಯಡಿ FIR

ಯಶ್​ ದಯಾಳ್​. ಬೆಂಕಿ ಉಗುಳುವ ಬೌಲರ್​​. ಡೆತ್​ ಓವರ್ ಸ್ಪೆಷಲಿಸ್ಟ್.  ಆರ್​ಸಿಬಿ ಪಾಲಿನ ಆಪತ್ಭಾಂಧವ. 18 ವರ್ಷಗಳ ಬಳಿಕ ಚಾಂಪಿಯನ್​ ಟೀಮ್ ಆರ್​ಸಿಬಿಯ ಹೀರೋ. ತನ್ನ ಡಿಫರೆಂಟ್ ವೇರಿಯೇಷನ್ಸ್​ ಬೌಲಿಂಗ್​​ನಿಂದ ಕೋಟ್ಯಂತರ ಅಭಿಮಾನಿಗಳ ಹೀರೋ ಎನಿಸಿಕೊಂಡಿದ್ದ ಯಶ್​​ ದಯಾಳ್, ಈಗ ವಿವಾದಗಳಿಂದಲೇ ಸುದ್ದಿಯಾಗಿದ್ದಾರೆ. ಬಂಧನದ ಭೀತಿಯಲ್ಲಿದ್ದಾರೆ. 

ಅಪ್ರಾಪ್ತೆ ಬಾಲಕಿ ರೇಪ್ ಕೇಸ್ ಪ್ರಕರಣದಲ್ಲಿ ಆರ್​ಸಿಬಿ ವೇಗಿ ಯಾವುದೇ ಕ್ಷಣದಲ್ಲೂ ಅರೆಸ್ಟ್ ಆಗಬಹುದು. ಈಗಾಗಲೇ ರಾಜಸ್ಥಾನದ POCSO ಕೋರ್ಟ್, ದಯಾಳ್ ಬೇಲ್ ಅರ್ಜಿ ವಜಾ ಮಾಡಿದೆ. ಆರ್​ಸಿಬಿ ವೇಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವೇಳೆ ದಯಾಳ್ ಅರೆಸ್ಟ್ ಆಗಿದ್ದೇ ಆದ್ರೆ ಆರ್​ಸಿಬಿ ದಯಾಳ್​ರನ್ನ ಮುಂಬರುವ ಐಪಿಎಲ್​​ನಲ್ಲಿ ಆಡಿಸೋದು ಅನುಮಾನ. ಯಶ್ ದಯಾಳ್ ಮೇಲೆ ಆರೋಪ ಇರೋದು ಗೊತ್ತಿದ್ರೂ ಆರ್​ಸಿಬಿ ಎಡಗೈ ವೇಗಿಯನ್ನ ರೀಟೇನ್ ಮಾಡಿರೋದು ಆಶ್ಚರ್ಯ ಮೂಡಿಸಿದೆ. 

ಇದನ್ನೂ ಓದಿ: ಮೈದಾನಗಳು ಮೌನವಾದವು.. 2025ರಲ್ಲಿ ಭಾರತೀಯ ಕ್ರಿಕೆಟ್​ನ ಒಂದು ‘ಮಹಾನ್ ಯುಗ’ ಕೊನೆ..!

YASH_DAYAL_New

ಯಶ್ ದಯಾಳ್ ರೀಪ್ಲೇಸ್​ಮೆಂಟ್ ಯಾರು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿರೋ ದೊಡ್ಡ ಸವಾಲು ಇದೇ ನೋಡಿ. ಕಳೆದೆರೆಡು ಸೀಸನ್​ಗಳಲ್ಲಿ ಯಶ್ ದಯಾಳ್, ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ರು. ನ್ಯೂ ಬಾಲ್ ಮತ್ತು ಡೆಥ್ ಓವರ್​ಗಳಲ್ಲಿ ದಯಾಳ್, ಇಂಪ್ರೆಸಿವ್ ಪರ್ಫಾಮೆನ್ಸ್ ನೀಡಿದ್ರು. ಉತ್ತಮ ಬೌಲಿಂಗ್ ಎಕಾನಮಿಯನ್ನೂ ಕಾಯ್ದುಕೊಂಡಿದ್ದರು. ಆದ್ರೀಗ ದಯಾಳ್ ಅಲಭ್ಯತೆಯಲ್ಲಿ ಅವ್ರ ಸ್ಥಾನವನ್ನ ರೀಪ್ಲೇಸ್ ಮಾಡೋದು ಯಾರು..? ಅನ್ನೋದು ಆರ್​ಸಿಬಿ ಮ್ಯಾನೇಜ್ಮೆಂಟ್ ಚಿಂತಿಸಬೇಕಿದೆ. ಒಬ್ಬ ಒಳ್ಳೆ ಪ್ಲೇಯರ್ ಇಲ್ದಿದ್ರೂ, ತಂಡದ ಬ್ಯಾಲೆನ್ಸ್ ತಪ್ಪುತ್ತದೆ ಅನ್ನೋದು ಗೊತ್ತೇ ಇದೆ.

ಆರ್​​ಸಿಬಿ ವೇಗಿ ವಿರುದ್ಧ ಪೋಕ್ಸೋ ಕಾಯ್ದೆಯಡಿ FIR

ಅತ್ಯಾಚಾರ, ವಂಚನೆ ಪ್ರಕರಣ ಸಂಬಂಧ ರೀಲಿಫ್ ಪಡೆದಿದ್ದ ಯಶ್​ ದಯಾಳ್​, ಈಗ ಮತ್ತೊಂದು ಅತ್ಯಾಚಾರದ ಕೇಸ್​​​ನಲ್ಲಿ ಸಿಲುಕಿದ್ದಾರೆ. ರಾಜಸ್ಥಾನ ಮೂಲದ ಅಪ್ತಾಪ್ತೆ ಹುಡುಗಿಗೆ ನಂಬಿಸಿ, ಪದೇ ಪದೇ ಅತ್ಯಾಚಾರ ಎಸೆಗಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೇಸ್ ದಾಖಲಾಗಿದ್ದು, ಸಂತ್ರಸ್ತೆಯ ದೂರಿನಾನ್ವಯ ಜೈಪುರದ ಸಂಗನೇರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಇದರೊಂದಿಗೆ ಆರ್​ಸಿಬಿ ವೇಗಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: 15 ಸಿಕ್ಸರ್​​, 16 ಬೌಂಡರಿ! ವೈಭವ್ ಆಟದಿಂದ ಹಿರಿಯ ಆಟಗಾರರಿಗೆ ನಡುಕ..!

RCB ಸ್ಟಾರ್​ ಬೌಲರ್​ ಯಶ್​ ದಯಾಳ್​ ವಿರುದ್ಧ ಯುವತಿ ಗಂಭೀರ ಆರೋಪ.. ಏನದು?

17 ವರ್ಷದ ಅಪ್ರಾಪ್ತೆ ಯಶ್​ ದಯಾಳ್​ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾಳೆ. ಜೈಪುರಕ್ಕೆ ಬಂದಿದ್ದ ಯಶ್ ದಯಾಳ್, ವೃತ್ತಿ ಸಲಹೆ ನೆಪದಲ್ಲಿ ಸೀತಾಪುರದ ಹೋಟೆಲ್‌ಗೆ ಆಹ್ವಾನಿಸಿದ್ದರು. ಅಲ್ಲಿ ಮೊದಲ ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ರು ಎಂದಿರುವ ಯುವತಿ ಕ್ರಿಕೆಟ್​​ನಲ್ಲಿ ವೃತ್ತಿ ಜೀವನ ಮಾಡಿಕೊಡುವುದಾಗಿ ನಂಬಿಸಿ, ನಿರಂತರ 2 ವರ್ಷದಿಂದ ಅತ್ಯಾಚಾರ ಮಾಡಿದ್ದಾಗಿ ದೂರಿದ್ದಾರೆ. ಅಷ್ಟೇ ಅಲ್ಲ.! 2025ರ ಐಪಿಎಲ್ ಪಂದ್ಯಾವಳಿ ವೇಳೆಯೂ ಅತ್ಯಾಚಾರ ಮಾಡಿದ್ದಾಗಿ ಆರೋಪ ಮಾಡಿದ್ದಾರೆ.

ಉತ್ತರಪ್ರದೇಶದ ಗಾಜಿಯಾಬಾದ್‌ ಮಹಿಳೆ, ಯಶ್ ದಯಾಳ್ ವಿರುದ್ಧ ಸಿಎಂ ಪೋರ್ಟಲ್​​ನಲ್ಲಿ ದೂರು ದಾಖಲಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ 5 ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸಿದ ಸಂಬಂಧ ಎಫ್​ಐಆರ್​ ದಾಖಲಾಗಿತ್ತು. ಆದ್ರೆ, ಬಂಧನಕ್ಕೆ ತಡೆ ನೀಡುವಂತೆ ಯಶ್​​ ದಯಾಳ್‌, ಅಲಹಾಬಾದ್‌ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಅಲಹಾಬಾದ್‌ ಹೈಕೋರ್ಟ್‌ ಬಂಧನಕ್ಕೆ ತಡೆ ನೀಡಿತ್ತು. ಇದೀಗ ದಯಾಳ್‌ ವಿರುದ್ಧ ಪೋಕ್ಸೋ ಕೇಸ್​ ದಾಖಲಾಗಿರುವುದು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಒಂದು ಕೇಸ್​​ನಲ್ಲಿ ಬಚಾವ್ ಆಗಿಬಿಟ್ಟೆ ಎಂಬ ಸಂತಸದಲ್ಲಿದ್ದ ಯಶ್​ ದಯಾಳ್​​ಗೆ, ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಷ್ಟೇ ಅಲ್ಲ.! ಯಾವುದೇ ಕ್ಷಣದಲ್ಲಾದರು ಅರೆಸ್ಟ್ ಆಗೋದ್ರಲ್ಲಿ ಡೌಟೇ ಇಲ್ಲ.

ಇದನ್ನೂ ಓದಿ: SUPER SIX: ಸ್ಮೃತಿ ಮಂದಾನಗೆ ಬಿಗ್ ಶಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Yash Dayal
Advertisment