Advertisment

ವಿಶ್ವವಿದ್ಯಾಲಯದ ನಿರ್ಲಕ್ಷ್ಯ.. 11 ತಿಂಗಳು ಕಳೆದರೂ B.Ed ಫಲಿತಾಂಶ ಇಲ್ಲ, ವಿದ್ಯಾರ್ಥಿಗಳು ಆಕ್ರೋಶ

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ 2024-25ನೇ ಸಾಲಿನ ಬಿಇಡ್ 2ನೇ ಸೆಮಿಸ್ಟರ್ ಹಾಗೂ 4ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿ, ಅಂಕಪಟ್ಟಿ ನೀಡುವಂತೆ ಆಗ್ರಹಿಸಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

author-image
Bhimappa
KLB_VV
Advertisment

ಕಲಬುರಗಿ: 2024-25ನೇ ಸಾಲಿನ ಬಿಇಡಿ ಫಲಿತಾಂಶ ಪ್ರಕಟಿಸದ ಹಿನ್ನೆಲೆಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿರುದ್ಧ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

Advertisment

ಬಿಇಡಿ ವಿದ್ಯಾರ್ಥಿಗಳು ನಗರದ ತಿಮ್ಮಪುರಿ ಸರ್ಕಲ್​ನಿಂದ ಡಿಸಿ ಕಚೇರಿ ಮುಂಭಾಗದವರೆಗೂ ಪ್ರತಿಭಟನೆ ನಡೆಸಿ, ರಸ್ತೆ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಲ್ಬರ್ಗಾ ವಿವಿ ಕುಲಪತಿ, ಕುಲಸಚಿವರು ವಿರುದ್ಧ ಘೋಷಣೆ ಕೊಗಿ ಫಲಿತಾಂಶ ಪ್ರಕಟಿಸಿ, ಆದಷ್ಟು ಬೇಗ ಅಂಕಪಟ್ಟಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಟಾಸ್ ಸೋತ ಸೂರ್ಯಕುಮಾರ್​.. ಪ್ಲೇಯಿಂಗ್- 11ನಲ್ಲಿ ಯಾರ್​ ಯಾರಿಗೆ ಸ್ಥಾನ?

KLB_VV_1

ವಿದ್ಯಾರ್ಥಿಗಳು ಪರೀಕ್ಷೆ ಬರೆದ ಮೇಲೆ 45 ದಿನಗಳ ಒಳಗಾಗಿ ವಿವಿಯು ರಿಸಲ್ಟ್​ ಅನ್ನು ಅನೌನ್ಸ್​ ಮಾಡಬೇಕು. ಆದರೆ 11 ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸದೇ ವಿವಿಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ವಿದ್ಯಾರ್ಥಿಗಳು ವರ್ಷವಿಡೀ ಕಾಯುವ ಸ್ಥಿತಿ ಬಂದಿದ್ದು ನಮ್ಮ ಭವಿಷ್ಯವನ್ನು ಕತ್ತಲೆ ಕೂಪಕ್ಕೆ ತಳ್ಳಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.   

Advertisment

ಈ ಮೊದಲೇ ವಿವಿಗೆ ಹಲವು ಬಾರಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನಾ ಆಗಿಲ್ಲ. ಫಲಿತಾಂಶ ಘೋಷಣೆ ವಿಳಂಬದಿಂದ ಶಿಕ್ಷಕರ ಆರ್ಹತಾ ಪರೀಕ್ಷೆ (ಟಿಇಟಿ)ಗೆ ಅರ್ಜಿ ಸಲ್ಲಿಸಲು ಆಗಿಲ್ಲ. ಇದರಿಂದ ಶಿಕ್ಷಕರಾಗುವ ಎಲ್ಲಾ ವಿದ್ಯಾರ್ಥಿಗಳ ಕನಸು ನುಚ್ಚುನೂರಾಗಿದೆ. ಇನ್ನು ಎಲ್ಲ ಸೆಮಿಸ್ಟರ್​ಗಳ ಅಂಕಪಟ್ಟಿ, ಪ್ರಮಾಣ ಪತ್ರಗಳನ್ನು ಆದಷ್ಟು ಬೇಗನೇ ವಿವಿ ವಿತರಣೆ ಮಾಡಬೇಕು. ಜೊತೆಗೆ ಶುಲ್ಕ ಕಡಿಮೆ ಮಾಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kalaburagi news Education department
Advertisment
Advertisment
Advertisment