Advertisment

ಮತ್ತೆ ಟಾಸ್ ಸೋತ ಸೂರ್ಯಕುಮಾರ್​.. ಪ್ಲೇಯಿಂಗ್- 11ನಲ್ಲಿ ಯಾರ್​ ಯಾರಿಗೆ ಸ್ಥಾನ?

ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್​, ತಿಲಕ್ ವರ್ಮಾ ಬ್ಯಾಟಿಂಗ್ ಅಬ್ಬರ ಮುಂದುವರೆಯುವ ನಿರೀಕ್ಷೆ ಇದೆ. ಸೂರ್ಯಕುಮಾರ್ ಬ್ಯಾಟಿಂಗ್ ಕೂಡ ಮಧ್ಯಮ ಕ್ರಮಾಂಕದಲ್ಲಿ ತಂಡದ ಶಕ್ತಿಯಾಗಿರುತ್ತದೆ.

author-image
Bhimappa
SURYA_KUMAR (2)
Advertisment

ಎರಡನೇ ಟಿ20 ಪಂದ್ಯದಲ್ಲಿ ಕ್ಯಾಪ್ಟನ್​ ಸೂರ್ಯಕುಮಾರ್ ಯಾದವ್ ಅವರು ಮತ್ತೆ ಟಾಸ್ ಸೋತಿದ್ದಾರೆ. ಇದರಿಂದ ಮೊದಲ ಬ್ಯಾಟಿಂಗ್ ಮಾಡಲಿದ್ದಾರೆ. ಟಾಸ್ ಗೆದ್ದಿರುವ ಆಸಿಸ್​ ಬೌಲಿಂಗ್ ಮಾಡಲಿದೆ. 

Advertisment

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್​ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ. ಟೀಮ್ ಇಂಡಿಯಾದ ಮೊದಲ ಬ್ಯಾಟಿಂಗ್ ಬರಲಿದೆ. ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಸೂರ್ಯಕುಮಾರ್ ಅವರು ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಫಾರ್ಮ್​ಗೆ ಮರಳಿದ್ದರು. ಆದರೆ ಮಳೆ ಕಾರಣ ಮ್ಯಾಚ್ ರದ್ದು ಆಯಿತು. ಇಂದು ಅವರ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಓಪನರ್ ಆಗಿ ಕ್ರೀಸ್​ಗೆ ಆಗಮಿಸಲಿದ್ದು ಶುಭ್​ಮನ್ ಗಿಲ್ ಸಾಥ್ ಕೊಡಲಿದ್ದಾರೆ. 

ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್​, ತಿಲಕ್ ವರ್ಮಾ ಬ್ಯಾಟಿಂಗ್ ಅಬ್ಬರ ಮುಂದುವರೆಯುವ ನಿರೀಕ್ಷೆ ಇದೆ. ಸೂರ್ಯಕುಮಾರ್ ಬ್ಯಾಟಿಂಗ್ ಕೂಡ ಮಧ್ಯಮ ಕ್ರಮಾಂಕದಲ್ಲಿ ತಂಡದ ಶಕ್ತಿಯಾಗಿರುತ್ತದೆ. ಶಿವಂ ದುಬೆ, ಅಕ್ಷರ್ ಪಟೇಲ್​ ತಂಡದಲ್ಲಿ ಆಲ್​ರೌಂಡರ್​ಗಳಾಗಿ ಮೈದಾನಕ್ಕೆ ಇಳಿಯಲಿದ್ದಾರೆ. 

ಇದನ್ನೂ ಓದಿ: ಚೇಸಿಂಗ್​ನಲ್ಲಿ 6,000 ರನ್​ ಪೂರೈಸಿದ ವಿರಾಟ್.. ODI ಅಲ್ಲಿ ಕಿಂಗ್ ಕೊಹ್ಲಿ ಅರ್ಧಶತಕಗಳೆಷ್ಟು..?

Advertisment

ABHISHEK_SHARMA (8)

ಬೌಲಿಂಗ್​ನಲ್ಲಿ ಸ್ಟಾರ್ ಬೌಲರ್​ ಬುಮ್ರಾ ತಂಡದ ಮುಖ್ಯ ಬೆನ್ನೆಲುಬು ಆಗಿದ್ದಾರೆ. ಬೂಮ್ರಾಗೆ ಹರ್ಷಿತ್ ರಾಣಾ ಸಾಥ್ ಕೊಡಲಿದ್ದಾರೆ. ಕುಲ್​ದೀಪ್ ಯಾದವ್, ವರುಣ್ ಚಕ್ರವರ್ತಿ ಸ್ಪಿನ್ ಮ್ಯಾಜಿಕ್ ಮಾಡಿದರೆ ಭಾರತಕ್ಕೆ ಗೆಲುವು ಗ್ಯಾರಂಟಿ. 

ಟೀಮ್ ಇಂಡಿಯಾದ ಪ್ಲೇಯಿಂಗ್- 11

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ಕ್ಯಾಪ್ಟನ್), ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲ್​ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Surya kumar Yadav IND vs AUS
Advertisment
Advertisment
Advertisment