/newsfirstlive-kannada/media/media_files/2025/10/26/kohli_rohit_aus-2025-10-26-12-39-16.jpg)
ಏಕದಿನ ಸರಣಿಯಲ್ಲಿ ಒಂದಲ್ಲ, ಸತತ ಎರಡು ಬಾರಿ ಡಕೌಟ್ ಅಗಿ ಮುಜುಗರಕ್ಕೀಡಾಗಿದ್ದ ವಿರಾಟ್ ಕೊಹ್ಲಿ, ಸಿಡ್ನಿಯಲ್ಲಿ ಮಿಂಚಿದ್ದಾರೆ. ಎಸ್​​ಸಿಜಿಯಲ್ಲಿ ಜಬರ್ದಸ್ತ್ ಇನ್ನಿಂಗ್ಸ್​ ಆಡಿದ ವಿರಾಟ್, ಮತ್ತೆ ತನ್ನ ಬ್ಯಾಟಿಂಗ್ ಸಾಮರ್ಥ್ಯ ತೋರಿಸಿದ್ದಾರೆ. ಕೊಹ್ಲಿಯ ಜವಾಬ್ದಾರಿಯು ಬ್ಯಾಟಿಂಗ್​​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಶುಭ್ಮನ್ ಗಿಲ್ ಔಟಾಗ್ತಿದಂತೆ ಕ್ರೀಸ್​​​ಗೆ ಬಂದ ವಿರಾಟ್​​​​ ಕೊಹ್ಲಿಗೆ, ಸಿಡ್ನಿ ಮೈದಾನದಲ್ಲಿ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಕೊಹ್ಲಿ..ಕೊಹ್ಲಿ.. ಅಂತ ಕೂಗಲಾರಂಭಿಸಿದ ಅಭಿಮಾನಿಗಳ ಹರ್ಷೋದ್ಘಾರ, ಮುಗಿಲು ಮುಟ್ಟಿತ್ತು.
/filters:format(webp)/newsfirstlive-kannada/media/media_files/2025/09/07/virat-kohli-10-2025-09-07-13-16-18.jpg)
ಮೊದಲ ರನ್​ಗಳಿಸುತ್ತಿದಂತೆ ಕೊಹ್ಲಿ ​​​​​​​​​​​​ಮುಖದಲ್ಲಿ ಮಂದಹಾಸ
ಅದು 10.3ನೇ ಓವರ್. ವೇಗಿ ಜೋಷ್ ಹೇಝಲ್​ವುಡ್ ಬೌಲಿಂಗ್​ನಲ್ಲಿ ಕೊಹ್ಲಿ ಮೊದಲ ರನ್​ಗಳಿಸುತ್ತಿದಂತೆ, ಅಭಿಮಾನಿಗಳು ಬಿಗ್ ಚಿಯರ್ ಮಾಡಿದ್ರು. ಸತತ ಎರಡು ಬಾರಿ ಡಕೌಟ್​ ಆಗಿದ್ದ ಕೊಹ್ಲಿ ಮುಖದಲ್ಲೂ, ನಗು ಮೂಡಿತು. ​
ಏಕದಿನ ಕ್ರಿಕೆಟ್​​ನಲ್ಲಿ 75ನೇ ಅರ್ಧಶತಕ ದಾಖಲು..!
ಸಿಂಗಲ್ಸ್, ಡಬಲ್ಸ್​​​ ಆಡುತ್ತಾ ಸ್ಟ್ರೈಕ್​ರೊಟೇಟ್ ಮಾಡುತ್ತಿದ್ದ ವಿರಾಟ್, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ರು. ಒತ್ತಡದಲ್ಲೂ ಫ್ರೀಯಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಕೊಹ್ಲಿ, 56 ಎಸೆತಗಳಲ್ಲಿ ಆಕರ್ಷಕ ಅರ್ಧಶತ ಸಿಡಿಸಿದ್ರು. ಇದು ಏಕದಿನ ಕ್ರಿಕೆಟ್​​ನಲ್ಲಿ ಕಿಂಗ್ ಕೊಹ್ಲಿಯ 75ನೇ ಅರ್ಧಶತಕವೂ ಹೌದು.
ತಾಳ್ಮೆ ಪ್ರದರ್ಶಿಸಿದ ಕಿಂಗ್ ಕೊಹ್ಲಿಗೆ ಹ್ಯಾಟ್ಸ್​ಆಫ್..!
ಸಿಡ್ನಿ ಮೈದಾನದಲ್ಲಿ ವಿರಾಟ್, ಅಕ್ಷರಷಃ ತಾಳ್ಮೆಯ ಮೂರ್ತಿಯಂತೆ ಕಂಡು ಬಂದರು. 111 ನಿಮಿಷಗಳ ಕಾಲ, ಹೆಚ್ಚು ಕಡಿಮೆ 19 ಓವರ್​​ ಬ್ಯಾಟಿಂಗ್ ಮಾಡಿದ ಕೊಹ್ಲಿ, ಆಸ್ಟ್ರೇಲಿಯನ್ನರ ಗೇಮ್ ಟ್ಯಾಕ್ಟಿಕ್ಸ್​ ಉಲ್ಟಾ ಮಾಡಿದರು. 2 ಗಂಟೆಗಳ ಕಾಲ ಕ್ರಿಸ್​​ನಲ್ಲಿದ್ದ ಕೊಹ್ಲಿ 7 ಭರ್ಜರಿ ಬೌಂಡ್ರಿ ಸಿಡಿಸಿದ್ರು. ಅಜೇಯ 74 ರನ್​​ ದಾಖಲಿಸಿದ್ರು.
36 ರನ್​​​ ಇದ್ದಾಗ ಕೊಹ್ಲಿಗೆ ಅಂಪೈರ್ ಕೊಟ್ರು ಜೀವದಾನ..!
ಅದು ಓವರ್ ನಂಬರ್ 23.1.. ವೇಗಿ ನಾಥನ್ ಎಲ್ಲಿಸ್ ಬೌಲಿಂಗ್​ನಲ್ಲಿ ಕೊಹ್ಲಿ, ಎಲ್​ಬಿ ಬಲೆಗೆ ಬಿದ್ದೇ ಬಿಟ್ರು ಅನ್ನುವಷ್ಟರಲ್ಲಿ, ಅಂಪೈರ್ ಕೊಹ್ಲಿಯನ್ನ ಬಚಾವ್ ಮಾಡಿಬಿಟ್ರು. ಅಂಪೈರ್ ಡಿಸಿಷನ್ ಚಾಲೆಂಜ್ ಮಾಡಿ ಡಿಆರ್​ಎಸ್ ಮೊರೆ ಹೋಗಿದ್ದ ಆಸಿಸ್​​​​​​​​​ ಆಟಗಾರರಿಗೆ, ಭಾರೀ ನಿರಾಸೆ ಉಂಟಾಯ್ತು.
/filters:format(webp)/newsfirstlive-kannada/media/media_files/2025/10/24/virat_kohli_aus-1-2025-10-24-11-40-52.jpg)
ಸಿಡ್ನಿಯಲ್ಲಿ ಕಿಂಗ್ ಕೊಹ್ಲಿ ದಾಖಲೆ..!
- ಸಂಗಾಕ್ಕರ ದಾಖಲೆ ಮುರಿದ ವಿರಾಟ್
- ಚೇಸಿಂಗ್​ನಲ್ಲಿ 6,000 ರನ್​ ಪೂರೈಸಿದ ವಿರಾಟ್
- ವೈಟ್​ಬಾಲ್ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ರನ್​ ದಾಖಲು
- 12 ಬಾರಿ 150+ ರನ್ ಜಂಟಿ ಜೊತೆಯಾಟ
- ಆಸ್ಟ್ರೇಲಿಯಾದಲ್ಲಿ 50+ ಬ್ಯಾಟಿಂಗ್ ಸರಾಸರಿ
ಬ್ಯಾಟಿಂಗ್​​ನಲ್ಲಿ ಅಷ್ಟೇ ಅಲ್ಲ, ಫೀಲ್ಡ್​​ನಲ್ಲೂ ಕೊಹ್ಲಿ, ಮಿಂಚು ಹರಿಸಿದ್ದಾರೆ. ಸ್ಕೇರ್​​​ ಲೆಗ್​ನಲ್ಲಿ ಫೀಲ್ಡ್​​ ಮಾಡ್ತಿದ್ದ ವಿರಾಟ್, ಮ್ಯಾಥ್ಯೂ ಶಾರ್ಟ್ ಶಾರ್ಪ್​​​​​​​​​​​ ಸ್ವೀಪ್ ಶಾಟ್​ ಅನ್ನ ಹಿಡಿದು, ತಂಡಕ್ಕೆ ಬಿಗ್ ಬ್ರೇಕ್ ನೀಡಿದರು. ಕೊಹ್ಲಿ, ಚೇಸ್ ಮಾಸ್ಟರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸಿಡ್ನಿ ಇನ್ನಿಂಗ್ಸ್​ ಕಿಂಗ್ ಕೊಹ್ಲಿಗೆ, ಬಿಗ್ ಬ್ರೇಕ್ ನೀಡಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us