Advertisment

ಬ್ಯಾಟ್​ನಿಂದಲೇ ಉತ್ತರಿಸಿದ ರೋಹಿತ್​ ಶರ್ಮಾ.. 50 ಸೆಂಚುರಿಗಳ ಸರದಾರ ಹಿಟ್​ಮ್ಯಾನ್!

ಮೊದಲ ಎಸೆತದಿಂದಲೇ ಸಾಲಿಡ್ ಟಚ್​ನಲ್ಲಿ ಇರುವಂತೆ ಕಂಡರು. ವೇಗಿ ಮಿಚ್ಚೆಲ್ ಸ್ಟಾರ್ಕ್ ಬೌಲಿಂಗ್​ನಲ್ಲಿ ಬೌಂಡರಿ ಮೂಲಕ ಅಕೌಂಟ್ ಓಪನ್ ಮಾಡಿದ ಮುಂಬೈಕರ್, ಸಿಡ್ನಿಯಲ್ಲಿ ಸಿಡಿದೆದ್ದಿದ್ದಾರೆ.

author-image
Bhimappa
ROHIT_SHARMA_100
Advertisment

ಸಿಡ್ನಿಯಲ್ಲಿ ರೋಹಿತ್ ಶರ್ಮಾ ಸಿಡಿದೆದ್ದಿದ್ದಾರೆ. ಅಡಿಲೇಡ್ ಏಕದಿನ ಪಂದ್ಯದ ಫಾರ್ಮ್​​ ಅನ್ನೇ ಮುಂದುವರೆಸಿದ ಮುಂಬೈಕರ್, ಕ್ಲಾಸ್ ಬ್ಯಾಟಿಂಗ್ ಮಾಡಿದ್ದಾರೆ. ಎಸ್​​ಸಿಜಿಯಲ್ಲಿ ಆಸಿಸ್ ಬೌಲರ್​ಗಳನ್ನ ಬೆಂಡೆತ್ತಿದ್ದ ಹಿಟ್​ಮ್ಯಾನ್, ಭರ್ಜರಿ ಶತಕ ಸಿಡಿಸಿ ಮಿಂಚಿದರು. ರೋಹಿತ್ ಸೂಪರ್ಬ್ ಬ್ಯಾಟಿಂಗ್​​ಗೆ, ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ರೋಹಿತ್​ರ ಕ್ಲಾಸ್ ಇನ್ನಿಂಗ್ಸ್​ ಹೇಗಿತ್ತು?. 

Advertisment

ಅದ್ಭುತ ಬಾಡಿ ಲ್ಯಾಂಗ್ವೇಜ್, ಹೈ ಕಾನ್ಫಿಡೆನ್ಸ್, ಗುರಿ ತಲುಪೋ ಛಲದೊಂದಿಗೆ ಇನ್ನಿಂಗ್ಸ್​ ಆರಂಭಿಸಿದ ರೋಹಿತ್ ಶರ್ಮಾ, ಮೊದಲ ಎಸೆತದಿಂದಲೇ ಸಾಲಿಡ್ ಟಚ್​ನಲ್ಲಿ ಇರುವಂತೆ ಕಂಡರು. ವೇಗಿ ಮಿಚ್ಚೆಲ್ ಸ್ಟಾರ್ಕ್ ಬೌಲಿಂಗ್​ನಲ್ಲಿ ಬೌಂಡರಿ ಮೂಲಕ ಅಕೌಂಟ್ ಓಪನ್ ಮಾಡಿದ ಮುಂಬೈಕರ್, ಸಿಡ್ನಿಯಲ್ಲಿ ಸಿಡಿದೇಳುವ ಲೆಕ್ಕಾಚಾರ ಹಾಕಿದ್ರು. ರೋಹಿತ್ ಕ್ಯಾಲ್ಯೂಕಲೇಶನ್, ಎಲ್ಲೂ ಮಿಸ್ ಆಗಲಿಲ್ಲ.

Rohit Sharma and Virat Kohli

SCGಯಲ್ಲಿ ಮಿಂಚಿದ ರೋಹಿತ್, ಭರ್ಜರಿ ಶತಕ..!

ಸಿಡ್ನಿ ಮೈದಾನದಲ್ಲಿ ರೋಹಿತ್​​​​​​​​​​​​, ಕ್ಲಾಸ್ ಇನ್ನಿಂಗ್ಸ್ ಆಡಿದ್ರು. ರೋಹಿತ್ ಹೊಡೆಯುತ್ತಿದ್ದ ಒಂದೊಂದು ಬೌಂಡರಿ, ಸಿಕ್ಸರ್, ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಕೇವಲ 105 ಎಸೆತಗಳಲ್ಲಿ ಶತಕ ಪೂರೈಸಿದ ರೋಹಿತ್, ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿಕೊಂಡ್ರು.

159 ನಿಮಿಷ ಬ್ಯಾಟಿಂಗ್, 13 ಬೌಂಡರಿ, 3 ಭರ್ಜರಿ ಸಿಕ್ಸರ್

ರೋಹಿತ್ ಶರ್ಮಾ ನೂರು ಎಸೆತಗಳನ್ನ ಎದುರಿಸಿದ್ದು, ಬಹಳ ವರ್ಷಗಳೇ ಆಯ್ತು. ಆದ್ರೆ ಸಿಡ್ನಿಯಲ್ಲಿ ತಾಳ್ಮೆ, ಎಚ್ಚರಿಕೆ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್, 159 ನಿಮಿಷಗಳ ಕಾಲ ಕ್ರಿಸ್​​ನಲ್ಲಿದ್ರು. 13 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್​ ಸಿಡಿಸಿದ ರೋಹಿತ್​, ಎಸ್​ಸಿಜಿಯಲ್ಲಿ ಅಭಿಮಾನಿಗಳಿಗೆ ಫುಲ್ ಎಂಟರ್​ಟೈನ್ಮೆಂಟ್ ನೀಡಿದ್ರು.

Advertisment

ಸಿಡ್ನಿಯಲ್ಲಿ ರೋಹಿತ್-ಕೊಹ್ಲಿ ಜುಗಲ್​ಬಂದಿ..!

ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ, ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜುಗಲ್​ಬಂದಿಯನ್ನ, ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಸಿಕೊಂಡ್ರು. 2ನೇ ವಿಕೆಟ್​ಗೆ 170 ಎಸೆತಗಳಲ್ಲಿ 168 ರನ್​ ಕಲೆಹಾಕಿದ ಈ ಜೋಡಿ, ಕಾಂಗರೂಗಳಿಗೆ ವಿಲನ್ ಆಗಿ ಕಾಡಿದ್ರು.

ರೋಹಿತ್ ಅಬ್ಬರಕ್ಕೆ ದಾಖಲೆಗಳು ಪೀಸ್...ಪೀಸ್...!

ಶತಕ ವೀರ ರೋಹಿತ್ ಶರ್ಮಾ ಬ್ಯಾಟಿಂಗ್​ಗೆ ಸಿಡ್ನಿಯಲ್ಲಿ ಹಲವು ದಾಖಲೆಗಳು, ಪುಡಿ ಪುಡಿ ಆದವು. ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ ಜೊತೆ ರೋಹಿತ್ 19 ಬಾರಿ ಶತಕದ ಜೊತೆ ಆಟವಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ 6 ಬಾರಿ ಶತಕಗಳನ್ನ ಸಿಡಿಸಿ ಅಗ್ರಸ್ಥಾನದಲ್ಲಿರುವ ರೋಹಿತ್, ಆಸಿಸ್ ವಿರುದ್ಧ 9 ಶತಕಗಳನ್ನ ಸಿಡಿಸಿ, ಸಚಿನ್-ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ. ಅತಿ ಹೆಚ್ಚು ಬಾರಿ 150+ ರನ್​ ಸಿಡಿಸಿರುವ ಲಿಸ್ಟ್​ನಲ್ಲಿ ರೋಹಿತ್-ಕೊಹ್ಲಿ, ಗಂಗೂಲಿ-ತೆಂಡುಲ್ಕರ್ ದಾಖಲೆಯಲ್ಲಿ ಸರಿಸಮಾನ ಆಗಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ 50 ಶತಕಗಳ ಸಂಭ್ರಮ ..!

ಹಿಟ್​ಮ್ಯಾನ್ ರೋಹಿತ್ ಶರ್ಮಾ, ಸಿಡ್ನಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 50 ಶತಕಗಳನ್ನ ಸಿಡಿಸಿ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 12 ಶತಕ, ಏಕದಿನ ಕ್ರಿಕೆಟ್​ನಲ್ಲಿ 33 ಶತಕ ಮತ್ತು ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ 5 ಶತಕಗಳನ್ನ ಮುಂಬೈಕರ್ ಸಿಡಿಸಿದ್ದಾರೆ. ಮೂರೂ ಫಾರ್ಮೆಟ್​​ಗಳಲ್ಲಿ 5ಕ್ಕಿಂತ ಹೆಚ್ಚು ಶತಕಗಳನ್ನ ಬಾರಿಸಿರುವ ಏಕೈಕ ಬ್ಯಾಟ್ಸ್​ಮನ್ ಅನ್ನೋ ಹೆಗ್ಗಳಿಕೆ, ರೋಹಿತ್​ಗೆ ಸಲ್ಲುತ್ತದೆ. 

Advertisment

ಇದನ್ನೂ ಓದಿ: ಟೀಮ್ ಇಂಡಿಯಾದ ಮುಂದಿನ ODI ಮ್ಯಾಚ್ ಯಾವ ತಂಡದ ಜೊತೆ, ಎಲ್ಲಿ, ಯಾವಾಗ..?

ROHIT_SHARMA_50 (1)

ಸಿಡ್ನಿ ರೋಹಿತ್ ಶರ್ಮಾರ ಫೇವರಿಟ್ ಗ್ರೌಂಡ್..!

ಸಿಡ್ನಿ ಕ್ರಿಕೆಟ್ ಗ್ರೌಂಡ್ ರೋಹಿತ್ ಶರ್ಮಾ ಪಾಲಿಗೆ ಲಕ್ಕಿ ಗ್ರೌಂಡ್ ಅನ್ನೋದು ಮತ್ತೆ ಸಾಬೀತಾಯ್ತು. ಈಗಾಗಲೇ ಸಿಡ್ನಿಯಲ್ಲಿ 2 ಶತಕ ಮತ್ತು 2 ಅರ್ಧಶತಕಗಳನ್ನ ಬಾರಿಸಿರುವ ರೋಹಿತ್, 450ಕ್ಕಿಂತ ಹೆಚ್ಚು ರನ್​​ಗಳಿಸಿದ್ದಾರೆ. 91 ಬ್ಯಾಟಿಂಗ್ ಌವರೇಜ್​ನಲ್ಲಿ ರನ್​ಗಳಿಸಿರುವ ರೋಹಿತ್, 2 ಬಾರಿ ನಾಟೌಟ್​ ಆಗಿದ್ದಾರೆ.

ರೋಹಿತ್​​​​ ಸಿಡ್ನಿಯಲ್ಲಿ ಸೂಪರ್​ಹಿಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಅಲ್ಲದೇ ತಾನು, 2027ರ ಏಕದಿನ ವಿಶ್ವಕಪ್ ಆಡೇ ಆಡ್ತೀನಿ ಅನ್ನೋ ಸ್ಟ್ರಾಂಗ್ ಮೆಸೇಜ್ ಅನ್ನ, ಬಿಸಿಸಿಐ, ಸೆಲೆಕ್ಟರ್ಸ್​ ಮತ್ತು ಕೋಚ್​ಗೆ ನೀಡಿದ್ದಾರೆ. 

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Rohit Sharma Rohit Sharma-Virat Kohli
Advertisment
Advertisment
Advertisment