Advertisment

ಟೀಮ್ ಇಂಡಿಯಾದ ಮುಂದಿನ ODI ಮ್ಯಾಚ್ ಯಾವ ತಂಡದ ಜೊತೆ, ಎಲ್ಲಿ, ಯಾವಾಗ..?

ಗಿಲ್​ ನೇತೃತ್ವದ ಟೀಮ್ ಇಂಡಿಯಾ ಮುಂದಿನ ಏಕದಿನ ಸರಣಿಯನ್ನು ತವರಿನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಇದಕ್ಕೂ ಮೊದಲು ಎರಡು ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಕೊಲ್ಕತ್ತದ..

author-image
Bhimappa
ROHIT_KOHLI_AUS
Advertisment

ಆಸ್ಟ್ರೇಲಿಯಾ ಜೊತೆಗಿನ ಏಕದಿನ ಪಂದ್ಯ ಸರಣಿ ಸೋತಿರುವ ಟೀಮ್ ಇಂಡಿಯಾ ಕೊನೆ ಮ್ಯಾಚ್​ನಲ್ಲಿ ಅಮೋಘವಾದ ಪ್ರದರ್ಶನ ನೀಡಿ ಗೆಲ್ಲುವ ಮೂಲಕ ಮುಖಭಂಗದಿಂದ ತಪ್ಪಿಸಿಕೊಂಡಿದೆ. ಸದ್ಯ ಆಸಿಸ್​ ಸರಣಿ ಮುಗಿದಿದ್ದು ಟೀಮ್ ಇಂಡಿಯಾದ ಮುಂದಿನ ಒಡಿಐ ಸರಣಿ ನಡೆಯುವುದು ಯಾವಾಗ, ಎಲ್ಲಿ, ಯಾವ ಟೀಮ್ ಜೊತೆ ಎನ್ನುವ ಮಾಹಿತಿ ಇಲ್ಲಿದೆ. 

Advertisment

ಶುಭ್​ಮನ್ ಗಿಲ್​ ನೇತೃತ್ವದ ಟೀಮ್ ಇಂಡಿಯಾ ಮುಂದಿನ ಏಕದಿನ ಸರಣಿಯನ್ನು ತವರಿನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಇದಕ್ಕೂ ಮೊದಲು ಎರಡು ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಕೊಲ್ಕತ್ತದ ಈಡನ್ ಗಾರ್ಡನ್​ನಲ್ಲಿ ನವೆಂಬರ್​ 14 ರಿಂದ 18ರವರೆಗೆ ನಡೆದರೆ, 2ನೇ ಟೆಸ್ಟ್​ ಮ್ಯಾಚ್ ಬರ್ಸಾಪುರ್ ಮೈದಾನದಲ್ಲಿ ನವೆಂಬರ್ 22 ರಿಂದ 26ರವರೆಗೆ ನಡೆಯಲಿದೆ.

ಇದನ್ನೂ ಓದಿ: ಸಿಡ್ನಿ ಆಸ್ಪತ್ರೆಗೆ ದಾಖಲಾದ ಶ್ರೇಯಸ್​ ಅಯ್ಯರ್​.. ಉಪನಾಯಕನಿಗೆ ಏನಾಯಿತು?

ROHIT_KOHLI_NEW

ಟೆಸ್ಟ್ ಸರಣಿ ಮುಗಿದ ಮೇಲೆ 4 ದಿನಗಳ ನಂತರ ಅಂದರೆ ನವೆಂಬರ್​ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಒಡಿಐ ಮ್ಯಾಚ್ ಜಾರ್ಖಂಡ್​ನ ರಾಂಚಿ ಸ್ಟೇಡಿಯಂನಲ್ಲಿ ನಡೆಯಲಿದೆ. ಬಳಿಕ 2ನೇ ಏಕದಿನ ಪಂದ್ಯ ಡಿಸೆಂಬರ್​ 3 ರಂದು ರಾಯ್​ಪುರದಲ್ಲಿ ಹಾಗೂ ಕೊನೆಯ ಏಕದಿನ ಪಂದ್ಯ ಡಿಸೆಂಬರ್​ 6 ರಂದು ವಿಶಾಖಪಟ್ಟಣದ ಸ್ಟೇಡಿಯಂನಲ್ಲಿ ನಡೆಯಲಿದೆ.  

Advertisment

ಸದ್ಯ ಯಂಗ್ ಟೀಮ್ ಇಂಡಿಯಾ ಸೂರ್ಯಕುಮಾರ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಇದೇ ಅಕ್ಟೋಬರ್​ 29 ರಿಂದ ಆಡಲಿದೆ. ಇನ್ನು ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಮುಂದಿನ ದಿನಗಳಲ್ಲಿ ಭಾರತದ ಆಟಗಾರರ ಹೆಸರನ್ನು ಘೋಷಣೆ ಮಾಡಬಹುದು. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Ind vs SA IND vs AUS
Advertisment
Advertisment
Advertisment