/newsfirstlive-kannada/media/media_files/2025/10/26/shreyas_iyer_injury-2025-10-26-07-18-04.jpg)
ಲೆಜೆಂಡರಿ ಬ್ಯಾಟರ್​ ರೋಹಿತ್ ಶರ್ಮಾ ಸೆಂಚುರಿ ಹಾಗೂ ಕಿಂಗ್ ಕೊಹ್ಲಿಯ ಅರ್ಧಶತಕದಿಂದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಕಾಂಗರೂಗಳನ್ನು 9 ವಿಕೆಟ್​ಗಳಿಂದ ಬಗ್ಗು ಬಡಿದಿದೆ. ಈ ಮೂಲಕ ಸರಣಿಯಲ್ಲಿ 2-1 ರಿಂದ ಗಿಲ್ ಪಡೆ ಸೋತರೂ ಅಂತಿಮ ಪಂದ್ಯದಲ್ಲಿ ಅನುಭವಿ ಬ್ಯಾಟರ್​ಗಳ ಅದ್ಭುತ ಪ್ರದರ್ಶನ ಎಲ್ಲರನ್ನು ಮನಸೂರೆಗೊಳಿಸಿತು. ಇದರ ಬೆನ್ನಲ್ಲೇ ಬೇಸರದ ಸಂಗತಿ ಎಂದರೆ ಪಂದ್ಯದ ವೇಳೆ ಉಪನಾಯಕ ಶ್ರೇಯಸ್ ಅಯ್ಯರ್ ತೀವ್ರವಾದ ಗಾಯಕ್ಕೆ ಒಳಗಾಗಿದ್ದಾರೆ.
ಸಿಡ್ನಿ ಮೈದಾನದಲ್ಲಿ ಮೊದಲ ಬ್ಯಾಟಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ ತಂಡ 3 ವಿಕೆಟ್​ಗೆ 183 ರನ್​ಗಳಿಂದ ಆಟ ಮುಂದುವರೆಸಿತ್ತು. ಈ ವೇಳೆ ಕ್ರೀಸ್​​ನಲ್ಲಿ ಆಸಿಸ್​ ವಿಕೆಟ್​ ಕೀಪರ್ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ಮಾಡುತ್ತಿದ್ದರು. ಹರ್ಷಿತ್ ರಾಣಾ ಬೌಲಿಂಗ್​ನಲ್ಲಿ 24 ರನ್​ ಗಳಿಸಿದ್ದ ಅಲೆಕ್ಸ್ ಕ್ಯಾರಿ ಸಿಕ್ಸರ್ ಬಾರಿಸಲು ಬಾಲ್ ಅನ್ನು ಜೋರಾಗಿ ಬಾರಿಸಿದರು. ಆದರೆ ಆ ಬಾಲ್​ ಮೇಲೆ ಹೋಗಿದ್ದರಿಂದ ಶ್ರೇಯಸ್​ ಅಯ್ಯರ್ ಹಿಂದಕ್ಕೆ ಓಡುತ್ತಾ.. ಓಡುತ್ತಾ.. ಡೈವ್ ಮಾಡಿ ಕ್ಯಾಚ್ ಹಿಡಿದರು.
/filters:format(webp)/newsfirstlive-kannada/media/media_files/2025/10/26/shreyas_iyer_siraj-2025-10-26-07-18-13.jpg)
ಶ್ರೇಯಸ್​ ಅಯ್ಯರ್ ಅಮೋಘವಾದ ಡೈವ್ ಮಾಡಿ ಕ್ಯಾಚ್ ಹಿಡಿಯುವಾಗ ಅವರ ಎಡಭಾಗದ ಪಕ್ಕೆಲುಬಿಗೆ ಗಂಭೀರವಾದ ಪೆಟ್ಟು ಬಿದ್ದಿದೆ. ಇದರಿಂದ ತಕ್ಷಣ ಅವರನ್ನು ಸಿಡ್ನಿಯ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ. ಆಸ್ಟ್ರೇಲಿಯಾದ ಡಾಕ್ಟರ್, ಭಾರತದ ಡಾಕ್ಟರ್​ ಈ ಗಂಭೀರವಾದ ಗಾಯದ ಬಗ್ಗೆ ಇನ್ನು ಮಾಹಿತಿ ಹಂಚಿಕೊಂಡಿಲ್ಲ. ಆದರೆ ಶ್ರೇಯಸ್ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ವೇಳೆ ಸಹ ಆಟಗಾರರು, ಸ್ನೇಹಿತರು ಧೈರ್ಯ ತುಂಬಿದ್ದಾರೆ ಎಂದು ಹೇಳಲಾಗಿದೆ.
ಶ್ರೇಯಸ್ ಅಯ್ಯರ್ 3 ಒಡಿಐಗಳಿಗೆ ಮಾತ್ರ ಆಯ್ಕೆ ಆಗಿದ್ದರಿಂದ ಈಗಾಗಲೇ ಭಾರತಕ್ಕೆ ಮರಳಬೇಕಿತ್ತು. ಆದರೆ ಇಂಜುರಿಗೆ ಒಳಗಾಗಿದ್ದರಿಂದ ಸಿಡ್ನಿಯ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದು ಭಾರತಕ್ಕೆ ಬರಲು ಇನ್ನು ಕೆಲವು ವಾರಗಳು ಬೇಕಾಗುತ್ತವೆ ಎಂದಿದ್ದಾರೆ. ಅಯ್ಯರ್ ಭಾರತಕ್ಕೆ ಬಂದ ಮೇಲೆ ಬೆಂಗಳೂರಿನಲ್ಲಿನ Centre of Excellence ಭೇಟಿ ನೀಡಬೇಕು. ಇಲ್ಲಿ ಫಿಟ್ನೆಸ್​ ಪರೀಕ್ಷೆಯ ಬಳಿಕ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡುತ್ತಾರೋ, ಇಲ್ವೋ ಎನ್ನುವುದು ತಿಳಿದು ಬರಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us