/newsfirstlive-kannada/media/media_files/2025/10/12/job_army-2025-10-12-20-45-13.jpg)
ಇಂಡಿಯನ್ ಆರ್ಮಿಯು 2025ರ ಗ್ರೂಪ್​ ಸಿ ಹುದ್ದೆಗಳಾದ ಡಿಜಿ, ಇಎಂಇ ಅಡಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಡೈರೆಕ್ಟರ್ ಆಫ್​ ಎಲೆಕ್ಟ್ರಾನಿಕ್ಸ್​ ಮತ್ತು ಮೆಕನಿಕಲ್ ಇಂಜಿನಿಯರಿಂಗ್ (ಡಿಜಿ, ಇಎಂಇ) ಅಡಿ ಈ ಉದ್ಯೋಗಗಳು ಬರುತ್ತವೆ. ಅರ್ಹ ಎನಿಸುವ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ ಮೂಲಕ ಫಾರ್ಮ್ ಡೌನ್​ ಲೋಡ್​ ಮಾಡಿಕೊಂಡು ಆಫ್​ಲೈನ್​ ಮೂಲಕ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಭಾರತೀಯ ಸೇನೆಯ ಈ ಉದ್ಯೋಗಗಳಿಗೆ ಸಂಬಂಧಿಸಿದ ಅರ್ಹತೆ, ಅರ್ಜಿ ಶುಲ್ಕ, ವಯೋಮಿತಿ, ಮಾಸಿಕ ಸಂಬಳ, ಆಯ್ಕೆ ಪ್ರಕ್ರಿಯೆ ಹಾಗೂ ಪ್ರಮುಖವಾದ ದಿನಾಂಕಗಳನ್ನು ಈ ಕೆಳಗೆ ನೀಡಲಾಗಿದೆ. ಉದ್ಯೋಗಾಕಾಂಕ್ಷಿಗಳು ಎಲ್ಲವನ್ನು ಸರಿಯಾಗಿ ಗಮನಿಸಬೇಕು. ಸರ್ಕಾರಿ ಉದ್ಯೋಗಗಳಿಗೆ ಅಲೆದಾಡುವವರು ಇವುಗಳಿಗೆ ಯತ್ನಿಸಬಹುದು.
ಉದ್ಯೋಗದ ಸಂಪೂರ್ಣ ಮಾಹಿತಿ
ಉದ್ಯೋಗದ ಹೆಸರು
- ಗುಮಾಸ್ತ (Lower Division Clerk)
- ಮೆಕಾನಿಕ್
- ಟ್ರೇಡ್ಸ್​ಮನ್​ ಮಟೆ
- ಸ್ಟೋರ್ ಕೀಪರ್
- ಕುಕ್​ (ಇವುಗಳ ಜೊತೆ ಇನ್ನು ಹಲವು ಹುದ್ದೆಗಳಿವೆ)
ಇದನ್ನೂ ಓದಿ: ಸರ್ಕಾರಿ ಹುದ್ದೆ ಹುಡುಕಾಟದಲ್ಲಿ ಇದ್ದೀರಾ.. ಹಾಗಾದ್ರೆ ಒಮ್ಮೆ ಈ ಉದ್ಯೋಗಗಳಿಗೆ ಟ್ರೈ ಮಾಡಿ!
ಒಟ್ಟು ಹುದ್ದೆಗಳು- 194
ವಿದ್ಯಾರ್ಹತೆ ಏನು?
10th, 12th, ITI,Dimloma, Degree
ಮಾಸಿಕ ವೇತನ- 5,200- 20,200 ರೂಪಾಯಿ
ವಯೋಮಿತಿ ಎಷ್ಟು?
18 ವರ್ಷದಿಂದ 25 ವರ್ಷಗಳು
ಈ ಹುದ್ದೆಗೆ ಸಂಬಂಧಿಸಿದ ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 04 ಅಕ್ಟೋಬರ್​ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 24 ಅಕ್ಟೋಬರ್​ 2025
ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ