/newsfirstlive-kannada/media/media_files/2025/08/04/job_new-2-2025-08-04-21-59-33.jpg)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಸಂಸ್ಥೆಯೂ ಅರ್ಜಿಗಳನ್ನು ಆಹ್ವಾನ ಮಾಡಿದ್ದು ಅರ್ಹ ಹಾಗೂ ಆಸಕ್ತಿ ಇರುವ ಉದ್ಯೋಗಾಕಾಂಕ್ಷಿಗಳು ಇವುಗಳಿಗೆ ಪ್ರಯತ್ನ ಮಾಡಬಹುದು. ಕೆಲಸ ಇಲ್ಲ..ಕೆಲಸ ಇಲ್ಲ ಅಂತ ಮನೆಯಲ್ಲಿ ಇರುವ ಬದಲು ಇಸ್ರೋ ಉದ್ಯೋಗಗಳಿಗೆ ಟ್ರೈ ಮಾಡಿ.
ಇಸ್ರೋ ಸಂಸ್ಥೆ ಕರೆದಿರುವ ಉದ್ಯೋಗಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಎಷ್ಟು ಉದ್ಯೋಗಗಳು, ಹುದ್ದೆಗಳ ಹೆಸರು, ವಿದ್ಯಾರ್ಹತೆ ಏನು ಇತ್ಯಾದಿ ಮಾಹಿತಿ ಇದೆ. ಆನ್​ಲೈನ್​ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಆಫ್​ಲೈನ್ ಇರುವುದಿಲ್ಲ. ಅರ್ಜಿ ಸಲ್ಲಿಕೆ ಮಾಡುವಾಗ ಯಾವಾದರೂ ಸಮಸ್ಯೆ ಇದ್ದರೇ ಸಂಸ್ಥೆಯ ವೆಬ್​ಸೈಟ್​ಗೆ ಭೇಟಿ ನೀಡಿ. ವೆಬ್​ಸೈಟ್​ ಲಿಂಕ್ ಈ ಕೆಳಗೆ ಇದೆ.
Indian Space Research Organization (ISRO)
ಉದ್ಯೋಗದ ಹೆಸರು
ತಾಂತ್ರಿಕ ಸಹಾಯಕ (Technical Assistant)
ತಂತ್ರಜ್ಞ-ಬಿ (Technician-B)
ಒಟ್ಟು ಉದ್ಯೋಗಗಳು- 20
ಇದನ್ನೂ ಓದಿ:ರಾಯಚೂರಲ್ಲಿ ಕೆಲಸ ಮಾಡಲು ಬಯಸುವರಿಗೆ ಗುಡ್​ನ್ಯೂಸ್.. RIMSನಲ್ಲಿ ಉದ್ಯೋಗಾವಕಾಶಗಳು
ವಿದ್ಯಾರ್ಹತೆ
ತಾಂತ್ರಿಕ ಸಹಾಯಕ- ಡಿಪ್ಲೋಮಾ ಇನ್ ಇಂಜಿನಿಯರಿಂಗ್
ತಂತ್ರಜ್ಞ-ಬಿ- 10ನೇ ತರಗತಿ, ಐಟಿಐ, ಎನ್​​ಟಿಸಿ, ಎನ್​ಎಸಿ
ವಯಸ್ಸಿನ ಮಿತಿ
18 ವರ್ಷಗಳಿಂದ 40 ವರ್ಷಗಳು
ತಿಂಗಳ ಸಂಬಳ ಎಷ್ಟು?
ತಾಂತ್ರಿಕ ಸಹಾಯಕ- 44,900 ದಿಂದ 1,42,400 ರೂಪಾಯಿಗಳು
ತಂತ್ರಜ್ಞ-ಬಿ- 21,700 ದಿಂದ 69,100 ರೂಪಾಯಿಗಳು
ಅರ್ಜಿ ಶುಲ್ಕ
ಒಬಿಸಿ, ಜನರಲ್​- 750 ರೂಪಾಯಿಗಳು
ಎಸ್​ಸಿ, ಎಸ್​ಟಿ- 250 ರೂಪಾಯಿಗಳು
ಮುಖ್ಯವಾದ ದಿನಾಂಕಗಳು ಇವು
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 04 ಅಕ್ಟೋಬರ್​ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 31 ಅಕ್ಟೋಬರ್​ 2025
ಸಂಸ್ಥೆಯ ವೆಬ್​​ಸೈಟ್- https://www.isro.gov.in/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ