ರಿಲಯನ್ಸ್ ಫೌಂಡೇಶನ್​​​​ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 5100 ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ

ರಿಲಯನ್ಸ್ ಫೌಂಡೇಶನ್​​ನ ವಾರ್ಷಿಕ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳು ಮತ್ತೊಮ್ಮೆ ತೆರೆದಿವೆ. 2025-26ರ ಶೈಕ್ಷಣಿಕ ವರ್ಷಕ್ಕೆ ರಿಲಯನ್ಸ್ ಫೌಂಡೇಶನ್​​ 5100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಪ್ರಥಮ ವರ್ಷದ ಪೂರ್ಣಾವಧಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

author-image
Veenashree Gangani
reliance foundation schorarship
Advertisment
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 4, 2025
  • ಯಾವೆಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಗೊತ್ತಾ?
  • ಬರೋಬ್ಬರಿ 5100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ಮುಂಬೈ: ರಿಲಯನ್ಸ್ ಫೌಂಡೇಶನ್​​ನ ವಾರ್ಷಿಕ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳು ಮತ್ತೊಮ್ಮೆ ತೆರೆದಿವೆ. 2025-26ರ ಶೈಕ್ಷಣಿಕ ವರ್ಷಕ್ಕೆ ರಿಲಯನ್ಸ್ ಫೌಂಡೇಶನ್​​ 5100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಪ್ರಥಮ ವರ್ಷದ ಪೂರ್ಣಾವಧಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಭಾರತದಲ್ಲಿ ಉನ್ನತ ಶಿಕ್ಷಣಕ್ಕಾಗಿ ಈ ಅತಿದೊಡ್ಡ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 4, 2025 ಆಗಿದೆ. 2022ನೇ ಇಸವಿಯಲ್ಲಿ ರಿಲಯನ್ಸ್ ಫೌಂಡೇಶನ್​​ ಅಧ್ಯಕ್ಷೆ ನೀತಾ ಅಂಬಾನಿ ಅವರು ಧೀರೂಭಾಯಿ ಅಂಬಾನಿ ಅವರ 90ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ 10 ವರ್ಷಗಳಲ್ಲಿ 50,000 ವಿದ್ಯಾರ್ಥಿವೇತನಗಳನ್ನು ಘೋಷಿಸಿದ್ದರು.

ಇದನ್ನೂ ಓದಿ: ಇನ್ಮುಂದೆ ವಿದ್ಯಾರ್ಥಿಗಳು ರಾಜಕೀಯ, ಊರ ಗಣ್ಯರ ಪ್ರೋಗ್ರಾಂಗೆ ಹೋಗಂಗಿಲ್ಲ..!

ರಿಲಯನ್ಸ್ ಫೌಂಡೇಶನ್​​ ಪದವಿ ಮಟ್ಟದಲ್ಲಿ 5,000 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವೀಧರರಿಗೆ 100 ವಿದ್ಯಾರ್ಥಿವೇತನಗಳನ್ನು ಒದಗಿಸುತ್ತದೆ. ಪದವೀಧರರಿಗೆ 2 ಲಕ್ಷ ರೂ.ಗಳವರೆಗೆ ಅನುದಾನ ನೀಡಲಾಗುತ್ತದೆ. ವಿದ್ಯಾರ್ಥಿವೇತನಕ್ಕಾಗಿ ವಿದ್ಯಾರ್ಥಿಗಳ ಆಯ್ಕೆಯು ಅವರ ಶೈಕ್ಷಣಿಕ ಅರ್ಹತೆ ಮತ್ತು ಆರ್ಥಿಕ ಸ್ಥಿತಿಯನ್ನು ಆಧರಿಸಿರುತ್ತದೆ. ಮತ್ತೊಂದೆಡೆ, ಸ್ನಾತಕೋತ್ತರ ವಿದ್ಯಾರ್ಥಿವೇತನಗಳು ಎಂಜಿನಿಯರಿಂಗ್, ತಂತ್ರಜ್ಞಾನ, ಇಂಧನ ಮತ್ತು ಜೀವ ವಿಜ್ಞಾನಗಳ ಆಯ್ದ ಕ್ಷೇತ್ರಗಳಲ್ಲಿ ಭಾರತದ ಅತ್ಯಂತ ಪ್ರತಿಭಾನ್ವಿತ 100 ವಿದ್ಯಾರ್ಥಿಗಳಿಗೆ ಹೋಗುತ್ತವೆ. ರಾಷ್ಟ್ರೀಯ ಅಭಿವೃದ್ಧಿ ಮತ್ತು ಜಾಗತಿಕ ಪ್ರಗತಿಗೆ ನಿರ್ಣಾಯಕ ಕ್ಷೇತ್ರಗಳಲ್ಲಿ ಮುಂದುವರಿದ ಅಧ್ಯಯನ ಮತ್ತು ಸಂಶೋಧನೆಗಾಗಿ ವಿದ್ಯಾರ್ಥಿಗಳು 6 ಲಕ್ಷ ರೂ.ಗಳವರೆಗೆ ಅನುದಾನವನ್ನು ಪಡೆಯುತ್ತಾರೆ. ಸಾಮಾಜಿಕವಾಗಿ, ಪರಿಸರ ದೃಷ್ಟಿಯಿಂದ ಮತ್ತು ಡಿಜಿಟಲ್ ವಿಚಾರದ ಆಲೋಚನೆ ಇರುವವರು ಹಾಗೂ ಭಾರತಕ್ಕಾಗಿ ದೊಡ್ಡದಾಗಿ ಯೋಚಿಸಬಲ್ಲ ಭವಿಷ್ಯದ ನಾಯಕರ ಗುಂಪನ್ನು ಬೆಳೆಸುವುದು ವಿದ್ಯಾರ್ಥಿವೇತನದ ಗುರಿಯಾಗಿದೆ.

IIT ಇಂದ PUC ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​.. ಎಐ ಆನ್​​ಲೈನ್ ಕೋರ್ಸ್ ಆರಂಭ, ಈಗಲೇ ಅಪ್ಲೇ ಮಾಡಿ!

ರಿಲಯನ್ಸ್ 29 ವರ್ಷಗಳಿಗೂ ಹೆಚ್ಚು ಕಾಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ರಿಲಯನ್ಸ್ ಇಲ್ಲಿಯವರೆಗೆ ವಿವಿಧ ಮಾರ್ಗಗಳ ಮೂಲಕ 28,000ಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ನೀಡಿದೆ. ಫೌಂಡೇಷನ್ ಪ್ರಕಾರ, ವಿದ್ಯಾರ್ಥಿವೇತನ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಇಂದು ವೃತ್ತಿಪರ ಜೀವನದಲ್ಲಿ ಉತ್ತಮ ಹೆಸರು ಗಳಿಸುತ್ತಿದ್ದಾರೆ ಮತ್ತು ಭಾರತದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ. ವಿದ್ಯಾರ್ಥಿವೇತನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅರ್ಜಿ ಸಲ್ಲಿಸಲು scholarships.reliancefoundation.org ಗೆ ಭೇಟಿ ನೀಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Reliance Foundation invites applications, scholarships
Advertisment