/newsfirstlive-kannada/media/media_files/2025/08/16/school-7-2025-08-16-12-34-16.jpg)
ಬೆಂಗಳೂರು: ಇನ್ಮುಂದೆ ಸರ್ಕಾರದ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ವಿದ್ಯಾರ್ಥಿಗಳು ಹೋಗುವ ಹಾಗಿಲ್ಲ ಎಂದು ಶಿಕ್ಷಣ ಸಂಸ್ಥೆ ಹೇಳಿದೆ. ಶೈಕ್ಷಣಿಕ ಉದ್ದೇಶವಲ್ಲದ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಸಭಾಂಗಣ ತುಂಬಿಸುವ ಪ್ರಯತ್ನಗಳಿಗೆ ಬ್ರೇಕ್ ಬೀಳಲಿದೆ.
ಆಡಿಯನ್ಸ್ ಆಗಿ ಕರೆದುಕೊಂಡು ಹೋಗುವಂತಿಲ್ಲ
ಸರ್ಕಾರಿ ಶಾಲೆಯಲ್ಲಿ ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಇಂಥ ಕ್ರಮಕ್ಕೆ ಮುಂದಾಗಿದೆ. ಶಿಕ್ಷಣ ಇಲಾಖೆ ಇಟ್ಟಿರುವ ಮಹತ್ವದ ಹೆಜ್ಜೆ ಇದಾಗಿದ್ದು, ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳನ್ನು ಆಡಿಯನ್ಸ್ ಆಗಿ ಕರೆದುಕೊಂಡು ಹೋಗುವಂತಿಲ್ಲ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಶಾಲೆಯಲ್ಲಿ ಮೊಟ್ಟೆ ನೀಡಿದ್ದಕ್ಕೆ ಶಾಲೆ ಬಿಟ್ಟ 70 ವಿದ್ಯಾರ್ಥಿಗಳು! ಕಾರಣವೇನು?
ಸರ್ಕಾರದ ಅಥವಾ ರಾಜಕೀಯದ ಅಥವಾ ಊರ ಗಣ್ಯರ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವಂತಿಲ್ಲ. ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯವಾಗಿ ಚೇರ್ ತುಂಬಿಸುವ ಸಲುವಾಗಿ ಮಕ್ಕಳ ಕರೆದು ಕೊಂಡು ಹೋಗಲಾಗುತ್ತಿತ್ತು. ಈ ಸಂಪ್ರದಾಯಕ್ಕೆ ಕಂಪ್ಲೀಟ್ ಬ್ರೇಕ್ ಬಿದ್ದಿದೆ.
ಕೇವಲ ಮಕ್ಕಳು ಮಾತ್ರವಲ್ಲದೇ ಶಿಕ್ಷಕರು ಕೂಡ ಇಂತಹ ಕಾರ್ಯಕ್ರಮಗಳಿಗೆ ಅಡೆಂಟ್ ಆಗುವ ಹಾಗಿಲ್ಲ. ಒಂದು ವೇಳೆ ಯಾರಾದರೂ ಮಕ್ಕಳನ್ನು ಕರೆದುಕೊಂಡು ಹೋದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ:ದೆಹಲಿಯಲ್ಲಿ ಶಾಲಾ ಶುಲ್ಕ ಏರಿಕೆ ತಡೆಗೆ ಕಾಯಿದೆ ಜಾರಿ, ಕರ್ನಾಟಕಕ್ಕೂ ಮಾದರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ