/newsfirstlive-kannada/media/media_files/2025/09/16/job_news-3-2025-09-16-18-50-41.jpg)
ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಹೆಚ್ಚು ಓದಿ ಯಾವುದೇ ಕೆಲಸ ಇಲ್ಲದೇ ಮನೆಯಲ್ಲಿ ಕುಳಿತು ಯೋಚನೆಯಲ್ಲಿ ತೊಡಗಿದವರು ಕೇಂದ್ರ ಸರ್ಕಾರದ ಉದ್ಯೋಗಗಳನ್ನ ಪಡೆಯಲು ಪ್ರಯತ್ನಿಸಬಹುದು. 33 ವರ್ಷದ ಒಳಗಿನ ಉದ್ಯೋಗಾಕಾಂಕ್ಷಿಗಳಿಗೆ ಇದು ಒಂದು ಒಳ್ಳೆಯ ಅವಕಾಶ ಎಂದೇ ಹೇಳಬಹುದು.
ರೈಲ್ವೆ ರಿಕ್ವರ್ಮೆಂಟ್ ಬೋರ್ಡ್ (ಆರ್ಆರ್ಬಿ) ಈ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿದ್ದು ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಅಪ್ಲೇ ಮಾಡಬಹುದು. 300ಕ್ಕೂ ಅಧಿಕ ಉದ್ಯೋಗಗಳು ಇದ್ದು ಆಯ್ಕೆ ಆದವರನ್ನು ದೇಶದ ವಿವಿಧ ರೈಲ್ವೆ ಜೋನಾಲ್ಗಳಿಗೆ ನೇಮಕ ಮಾಡಲಾಗುತ್ತದೆ. ಇನ್ನು ಈ ಉದ್ಯೋಗಕ್ಕೆ ಸಂಬಂಧಿಸಿದಂತೆ ಇತರೆ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಉದ್ಯೋಗದ ಹೆಸರು- ವಿಭಾಗ ನಿಯಂತ್ರಕ (Section Controller)
ಒಟ್ಟು ಎಷ್ಟು ಉದ್ಯೋಗಗಳು- 368
ಇದನ್ನೂ ಓದಿ:ಸೇನೆಗೆ ಸೇರಬೇಕು ಎನ್ನುವರಿಗೆ ಸುವರ್ಣಾವಕಾಶ.. ಸರ್ಕಾರದಿಂದ ಉಚಿತ ತರಬೇತಿ, ಅಪ್ಲೇ ಮಾಡಿ
ಕೆಲಸ ಮಾಡುವ ಸ್ಥಳ- ಭಾರತದ್ಯಾಂತ
ಮಾಸಿಕ ವೇನತ- 35,400 ರೂಪಾಯಿಗಳು
ಶೈಕ್ಷಣಿಕ ಅರ್ಹತೆ-
ಪದವಿ
ವಯಸ್ಸಿನ ಮಿತಿ-
20 ವರ್ಷದಿಂದ 33 ವರ್ಷ
ಅರ್ಜಿ ಶುಲ್ಕ ಎಷ್ಟು ಇದೆ?
- ಎಸ್ಸಿ, ಎಸ್ಟಿ, ವಿಶೇಷ ಚೇತನ, ಮಹಿಳಾ, ಇಬಿಸಿ, ಮಾಜಿ ಸೈನಿಕ, ತೃತೀಯ ಲಿಂಗಿ- 250 ರೂಪಾಯಿ
- ಉಳಿದ ಎಲ್ಲ ಅಭ್ಯರ್ಥಿಗಳು- 500 ರೂಪಾಯಿ
- ಆನ್ಲೈನ್ ಮೂಲಕ ಹಣ ಪಾವತಿ ಮಾಡಬೇಕು
ಆಯ್ಕೆ ಪ್ರಕ್ರಿಯೆ ಹೇಗೆ?
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
- ಸಂದರ್ಶನ
ಈ ಉದ್ಯೋಗಕ್ಕೆ ಸಂಬಂಧಿಸಿದ ಪ್ರಮುಖ ದಿನಗಳು
- ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 15 ಸೆಪ್ಟೆಂಬರ್ 2025
- ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 16 ಅಕ್ಟೋಬರ್ 2025
- ಹಣ ಪಾವತಿ ಮಾಡಲು ಕೊನೆಯ ದಿನಾಂಕ- 16 ಅಕ್ಟೋಬರ್ 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ