Advertisment

ಒಂದೇ ಱಂಕ್, ಒಂದೇ ರೋಲ್ ನಂಬರ್! ಒಂದೇ ಹೆಸರಿನ ಇಬ್ಬರು ‘ಆಕಾಂಕ್ಷಾ’ಗಳ ಮಧ್ಯೆ ಫೈಟ್​..! UPSC ಯಡವಟ್ಟು..!

ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಅಭ್ಯರ್ಥಿಗಳ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಆದರೆ, ಈ ಸಂಭ್ರಮದ ನಡುವೆಯೇ 301ನೇ ಱಂಕ್​ಗೆ ಸಂಬಂಧಿಸಿದಂತೆ ದೊಡ್ಡ ವಿವಾದವೊಂದು ಸೃಷ್ಟಿಯಾಗಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ.

author-image
Ganesh Kerekuli
UPSC Result (4)
Advertisment

ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಅಭ್ಯರ್ಥಿಗಳ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಆದರೆ, ಈ ಸಂಭ್ರಮದ ನಡುವೆಯೇ 301ನೇ ಱಂಕ್​ಗೆ ಸಂಬಂಧಿಸಿದಂತೆ ದೊಡ್ಡ ವಿವಾದವೊಂದು ಸೃಷ್ಟಿಯಾಗಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ.

Advertisment

ಏನಿದು ವಿವಾದ?

UPSC ಬಿಡುಗಡೆ ಮಾಡಿದ ಮೆರಿಟ್ ಪಟ್ಟಿಯಲ್ಲಿ 301ನೇ ಱಂಕ್​ನಲ್ಲಿ 'ಆಕಾಂಕ್ಷಾ ಸಿಂಗ್' ಎಂಬ ಹೆಸರಿದೆ. ಇದೀಗ ಇಬ್ಬರು ಯುವತಿಯರು ತಾವೇ ಆ ಱಂಕ್ ಪಡೆದ ಅಸಲಿ ಅಭ್ಯರ್ಥಿ ಎಂದು ಹಕ್ಕು ಸಾಧಿಸುತ್ತಿದ್ದಾರೆ. ವಿಶೇಷವೆಂದರೆ, ಇಬ್ಬರ ಹೆಸರೂ ಒಂದೇ ಆಗಿರುವುದಲ್ಲದೆ, ಇಬ್ಬರೂ ಒಂದೇ ರೋಲ್ ನಂಬರ್ (0856794) ತೋರಿಸುತ್ತಿದ್ದಾರೆ!

ಬಿಹಾರದ ಆಕಾಂಕ್ಷಾ ಸಿಂಗ್ ಹಕ್ಕು ಸಾಧನೆ

ಬಿಹಾರದ ಆರಾ ಪಟ್ಟಣದ ನಿವಾಸಿಯಾದ ಆಕಾಂಕ್ಷಾ ಸಿಂಗ್ ತಾವು 301ನೇ ಱಂಕ್ ಪಡೆದಿರುವುದಾಗಿ ಸಂಭ್ರಮಿಸಿದ್ದಾರೆ. ಈಕೆ ಬ್ರಹ್ಮೇಶ್ವರ ಮುಖಿಯಾ ಅವರ ಮೊಮ್ಮಗಳು ಹಾಗೂ ಇಂದು ಭೂಷಣ್ ಸಿಂಗ್ ಅವರ ಪುತ್ರಿ. ಮೆರಿಟ್ ಲಿಸ್ಟ್‌ನಲ್ಲಿರುವ ಮಾಹಿತಿ ತಮಗೇ ಸೇರಿದ್ದು ಎಂದು ಇವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ತನ್ನ ನೆರೆಹೊರೆಯ ದೇಶಗಳಿಗೆ ಕ್ಷಮೆ ಕೇಳಿದ ಇರಾನ್ : ದಾಳಿ ನಡೆಸಿದ್ದಕ್ಕೆ ಈಗ ಕ್ಷಮೆಯಾಚನೆ

Advertisment

ಉತ್ತರ ಪ್ರದೇಶದ ಡಾ. ಆಕಾಂಕ್ಷಾ ಸಿಂಗ್ 

ಇನ್ನೊಂದೆಡೆ ಉತ್ತರ ಪ್ರದೇಶದ ಗಾಜಿಪುರದ ನಿವಾಸಿಯಾದ ಡಾ. ಆಕಾಂಕ್ಷಾ ಸಿಂಗ್ ಕೂಡ ತಾವೇ ಆ ಱಂಕ್ ವಿಜೇತೆ  ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ತಮ್ಮ ಇಂಟರ್ವ್ಯೂ ಅಡ್ಮಿಟ್ ಕಾರ್ಡ್ ಅನ್ನು ಹಂಚಿಕೊಂಡಿರುವ ಅವರು, ಅದರಲ್ಲಿ ಮೆರಿಟ್ ಲಿಸ್ಟ್‌ನಲ್ಲಿರುವ ಅದೇ ರೋಲ್ ನಂಬರ್ (0856794) ಇರುವುದನ್ನು ತೋರಿಸಿದ್ದಾರೆ. ಕೆಲವರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

ಒಂದೇ ಱಂಕ್​​ ಮತ್ತು ಒಂದೇ ರೋಲ್ ನಂಬರ್ ಅಡಿಯಲ್ಲಿ ಇಬ್ಬರು ಅಭ್ಯರ್ಥಿಗಳು ಹಕ್ಕು ಸಾಧಿಸುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಕೂಡ ಇದೇ ರೀತಿಯ ಪ್ರಕರಣಗಳು ನಡೆದಿದ್ದವು, ಆದರೆ ತಾಂತ್ರಿಕ ಕಾರಣಗಳಿಂದ ಅಥವಾ ದಾಖಲೆಗಳ ಅಕ್ರಮದಿಂದ ಹೀಗಾಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಇಡೀ ಪ್ರಕರಣ ಕುತೂಹಲ ಮೂಡಿಸಿದ್ದು, ಅಸಲಿ ಅಭ್ಯರ್ಥಿ ಯಾರು ಎಂಬುದು ಯುಪಿಎಸ್‌ಸಿ ನೀಡುವ ಅಧಿಕೃತ ಸ್ಪಷ್ಟನೆಯಿಂದ ಮಾತ್ರ ತಿಳಿಯಲಿದೆ. ಪರೀಕ್ಷಾ ಮಂಡಳಿಯು ಈ ದಾಖಲೆಗಳನ್ನು ಮರುಪರಿಶೀಲಿಸಿದ ನಂತರವೇ ಸತ್ಯ ಹೊರಬರಬೇಕಿದೆ.

Advertisment

ಇದನ್ನೂ ಓದಿ:ಅಭಿಷೇಕ್ ಒಂದೇ ಅಲ್ಲ.. ಟೀಂ ಇಂಡಿಯಾಗೆ ಚಿಂತೆ ಮಾಡಿದ್ದಾರೆ ಇನ್ನಿಬ್ಬರು ಸ್ಟಾರ್​ ಬ್ಯಾಟರ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Civil Services Examination UPSC
Advertisment
Advertisment
Advertisment