Advertisment

ಅಭಿಷೇಕ್ ಒಂದೇ ಅಲ್ಲ.. ಟೀಂ ಇಂಡಿಯಾಗೆ ಚಿಂತೆ ಮಾಡಿದ್ದಾರೆ ಇನ್ನಿಬ್ಬರು ಸ್ಟಾರ್​ ಬ್ಯಾಟರ್ಸ್​..!

ಟಿ-20 ವಿಶ್ವಕಪ್ ಫೈನಲ್​ಗೂ ಮುನ್ನ ಟೀಮ್ ಇಂಡಿಯಾಗೆ ಬಿಗ್ ಚಾಲೆಂಜ್ ಎದುರಾಗಿದೆ. ಬಲಿಷ್ಟ ಬ್ಯಾಟಿಂಗ್ ಲೈನ್​ಅಪ್ ಇದ್ರೂ ಸೂರ್ಯಕುಮಾರ್ ಯಾದವ್ ಪಡೆಗೆ ಮಿಡಲ್ ಆರ್ಡರ್​​ರೇ ದೊಡ್ಡ ಸಮಸ್ಯೆಯಾಗಿದೆ. ಮಧ್ಯಮಕ್ರಮಾಂಕದಲ್ಲಿ ಘಟಾನುಘಟಿ ಬ್ಯಾಟರ್ಸ್​ ಇದ್ರೂ ತಂಡಕ್ಕೆ ಹಿನ್ನಡೆ ಉಂಟಾಗ್ತಿದೆ.

author-image
Ganesh Kerekuli
Gambhir and agarkar
Advertisment
  • ಟೀಮ್ ಇಂಡಿಯಾಗೆ ಮಿಡಲ್ ಆರ್ಡರ್ ಚಿಂತೆ ಯಾಕೆ..?
  • ತಿಲಕ್ ವರ್ಮಾ ಬ್ಯಾಟ್​ನಿಂದ ಬಿಗ್ ಸ್ಕೋರ್ ಇಲ್ಲ..!
  • ಒಂದು ಅರ್ಧಶತಕ ಸಿಡಿಸಿ ಸೂರ್ಯಕುಮಾರ್ ಸೈಲೆಂಟ್..!

T20 ಫಾರ್ಮೆಟ್​ನಲ್ಲಿ ಟೀಮ್ ಇಂಡಿಯಾಕ್ಕೆ ಬ್ಯಾಟಿಂಗೇ ಸ್ಟ್ರೆಂಥ್. ಟೂರ್ನಿಯಲ್ಲಿ 3 ಬಾರಿ 200+ ರನ್ ಸ್ಕೋರ್ ಮಾಡಿರುವ ಸೂರ್ಯಕುಮಾರ್ ಯಾದವ್ ಪಡೆ, ಬ್ಯಾಟಿಂಗ್​ನಲ್ಲಿ ಧಮ್ ತೋರಿಸಿದೆ. ಆದ್ರೆ ಅದೇ ಸ್ಕೈ ಪಡೆಗೆ, ಬ್ಯಾಟಿಂಗೇ ವೀಕ್ನೆಸ್ ಅನ್ನೋದು, ಇಂಟ್ರಸ್ಟಿಂಗ್ ವಿಚಾರ. ಟೀಮ್ ಇಂಡಿಯಾ ಮಿಡಲ್ ಆರ್ಡರ್​​​, ಟೆಸ್ಟಿಂಗ್ ಟೈಮ್​ನಲ್ಲಿ ಫೇಲ್ ಆಗಿದೆ. ಮಹತ್ವದ ಪಂದ್ಯಗಳಲ್ಲಿ ಎಡವಿದೆ. ಇದರಿಂದ ತಂಡಕ್ಕೆ ಭಾರೀ ಹಿನ್ನಡೆ ಸಹ ಉಂಟಾಗಿದೆ. 

Advertisment

ತಿಲಕ್ ವರ್ಮಾ ಬ್ಯಾಟ್​ನಿಂದ ಬಿಗ್ ಸ್ಕೋರ್ ಇಲ್ಲ

ಟಿ-20 ಸ್ಪೆಷಲಿಸ್ಟ್ ಬ್ಯಾಟರ್ ತಿಲಕ್ ವರ್ಮಾ, ಈ ಟೂರ್ನಿಯಲ್ಲಿ ಹೆಚ್ಚು ಸೌಂಡ್ ಮಾಡಿಲ್ಲ. ಆಡಿರೋ 8 ಪಂದ್ಯಗಳಲ್ಲಿ ತಿಲಕ್, ಹೈಯೆಸ್ಟ್ ಸ್ಕೋರ್ ಜಸ್ಟ್ 44 ರನ್ ಮಾತ್ರ. ಇನ್ನು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಅಮೆರಿಕಾ ವಿರುದ್ಧ ಒಂದು ಅರ್ಧಶತಕ ಸಿಡಿಸಿದ್ದು ಬಿಟ್ರೆ, ಉಳಿದ ಪಂದ್ಯಗಳಲ್ಲಿ ಸೈಲೆಂಟ್ ಆಗಿದ್ದಾರೆ. ಇವರಿಬ್ಬರ ಬ್ಯಾಟಿಂಗ್, ಟೀಮ್ ಇಂಡಿಯಾ ಮಿಡಲ್ ಆರ್ಡರ್ ಕಥೆ ಹೇಳುತ್ತವೆ.

ಪ್ರಸಕ್ತ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್​​​​ನಲ್ಲಿ ಅಬ್ಬರಿಸಿದೆ. ಆದ್ರೆ ಟಾಪ್ ಆರ್ಡರ್ ಫೇಲ್ ಆದ್ರೆ ಮಿಡಲ್ ಆರ್ಡರ್ ಸಹ, ದಿಢೀರ್ ಕುಸಿತ ಕಾಣುತ್ತದೆ. ಇದ್ರಿಂದ ತಂಡದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಮಿಡಲ್ ಆರ್ಡರ್ ತಂಡದ ಆಧಾರ ಸ್ಥಂಭ ಅನ್ನೋದು, ಎಲ್ಲರಿಗೂ ಗೊತ್ತು. ಆದ್ರೆ ಮಿಡಲ್ ಆರ್ಡರೇ ಕುಸಿದ್ರೆ, ತಂಡದ ಗತಿ ದೇವರೇ ಗತಿ.

ಇದನ್ನೂ ಓದಿ: ನೇಪಾಳದಲ್ಲಿ ಜೆನ್ ಜೀ ನೇತೃತ್ವ ವಹಿಸಿದ್ದ ಬಾಲೇಂದ್ರ ಶಾಗೆ ಪ್ರಧಾನಿ ಹುದ್ದೆ ಖಚಿತ: ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದಿದ್ದ ಬಾಲೇಂದ್ರ ಶಾ!

Advertisment

suryakumar yadav (1)

ಈ ಹಿಂದೆ ಟೀಮ್ ಇಂಡಿಯಾ ಬ್ಯಾಟರ್ಸ್​ ಸ್ಪಿನ್ ಬೌಲರ್​ಗಳ ವಿರುದ್ಧ, ಸಲೀಸಾಗಿ ರನ್​ ಸ್ಕೋರ್ ಮಾಡ್ತಿದ್ರು. ಆದ್ರೀಗ ಪರಿಸ್ಥಿತಿ ಬದಲಾಗಿದೆ. ಮಿಡಲ್ ಅರ್ಡರ್​ನಲ್ಲಿ ಟೀಮ್ ಇಂಡಿಯಾ, ಸ್ಪಿನ್​​​​ ಚಾಲೆಂಜ್​ಗೆ ಸ್ಟನ್ ಆಗ್ತಿದೆ. ಎದುರಾಳಿಗಳು ಸ್ಪಿನ್ನರ್​ಗಳಿಗೆ ಪಿಚ್ ಸ್ವಲ್ಪ ನೆರವಾದ್ರೆ, ಟೀಮ್ ಇಂಡಿಯಾ ವಿರುದ್ಧ ಮೇಲುಗೈ ಸಾಧಿಸಿಬಿಡ್ತಾರೆ. ಬ್ಯಾಟರ್ಸ್​ನ ಈಸಿಯಾಗಿ ಖೆಡ್ಡಾಕ್ಕೆ ಕೆಡವಿ ಬಿಡ್ತಾರೆ. 

ಟೀಮ್ ಇಂಡಿಯಾ ಮಿಡಲ್ ಆರ್ಡರ್ ಬ್ಯಾಟರ್ಸ್​ ರನ್ ಸ್ಕೋರೇ ಮಾಡ್ತಿಲ್ಲ ಅಂತ ಹೇಳ್ತಿಲ್ಲ. ಆದ್ರೆ ಕನ್ಸಿಸ್ಟೆನ್ಸಿ ಇಲ್ಲ ಅನ್ನೋದು ಮಾತ್ರ, ಒಪ್ಪಿಕೊಳ್ಳಲೇಬೇಕು. ಒಂದೇ ಮಾತಲ್ಲಿ ಹೇಳೋದಾದ್ರೆ, ಟೀಮ್ ಇಂಡಿಯಾ ಮಿಡಲ್ ಆರ್ಡರ್​​ನ ಯಾವತ್ತೂ ನಂಬಿಕೊಂಡಿಲ್ಲ. ಟಾಪ್ ಆರ್ಡರ್ ಫೈಯರ್ ಮಾಡಿದ್ರೆ ಮಾತ್ರ, ಟೀಮ್ ಇಂಡಿಯಾ ಬಿಗ್ ಸ್ಕೋರ್​​​​​​​​ ಕಲೆಹಾಕಲು ಸಾಧ್ಯ.

ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಮಿಡಲ್ ಆರ್ಡರ್​ನಲ್ಲಿ ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಬ್ಯಾಟರ್ಸ್ ಮೇಲೆ ಹೆಚ್ಚು ಡಿಪೆಂಡ್ ಆಗಿರುತ್ತದೆ.  ಒಂದು ವೇಳೆ ಇವರಿಬ್ಬರು ವೇಗಿವಾಗಿ ರನ್ ಸ್ಕೋರ್ ಮಾಡದೆ ಕೈಕೊಟ್ರೆ, ಲೋವರ್ ಡೌನ್ ದ ಆರ್ಡರ್ ಮೇಲೆ ಎಕ್ಸ್ಟ್ರಾ ಪ್ರೆಶರ್ ಬೀಳುತ್ತದೆ. ಅಲ್ಲಿ ತಂಡ ಕುಸಿತ ಕಾಣುತ್ತದೆ.

Advertisment

ಪವರ್ ಪ್ಲೇ ಮತ್ತು ಡೆತ್ ಓವರ್ಸ್​​ ಮಾತ್ರ, ಪಂದ್ಯದ ಫಲಿತಾಂಶವನ್ನ ನಿರ್ಧಾರ ಮಾಡೋದಿಲ್ಲ. ಮಿಡಲ್ ಓವರ್ಸ್​ನಲ್ಲಿ ಬ್ಯಾಟರ್ಸ್ ಅಬ್ಬರಿಸಿದ್ರೆ ತಂಡ ಅರ್ಧ ಪಂದ್ಯ ಗೆದ್ದಂತೆ ಅನ್ನೋದನ್ನ ಮರೆಯೋ ಹಾಗಿಲ್ಲ.

ಇದನ್ನೂ ಓದಿ:ಪ್ರಿಯಕರನ ಜೊತೆ ಸೇರಿ ಗಂಡನ ಪ್ರಾಣ ತೆಗೆದ ಹೆಂಡತಿ!: ಪ್ರಿಯಕರನ ಜೊತೆ ಮದುವೆ, ಈಗ ಜೈಲು ಪಾಲು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs NewZealand IND vs NZ Suryakumar Yadav profile Team India T20 world cup T20I
Advertisment
Advertisment
Advertisment