/newsfirstlive-kannada/media/media_files/2025/10/25/shrikant-jichkar-1-2025-10-25-21-45-40.jpg)
ಒಬ್ಬ ವ್ಯಕ್ತಿಗೆ ಎಷ್ಟು ಶಿಕ್ಷಣ ಸಿಗಬಹುದು? 2, 4, 10 ಡಿಗ್ರಿಗಳು.. 20ಕ್ಕೂ ಹೆಚ್ಚು ಡಿಗ್ರಿಗಳನ್ನು ಗಳಿಸಿದ, ಸುಮಾರು 42 ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ, ಎರಡು ಬಾರಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ಮತ್ತು ಏಕಕಾಲದಲ್ಲಿ 14 ಸಚಿವಾಲಯಗಳ ಉಸ್ತುವಾರಿ ವಹಿಸಿಕೊಂಡ ಒಬ್ಬ ಸೂಪರ್ ಹೀರೋ ಇದ್ದಾರೆ. ಅವರ ಹೆಸರು ಶ್ರೀಕಾಂತ್ ಜಿಚ್ಕರ್ .
ಡಾ.ಶ್ರೀಕಾಂತ್ 1954ರಲ್ಲಿ ಜನಿಸಿದರು. ಇವರು ಎಂಬಿಬಿಎಸ್ ಮತ್ತು ಎಂಡಿ ಮುಗಿಸಿ ವೈದ್ಯರಾದರು. ನಂತರ LLB ಪದವಿ ಪಡೆದುಕೊಂಡರು. ಅವರಿಗೆ ಬರವಣಿಗೆಯ ಮೇಲೆ ಉತ್ಸಾಹ ಇತ್ತು. ಹಾಗಾಗಿ ನಂತರ ಪತ್ರಿಕೋದ್ಯಮ ಪದವಿ ಪಡೆದರು. ಹಾಗೆಯೇ ವ್ಯವಹಾರದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಡಿಬಿಎಂ ಮತ್ತು ಎಂಬಿಎ ಪದವಿ ಪೂರ್ಣಗೊಳಿಸಿದರು.
ಇದನ್ನೂ ಓದಿ:ಹೋಂ ಸ್ಟೇ ಸ್ನಾನದ ಗೃಹದಲ್ಲಿ ಅನುಮಾನಾಸ್ಪದವಾಗಿ ಪ್ರಾಣ ಬಿಟ್ಟ ಯುವತಿ.. ಅಸಲಿಗೆ ಆಗಿದ್ದೇನು?
/filters:format(webp)/newsfirstlive-kannada/media/media_files/2025/10/25/shrikant-jichkar-2-2025-10-25-21-45-55.jpg)
ಪುಸ್ತಕಗಳ ಮೇಲಿನ ಅವರ ಪ್ರೀತಿಯಿಂದಾಗಿ ಬಿ.ಲಿಬ್ ಮುಗಿಸಿದರು. ಇಂಗ್ಲಿಷ್ ಸಾಹಿತ್ಯ, ಸಂಸ್ಕೃತ, ತತ್ವಶಾಸ್ತ್ರ, ಅರ್ಥಶಾಸ್ತ್ರ, ಪ್ರಾಚೀನ ಭಾರತೀಯ ಇತಿಹಾಸ, ಸಂಸ್ಕೃತಿ, ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದಲ್ಲಿ ಎಂಎ ಪದವಿ ಪಡೆದರು.
ಮೊದಲು IPS, ನಂತರ IAS
ನಮ್ಮಲ್ಲಿ ಲಕ್ಷಾಂತರ ಯುವಕರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಅವರಲ್ಲಿ ಒಮ್ಮೆ ಉತ್ತೀರ್ಣರಾದರೆ ದೊಡ್ಡ ಕನಸು ನನಸು ಎಂದು ಬೀಗುತ್ತಾರೆ. ಡಾ.ಶ್ರೀಕಾಂತ್ ಈ ಸಾಧನೆಯನ್ನು ಒಮ್ಮೆ ಅಲ್ಲ, ಎರಡು ಬಾರಿ ಮಾಡಿದರು. 1978 ರಲ್ಲಿ, ಅವರು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಎರಡು ವರ್ಷಗಳ ನಂತರ 1980ರಲ್ಲಿ ಅವರು ಮತ್ತೆ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡರು. ಪರೀಕ್ಷೆಯಲ್ಲಿ ಱಂಕ್​ ಮೇಲೆ ಪಾಸ್​ ಆಗಿ ಭಾರತೀಯ ಆಡಳಿತ ಸೇವೆ (ಐಎಎಸ್)ಗೆ ಆಯ್ಕೆಯಾದರು.
/filters:format(webp)/newsfirstlive-kannada/media/media_files/2025/10/25/shrikant-jichkar-2025-10-25-21-46-10.jpg)
ಮಹಾರಾಷ್ಟ್ರದ ಅತ್ಯಂತ ಕಿರಿಯ ಶಾಸಕ
ಡಾ. ಶ್ರೀಕಾಂತ್ ತಮ್ಮ ಐಎಎಸ್ ಉದ್ಯೋಗವನ್ನು ತೊರೆದು ರಾಜಕೀಯಕ್ಕೆ ಬಂದರು. 1980ರಲ್ಲಿ, 26ನೇ ವಯಸ್ಸಿನಲ್ಲಿ, ಅವರು ಮಹಾರಾಷ್ಟ್ರ ವಿಧಾನಸಭೆಯ (ಎಂಎಲ್ಎ) ಸದಸ್ಯರಾದರು. ಇದು ಒಂದು ದಾಖಲೆಯಾಗಿದೆ. ನಂತರ ಅವರನ್ನು ಮಹಾರಾಷ್ಟ್ರ ಸರ್ಕಾರದಲ್ಲಿ ರಾಜ್ಯ ಸಚಿವರನ್ನಾಗಿ ನೇಮಿಸಲಾಯಿತು. ಹಣಕಾಸು, ಯೋಜನೆ, ಕೈಗಾರಿಕೆ, ಸಾಂಸ್ಕೃತಿಕ ವ್ಯವಹಾರಗಳು, ಸಾರ್ವಜನಿಕ ಆರೋಗ್ಯ ಮತ್ತು ಇಂಧನದಂತಹ ಪ್ರಮುಖ ಇಲಾಖೆಗಳನ್ನು ಒಳಗೊಂಡಂತೆ ಏಕಕಾಲದಲ್ಲಿ 14 ವಿಭಿನ್ನ ಖಾತೆಗಳನ್ನು ಹೊಂದಿದ್ದರು.
ಶ್ರೀಕಾಂತ್ ಜಿಚ್ಕರ್ ಸಾವು
ಡಾ. ಶ್ರೀಕಾಂತ್ ಒಬ್ಬ ನಾಯಕ ಮಾತ್ರವಲ್ಲದೇ, ಪ್ರಸಿದ್ಧ ಸಂಸ್ಕೃತ ವಿದ್ವಾಂಸರು. ಕಲಾ ಪ್ರೇಮಿಯೂ ಆಗಿದ್ದರು. ಅವರು ನಾಗ್ಪುರದಲ್ಲಿ ‘ಕಲಾ ಸಾಗರ್’ ಎಂಬ ಕಲಾ ಗ್ಯಾಲರಿ ಮತ್ತು 50,000ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯವನ್ನು ಸ್ಥಾಪಿಸಿದರು. ದುರಾದೃಷ್ಟವಶಾತ್, ಈ ಜ್ಞಾನ ಮತ್ತು ಪ್ರತಿಭೆ ಜೂನ್ 2, 2004 ರಂದು ರಸ್ತೆ ಅಪಘಾತದಲ್ಲಿ ನಿಧನರಾದರು. ಆ ಸಮಯದಲ್ಲಿ ಡಾ. ಶ್ರೀಕಾಂತ್ ಜಿಚ್ಕರ್ ಕೇವಲ 49 ವರ್ಷ ವಯಸ್ಸು.
ಇದನ್ನೂ ಓದಿ:ಶಬರಿಮಲೆ ದೇವಸ್ಥಾನದ ಚಿನ್ನ ಕಳುವು ಪ್ರಕರಣದಲ್ಲಿ ಬಿಗ್ ಟ್ವಿಸ್ಟ್.. ಏನದು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us