/newsfirstlive-kannada/media/media_files/2025/10/25/ayyappa-2025-10-25-19-27-08.jpg)
ಅಲಂಕಾರ ಪ್ರಿಯ.. ಆಪತ್ಭಾಂಧವ ಅಯ್ಯಪ್ಪನ ಗುಡಿಗೆ ಅಲಂಕರಿಸಿದ್ದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಬೆಂಗಳೂರು.. ಬಳ್ಳಾರಿ ಜಿಲ್ಲೆಗಳಿಗೆ ಎಂಟ್ರಿ ಕೊಟ್ಟ ಎಸ್​ಐಟಿ ಅಧಿಕಾರಿಗಳು ಕೆಲ ವಿಚಾರವನ್ನ ಕಲೆ ಹಾಕಿದ್ದಾರೆ. ಇದರ ನಡುವೆ ಅನಾಥ ರಕ್ಷಕನೇ ಶರಣಂ ಅಯ್ಯಪ್ಪ ಅಂತ ಕೂಗ್ತಿದ್ದ ಭಕ್ತರು.. ನಮ್ಮ ಸ್ವಾಮಿಗೇ ರಕ್ಷಣೆ ಇಲ್ವಾ ಅಂತ ಪಶ್ನೆ ಮಾಡ್ತಿದ್ದಾರೆ.
ಶಬರಿಪೀಠ ಗರ್ಭ ಗುಡಿ ಮುಂದೆ ಇರೋ ದ್ವಾರ ಪಾಲಕರಿಗೆ ಲೇಪಿಸಿದ್ದ ಚಿನ್ನಕ್ಕೆ ಹಾಕಿದ ಕನ್ನ ಕೇಸ್​.. ಭೂಲೋಕವಾಸನ ಸನ್ನಿಧಿಯಲ್ಲಾದ ಚಿನ್ನ ಕಳವು ಕೇಸ್​ ಸ್ವಾಮಿ ಭಕ್ತರ ಮನವನ್ನ ತಲ್ಲಣಗೊಳಿಸಿದೆ.. ಪಂಪಾವಾಸ.. ಪಂದಳರಾಜನ ಚಿನ್ನ ಕದ್ದವರನ್ನ ಹಿಡಿಲೇ ಬೇಕು ಅನ್ನೋ ಪ್ರೆಶರ್ ಸದ್ಯ ಕೇರಳದ ಎಸ್​ಐಟಿ ತಂಡದ ಮೇಲಿದೆ.. ದೇವಸ್ಥಾನದ ಅರ್ಚಕ ಉನ್ನಿಕೃಷ್ಣನ್ ಪೊಟ್ಟಿಯ ಹಿಂದೆ ಬಿದ್ದಿರೋ ಎಸ್​ಐಟಿಗೆ ಮತ್ತೊಂದು ಲಿಂಕ್ ಸಿಕ್ಕಿದೆ.
ಇದನ್ನೂ ಓದಿ: ಅಶ್ವಿನಿ ಅವರೇ ಇನ್ನೂ ಚಿಕ್ಕವರಾಗೋಕೆ ಹೋಗಬೇಡಿ -ಕಿಚ್ಚ ಸುದೀಪ್ ಮತ್ತೆ ಕ್ಲಾಸ್​..!
ಕರಿಮಲೆವಾಸನ ಅನುಮತಿ ಪಡೆದು ಕೇರಳದಿಂದ ಹೊರಟ ಎಸ್​ಐಟಿ.. ಸೀದಾ ಬಂದಿಳಿದಿದ್ದು ಬೆಂಗಳೂರಲ್ಲಿರೋ ಅರ್ಚಕ ಉನ್ನಿಕೃಷ್ಣನ್​ ಪೊಟ್ಟಿ ಮನೆಗೆ.. ಶ್ರೀರಾಂಪುರದ ಚೌಡೇಶ್ವರಿ ದೇವಸ್ಥಾನ ಬಳಿ ಉನ್ನಿಕೃಷ್ಣನ್ ಮನೆ ಕೇರಳ ಎಸ್​ಐಟಿ ಅಧಿಕಾರಿಗಳ ತನಿಖಾ ಅಡ್ಡೆಯಾಗಿತ್ತು. ಬೆಳಗ್ಗೆಯಿಂದ ಅರ್ಚಕರ ಮನೆಯಲ್ಲಿ ಇಂಚಿಂಚು ಕೆದಕಿ.. ಹಣ & ಚಿನ್ನಾಭರಣ, ಆಸ್ತಿಪತ್ರ ಕುರಿತ ಪರಿಶೀಲಿಸಿದ್ರು.
ಹದಿನೆಂಟು ಮೆಟ್ಟಿಲ ಭೂಮಿಯಿಂದ ಬಳ್ಳಾರಿಗೂ ನಂಟು ಹರಡಿತ್ತು.. ಮಣಿಕಂಠನ ಬಳಿ ಕದ್ದ ಚಿನ್ನದಲ್ಲಿ 476 ಗ್ರಾಂ ಚಿನ್ನವನ್ನ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಶಾಪ್​ ಮಾಲೀಕ ಗೋವರ್ಧನ್ ಖರೀದಿಸಿದ್ದರಂತೆ. ಈ ರೊದ್ದಂ ಶಾಪ್​ ಮೇಲೆ ಎಸ್ಐಟಿ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ. ಗೋವರ್ಧನ್​ಗೆ SIT ವಿಚಾರಣೆ ಮಾಡಿದ್ದು, ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ.
ಚಿನ್ನಕ್ಕೆ ಕನ್ನ!
2019 ರಲ್ಲಿ.. ಟ್ರಾವಂಕೂರ್ ದೇವಸ್ವಂ ಬೋರ್ಡ್.. 42.8 ಕೆಜಿ ತೂಕದ ವಸ್ತುಗಳನ್ನ ಚೆನ್ನೈನಲ್ಲಿರುವ ಉನ್ನಿಕೃಷ್ಣನ್ ಪೊಟ್ಟಿಗೆ ಹಸ್ತಾಂತರಿಸಿತ್ತು. ಚಿನ್ನ ಲೇಪಿತ ತಾಮ್ರದ ತಟ್ಟೆಗಳನ್ನ ಮತ್ತೆ ದೇವಸ್ಥಾನಕ್ಕೆ ತಂದಾಗ, ಅವುಗಳ ತೂಕವು 38.258 ಕೆಜಿಗೆ ಇಳಿಕೆಯಾಗಿತ್ತು. ಉಳಿದಿದ್ದ ಹೆಚ್ಚುವರಿ 4 ಕೆಜಿ ಚಿನ್ನ ಎಲ್ಲಿದೆ ಎಂಬ ವಿಚಾರವಾಗಿ SIT ತನಿಖೆ ನಡೆಸುತ್ತಿದೆ. 4 ಕೇ.ಜಿ ಪೈಕಿ 475 ಗ್ರಾಂ ತೂಕದ ಚಿನ್ನವನ್ನ ಬಳ್ಳಾರಿ ರೊದ್ದಂ ಜ್ಯುವೆಲ್ಲರಿ ಮಾಲೀಕ ಗೋವರ್ಧನ್​ಗೆ ಮಾರಾಟ ಮಾಡಿರೋದು ಪತ್ತೆಯಾಗಿದೆ. ಉನ್ನಿಕೃಷ್ಣನ್ ಪೊಟ್ಟಿ ದಕ್ಷಿಣ ಭಾರತದ ರಾಜ್ಯಗಳ ಹಲವು ದೇವಾಲಯಗಳಿಗೆ ಸಾಗಿಸಿರೋದು ಬೆಳಕಿಗೆ.
ಇದನ್ನೂ ಓದಿ:ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನ ನಾಪತ್ತೆ ಕೇಸ್: ಎಸ್‌ಐಟಿಯಿಂದ ತನಿಖೆಗೆ ಹೈಕೋರ್ಟ್ ಆದೇಶ
ಶಮರಿಮಲೆಯಲ್ಲಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳದ ತಿರುವನಂತಪುರಂನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಯಿತು. ರಸ್ತೆ ಮೇಲೆ ಕುಳಿತು ಅಯ್ಯಪ್ಪಸ್ವಾಮಿ ಭಜನೆ ಮಾಡ್ತಾ ಆಕ್ರೋಶ ವ್ಯಕ್ತಪಡಿಸಿದ್ರು. ಅದೇನೆ ಇರಲಿ, ಮಕರ ಜ್ಯೋತಿಯಾಗಿ ಕಾಣಿಸಿಕೊಂಡು.. ಭಕ್ತರ ರಕ್ಷಿಸೋ ವಿಳ್ಳಾಳಿ ವೀರನ ಗುಡಿಯ ಚಿನ್ನ ಕದ್ದ ಕಳ್ಳರು ಆದಷ್ಟು ಬೇಕ ಸಿಗಲಿ.. ಸ್ವಾಮಿಯ ಚಿನ್ನ ಮತ್ತೆ ಶಬರಿ ಪೀಠಕ್ಕೆ ಬರಲಿ ಅನ್ನೋದೆ ಭಕ್ತರ ಬೇಡಿಕೆ..
ಇದನ್ನೂ ಓದಿ: ಭಾಗ್ಯಳಿಗೆ ಹೊಸ ಪೂಜಾ ಸಿಕ್ಕಾಯ್ತು.. ಯಾರು ಇವರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us