ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಿರುವ ನಿರುದ್ಯೋಗ.. ಸರ್ಕಾರಿ ಸಮೀಕ್ಷೆಯಿಂದ ಮಾಹಿತಿ ಬಹಿರಂಗ

ನಿರುದ್ಯೋಗ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸರ್ಕಾರಿ ಸಮಿಕ್ಷೆಯೊಂದು ಮಾಹಿತಿ ಬಹಿರಂಗಗೊಳಸಿದೆ. ಇದೇ ವರ್ಷದ ಆಗಸ್ಟ್​ನಲ್ಲಿದ್ದ ನಿರುದ್ಯೋಗಕ್ಕಿಂತ ಸೆಪ್ಟೆಂಬರ್​ನಲ್ಲಿ 5.2 ರಷ್ಟು ಹೆಚ್ಚಳವಾಗಿದೆ.

author-image
Bhimappa
JOB_NEW (1)
Advertisment

ನವದೆಹಲಿ: ದೇಶದಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರ ನಿರುದ್ಯೋಗ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸರ್ಕಾರಿ ಸಮಿಕ್ಷೆಯೊಂದು ಮಾಹಿತಿ ಬಹಿರಂಗಗೊಳಸಿದೆ. 

ಇದೇ ವರ್ಷದ ಆಗಸ್ಟ್​ನಲ್ಲಿದ್ದ ನಿರುದ್ಯೋಗಕ್ಕಿಂತ ಸೆಪ್ಟೆಂಬರ್​ನಲ್ಲಿ 5.2 ರಷ್ಟು ಹೆಚ್ಚಳವಾಗಿದೆ. ಆಗಸ್ಟ್​ನಲ್ಲಿ 5.1, ಜುಲೈ 5.6, ಮೇ ಮತ್ತು ಜೂನ್‌ನಲ್ಲಿ ಶೇ. 5.6 ರಷ್ಟು ಇತ್ತು ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಎಂಒಎಸ್​ಪಿಐ) ಬಿಡುಗಡೆ ಮಾಡಿದ  Periodic Labour Force Survey (PLFS) ಸಮೀಕ್ಷೆಯಿಂದ ತಿಳಿದು ಬಂದಿದೆ. 

ಇದನ್ನೂ ಓದಿ:ದೀಪಾವಳಿ ಧಮಾಕ; ರಾಜ್ಯದ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್.. ತುಟ್ಟಿ ಭತ್ಯೆ ಹೆಚ್ಚಳ, ಎಷ್ಟು?

JOB (1)

ಪಿರಿಯಡಿಕ್ ಲೇಬರರ್ ಫೋರ್ಸ್​ ಸರ್ವೇ ಮೊದಲು ರಿಲೀಸ್ ಮಾಡಿದ್ದ ಸಮೀಕ್ಷೆಯಲ್ಲಿ ಏಪ್ರಿಲ್​ನಲ್ಲಿ 5.1 ಇತ್ತು. ಇದೇ 15 ಹಾಗೂ ಇದಕ್ಕಿಂತ ಹೆಚ್ಚಿನ ವಯಸ್ಸಿನವರು ನಿರುದ್ಯೋಗದಿಂದ ಇದ್ದಾರೆ. ಗ್ರಾಮೀಣ ಭಾಗದಲ್ಲಿ ಆಗಸ್ಟ್​ನಲ್ಲಿ 4.3 ಇದ್ರೆ, ಸೆಪ್ಟೆಂಬರ್​ನಲ್ಲಿ 4.6ಗೆ ಏರಿಕೆ ಆಗಿದೆ. ಆದರೆ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಹೆಚ್ಚಾಗುತ್ತಿರುವುದು ಆತಂಕ ತರಿಸಿದೆ ಎನ್ನಲಾಗುತ್ತಿದೆ.   

ನಗರ ಪ್ರದೇಶಗಳಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರು ಕೆಲಸ ಇಲ್ಲದೇ ಇರುವುದು ಕೂಡ ಏರಿಕೆ ಆಗಿದೆ. ಮಹಿಳೆಯರ ನಿರುದ್ಯೋಗ ಪ್ರಮಾಣ 2025ರ ಆಗಸ್ಟ್​ನಲ್ಲಿ ಶೇಕಡಾ 8.9 ಇದ್ದರೇ ಇದು ಸೆಪ್ಟೆಂಬರ್​ನಲ್ಲಿ ಶೇಕಡಾ 9.3ಕ್ಕೆ ಏರಿಕೆ ಆಗಿದೆ. ಇದೇ ರೀತಿ ಗ್ರಾಮೀಣ ಭಾಗದಲ್ಲೂ ಮಹಿಳೆಯರ ನಿರುದ್ಯೋಗ ಹೆಚ್ಚಳವಾಗಿರುವುದು ಸಮೀಕ್ಷೆಯಿಂದ ಬಹಿರಂಗಗೊಂಡಿದೆ ಎಂದು ಹೇಳಲಾಗುತ್ತಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

railway, railway jobs, jobs, Central government jobs BANKING JOBS, Job
Advertisment