/newsfirstlive-kannada/media/post_attachments/wp-content/uploads/2024/08/vidhana-sowdha.jpg)
ಬೆಂಗಳೂರು: ದೀಪಾವಳಿಗೆ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್ ನೀಡಿದ್ದು ತುಟ್ಟಿ ಭತ್ಯೆಯನ್ನು (ಡಿಎ) ಶೇಕಡಾ 2ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಈ ಆದೇಶವು ಜುಲೈ 1 ರಿಂದಲೇ ಅನ್ವಯವಾಗುತ್ತದೆ.
ರಾಜ್ಯದ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ರಾಜ್ಯ ಸರ್ಕಾರ ಶೇಕಡಾ 2ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಡಿದೆ. ಇದು ಜುಲೈ ಆರಂಭದಿಂದಲೇ ಅನ್ವಯವಾಗುತ್ತದೆ. ಮೂಲವೇತನದ ಶೇಕಡಾ 12.25 ರಿಂದ ಶೇಕಡಾ 14.25ಕ್ಕೆ ರಾಜ್ಯ ಸರ್ಕಾರ ಇಂದು ಪರಿಷ್ಕರಿಸಿದೆ. ಈ ಮೊದಲು ಕೇಂದ್ರ ಸರ್ಕಾರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ತುಟ್ಟಿಭತ್ಯೆ ಏರಿಕೆ ಮಾಡಿದೆ. ಇದು ಮೊದಲಿನಿಂದ ಬಂದಂತ ಸಂಪ್ರದಾಯವಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಅ 3ರಷ್ಟು ಡಿಎ ಅನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿತ್ತು.
ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಕೇಸ್​; ಇಸ್ಕಾನ್​ಗೆ ಮನೆ ದಾನ ಮಾಡಿದ ಮೃತ ಡಾ ಕೃತಿಕಾ ತಂದೆ
ತುಟ್ಟಿ ಭತ್ಯೆ ಹೆಚ್ಚಳ ಮಾಡಬೇಕು ಎಂಬುದು ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಆಗಿತ್ತು. ಅದರಂತೆ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದರು. ಇದೀಗ ಅವರ ಬೇಡಿಕೆಗಳಿಗೆ ಸ್ಪಂದಿಸಿರುವ ಸಿದ್ದರಾಮಯ್ಯ ಶೇಕಡಾ 2 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿರುವ ಪ್ರಸ್ತಾಪ ಇರುವ ಕಡತಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ. ಇದು ಸರ್ಕಾರ ನೌಕರರಿಗೆ ದೀಪಾವಳಿ ಕೊಡುಗೆಯಾಗಿದೆ ಎನ್ನಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ