/newsfirstlive-kannada/media/media_files/2025/09/04/job_it-2025-09-04-07-31-49.jpg)
ಇಂದು ಉದ್ಯೋಗ ಹುಡುಕೋದು ಅಷ್ಟು ಸುಲಭದ ಕೆಲಸವಲ್ಲ. ಕೇವಲ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ಮಾಡಿದ ಮಾತ್ರಕ್ಕೆ ಇಲ್ಲಿ ಕೆಲಸ ಸಿಗಲ್ಲ. ಅದಕ್ಕೆ ಕೆಲವು ಸ್ಕಿಲ್ಸ್ಗಳು ಮುಖ್ಯವಾಗಿರುತ್ತೆ. ಮೊದಲೆಲ್ಲಾ ಡಿಗ್ರಿ ಮಾಡಿದರೆ ಜಾಬ್ ಸಿಗ್ತಿತ್ತು. ಮಾರ್ಕ್ಸ್ ಕಾರ್ಡ್ ನೋಡಿ ಕೆಲಸ ಕೊಡ್ತಿದ್ರು. ಈಗ ನಿಮ್ಮ ಸರ್ಟಿಫಿಕೇಟ್ ಜತೆಗೆ ಸ್ಕಿಲ್ಸ್ ಎಷ್ಟಿದೆ? ಅಂತಾ ನೋಡ್ತಾರೆ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಕಿಲ್ಸ್ ನೀವು ಕಲಿತರೆ ಪಕ್ಕಾ ಕೆಲಸ ಸಿಗುತ್ತೆ. ಇಲ್ಲವಾದಲ್ಲಿ ಉದ್ಯೋಗ ಸಿಗುವುದು ಕಷ್ಟ. ಹಾಗಾಗಿ ಸದ್ಯ 2025ರಲ್ಲಿ ಡಿಮ್ಯಾಂಡ್ ಇರೋ ಜಾಬ್ಗಳು ಯಾವು ಅಂತಾ ಗೊತ್ತಾದ್ರೆ ಅದಕ್ಕೆ ಸಂಬಂಧ ಸ್ಕಿಲ್ಸ್ ಕಲಿಯಬಹುದು.
ಹಾಗಾದ್ರೆ ಹಾರ್ವರ್ಡ್ ಬಿಸಿನೆಸ್ ರಿವ್ಯೂ ಪ್ರಕಟಿಸಿದ ಸಮೀಕ್ಷೆ ಪ್ರಕಾರ ವೇಗವಾಗಿ ಬೆಳೆಯುತ್ತಿರುವ ಬೇಡಿಕೆಯ ಉದ್ಯೋಗಗಳು ಯಾವ್ಯಾವು?
2025ರ ಏಪ್ರಿಲ್ರಿಂದ ಜೂನ್ ಅವಧಿಯಲ್ಲಿ ಈ ಉದ್ಯೋಗಗಳಿಗೆ ಗಣನೀಯ ಬೇಡಿಕೆ ಇದೆ. ಗಣಿತ ತಜ್ಞ, ಮಾನಸಿಕ ಆರೋಗ್ಯ ತಜ್ಞ, ಕಾರ್ಯಕ್ಷಮತೆ ವ್ಯವಸ್ಥಾಪಕ, ಗುತ್ತಿಗೆ ನಿರ್ವಾಹಕರು, ಸ್ಟಾಕ್ ಅಸೋಸಿಯೇಟ್, ಅನುಸರಣಾ ವಿಶ್ಲೇಷಕ, ನಿರ್ವಹಣಾ ಕೆಲಸಗಾರ, ಮರ್ಚಂಡೈಸ್ ಅಸೋಸಿಯೇಟ್, ಡೇಟಾ ಸೈನ್ಸ್ ತಜ್ಞ, ಮೀಟ್ ಕಟರ್ ಈ ಹುದ್ದೆಗಳಿಗೆ ಭಾರೀ ಬೇಡಿಕೆ ಇದೆ. ನೀವು ತಾಂತ್ರಿಕ, ಆರೋಗ್ಯ, ಚಿಲ್ಲರೆ ವ್ಯಾಪಾರ ಹಾಗೂ ನಿರ್ವಹಣಾ ಹುದ್ದೆಗಳ ಸಮತೋಲನಿತ ಮಿಶ್ರಣ ಕಾಣಬಹುದಾಗಿದೆ.
ಈ ಹುದ್ದೆಗಳಿಗೆ ಹೆಚ್ಚು ಬೇಡಿಕೆ ಯಾಕೆ?
AI ತಂತ್ರಜ್ಞಾನ ವೇಗವಾಗಿ ವ್ಯಾಪಾರಗಳನ್ನು ಮರುರೂಪಿಸುತ್ತಿದೆ. ಹಾಗಾಗಿ ಡೇಟಾ ಸೈನ್ಸ್ ತಜ್ಞರು ಮತ್ತು ವಿಶ್ಲೇಷಕರು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದ್ದಾರೆ. ಹಾಗೆಯೇ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲೂ ಚೇತರಿಕೆ ಕಂಡುಬಂದಿದ್ದು, ಸ್ಟಾಕ್ ಮತ್ತು ಮರ್ಚಂಡೈಸ್ ಅಸೋಸಿಯೇಟ್‌ಗಳ ಬೇಡಿಕೆ ಕೂಡ ಹೆಚ್ಚಾಗಿದೆ. ಈ ಬಾರಿ ಅಗ್ರ ಸ್ಥಾನವನ್ನು ಸಾಫ್ಟ್‌ವೇರ್ ಎಂಜಿನಿಯರ್ ಕಾಯ್ದುಕೊಂಡ್ರೆ, ನಂತರ ಸ್ಥಾನದಲ್ಲಿ ಮಾರಾಟಗಾರರು ಹಾಗೂ ನರ್ಸ್‌ಗಳು ಇದ್ದಾರೆ.
ಇದನ್ನೂ ಓದಿ: ಮುನಿರತ್ನನ ಫ್ರೀಯಾಗಿ ಬಿಟ್ಟು ಬಿಡೋಕೆ ಆಗುತ್ತಾ..? ಮಾಜಿ ಸಂಸದ DK ಸುರೇಶ್
2025ರಲ್ಲಿ ಹೆಚ್ಚು ಬೇಡಿಕೆಯ ಹುದ್ದೆಗಳು?
ಸಾಫ್ಟ್‌ವೇರ್ ಎಂಜಿನಿಯರ್, ಮಾರಾಟಗಾರ, ನರ್ಸ್, ಯೋಜನಾ ವ್ಯವಸ್ಥಾಪಕ, ಗ್ರಾಹಕ ಸೇವಾ ಪ್ರತಿನಿಧಿ, ಮಾರಾಟ ವ್ಯವಸ್ಥಾಪಕ, ಲೆಕ್ಕಪರಿಶೋಧಕ, ಖಾತೆ ವ್ಯವಸ್ಥಾಪಕ, ಎಲೆಕ್ಟ್ರಿಕಲ್ ಎಂಜಿನಿಯರ್, ಡೇಟಾ ವಿಶ್ಲೇಷಕ ಹುದ್ದೆಗಳಿಗೆ ಭಾರೀ ಡಿಮ್ಯಾಂಡ್ ಇದೆ. ನೀವು ಗಮನಿಸಬೇಕಾದ ವಿಷಯ ಅಂದ್ರೆ ಡೇಟಾ ವಿಶ್ಲೇಷಕರು ಮೊದಲ ಬಾರಿಗೆ ಟಾಪ್ 10 ಪಟ್ಟಿಗೆ ಪ್ರವೇಶಿಸಿದ್ದಾರೆ. ಇದು AI ಆಧಾರಿತ ಡಿಜಿಟಲ್ ರೂಪಾಂತರದ ವೇಗ ಹೆಚ್ಚುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
2025ರಲ್ಲಿ ಉದ್ಯೋಗ ಮಾರುಕಟ್ಟೆ ವ್ಯಾಪಕವಾಗಿದೆ. ತಾಂತ್ರಿಕ ಹುದ್ದೆಗಳಿಂದ ಹಿಡಿದು ಆರೋಗ್ಯ ಸೇವೆಗಳು, ಚಿಲ್ಲರೆ ವ್ಯಾಪಾರದಿಂದ ಹಿಡಿದು ನಿರ್ವಹಣಾ ಕೆಲಸವರೆಗೆ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧಾತ್ಮಕ ನೇಮಕಾತಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿಭಾವಂತರಿಗೆ ಅವಕಾಶಗಳು ಹೆಚ್ಚಾಗಲಿವೆ. ಕಂಪನಿಗಳಿಗೆ ಉತ್ತಮ ಕೌಶಲ್ಯ ಇರೋ ಅಭ್ಯರ್ಥಿಗಳು ಸಿಗುವುದು ಅಷ್ಟು ಸುಲಭವಲ್ಲ ಎನ್ನಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ