ಮಾನಸಿಕ ಸಮಸ್ಯೆಗಳಿಗೂ ಅಲ್ಜಮೈರ್ ಕಾಯಿಲೆಗೂ ಇದೆ ಒಂದು ನಂಟು
ದೀರ್ಘಕಾಲಿಕ ಖಿನ್ನತೆಯಿಂದ ಬಳಲಿದವರಲ್ಲಿ ಕಂಡು ಬರುತ್ತೆ ಈ ಕಾಯಿಲೆ
ಖಿನ್ನತೆಯಿಂದಾಗಿ ಮೆದುಳಿನ ಆ ಭಾಗಕ್ಕೆ ಹಾನಿ, ಅಲ್ಜಮೈರ್ಗೆ ಆಹ್ವಾನ
ಅಲ್ಜಮೈರ್ ನರರೋಗಕ್ಕೆ ಸಂಬಂಧಿಸಿದ ಕಾಯಿಲೆ. ಈ ಮರೆವಿನ ಕಾಯಿಲೆ ಮನುಷ್ಯನನ್ನು ಇದ್ದು ಇಲ್ಲದಂತೆ ಮಾಡಿ ಬಿಡುತ್ತೆ. ಹತ್ತು ಸೆಕೆಂಡ್ ಹಿಂದೆ ಮಾತನಾಡಿದ ಮಾತು. ಮಾಡಿದ ಕೆಲಸ ಕೂಡ ಮರೆತು ಹೋಗುವಂತೆ ಮಾಡುತ್ತದೆ. ಈ ಒಂದು ಕಾಯಿಲೆ ಅಕ್ಷರಶಃ ನೆನಪಿನ ಶಕ್ತಿಯ ವ್ಯವಸ್ಥೆಯ ಮೇಲೆಯೇ ದಾಳಿಯಿಟ್ಟುಬಿಡುತ್ತದೆ. ಒಂದು ಅಂದಾಜಿನ ಪ್ರಕಾರ ಜಗತ್ತಿನಲ್ಲಿ 40 ಲಕ್ಷಕ್ಕೂ ಅಧಿಕ ಜನರು ಈ ಭೀಕರ ಕಾಯಿಲೆಯೊಂದಿಗೆ ತಮ್ಮ ವೃದ್ಧಾಪ್ಯವನ್ನು ದೂಡುತ್ತಿದ್ದಾರೆ. ಅಲ್ಜಮೈರ್ ಕಾಯಿಲೆ ಅನ್ನೋದು ಈಗ ಸರ್ವೇಸಾಮಾನ್ಯವಾಗಿ ಹೋಗಿದೆ. ಇದರ ಬಗ್ಗೆ ಜಾಗೃತಿ ಚಿಕಿತ್ಸೆಯ ಪ್ರಮಾಣ ಎಲ್ಲವೂ ಕಡಿಮೆ ಇರುವುದರಿಂದಾಗಿ ಇದು ಈಗ ವ್ಯಾಪಕವಾಗಿದೆ.
ಇದನ್ನೂ ಓದಿ: Good News: ಮಾರಣಾಂತಿಕ ಕ್ಯಾನ್ಸರ್ಗೆ ಸಿಕ್ಕೇ ಬಿಡ್ತು ರಾಮಬಾಣ; ಈ ವ್ಯಾಕ್ಸಿನ್ ಪವರ್ ಎಂತಹದು..?
ಇದರ ಜೊತೆ ಈಗ ಮತ್ತೊಂದು ದೊಡ್ಡ ಆತಂಕಕಾರಿ ವಿಷಯವೊಂದು ಬಹಿರಂಗಗೊಂಡಿದೆ. ಮಾನಸಿಕ ಆರೋಗ್ಯ ಅಲ್ಜಮೈರ್ ಕಾಯಿಲೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆಯಂತೆ. ಅಲ್ಜಮೈರ್ ಕಾಯಿಲೆ ಮಾನಸಿಕ ಕಾಯಿಲೆಯಿಂದಾಗಿಯೇ ವೃದ್ಧಿಯಾಗುತ್ತದೆ ಅನ್ನೋ ಬೆಚ್ಚಿ ಬೀಳಿಸುವ ಅಂಶವನ್ನ ತುಳಸಿ ಹೆಲ್ತ್ಕೇರ್ನ ಹಿರಿಯ ಮನೋರೋಗ ತಜ್ಞ ಗೌರವ್ ಗುಪ್ತಾ ಬಹಿರಂಗಗೊಳಿಸಿದ್ದಾರೆ.
ದೀರ್ಘಕಾಲದ ಖಿನ್ನತೆ (Depression) ಮೆದುಳಿನ ಹಿಪ್ಪೊಕ್ಯಾಂಪಲ್ (hippocampal )ಭಾಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ನೆನಪಿನ ಶಕ್ತಿಯನ್ನು ಕೇಂದ್ರೀಕರಿಸುವ ಭಾಗ ಹೀಗಾಗಿ ಒಂದು ವೇಳೆ ವ್ಯಕ್ತಿಯೊಬ್ಬರು ದೀರ್ಘಕಾಲದ ಖಿನ್ನತೆಯಿಂದ ಬಳಲುತ್ತಿದ್ದಲ್ಲಿ ಅವರಿಗೆ ಅಲ್ಜಮೈರ್ ಕಾಯಿಲೆ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ ಎಂದು ಡಾಕ್ಟರ್ ಗೌರವ್ ಗುಪ್ತಾ ಹೇಳುತ್ತಾರೆ.
ತೀವ್ರವಾದ ಒತ್ತಡದಿಂದಾಗಿ ಬ್ರೇನ್ನ ಈ ಭಾಗವು ತೀವ್ರ ಹಾನಿಗೆ ಉಂಟಾಗುತ್ತದೆ. ಇದರಿಂದಾಗಿ ಅಲ್ಜಮೈರ್ ಕಾಯಿಲೆಗೆ ದೀರ್ಘಕಾಲದ ಖಿನ್ನತೆ ಮಹಾದ್ವಾರವನ್ನೇ ತೆರೆಯುತ್ತದೆ ಎಂದು ಸಂಶೋಧನೆಯು ಹೇಳಿದೆ.
ಇದನ್ನೂ ಓದಿ: ಮರೆವಿನ ಕಾಯಿಲೆಗೆ ಬಂತು ಮದ್ದು.. ಹೊಸ ಸಂಶೋಧಕರು ಕೊಟ್ರು ಬಿಗ್ ಅಪ್ಡೇಟ್!
ಹಾಗಂತ ಅಲ್ಜಮೈರ್ ಹಾಗೂ ಖಿನ್ನತೆ ಪರಸ್ಪರ ಸಂಬಂಧ ಹೊಂದಿಲ್ಲ. ಆದ್ರೆ ಮಾನಸಿಕವಾಗಿ ಸ್ವಸ್ಥವಾಗಿರುವುದರಿಂದ ಈ ಪರಸ್ಪರ ಉಂಟಾಗುವ ಸಮಸ್ಯೆಯನ್ನು ಬೇಗನೇ ತೊಡೆದು ಹಾಕಬಹುದಾಗಿದೆ. ಸರಿಯಾದ ಥೆರಪಿಗಳು ಡಿಪ್ರೆಷನ್ನನ್ನು ಬೇಗ ಗುಣ ಮಾಡುತ್ತವೆ ಹಾಗೂ ದೀರ್ಘಕಾಲಿಕವಾಗಿ ಮೆದುಳಿನ ಮೇಲೆ ಉತ್ತಮ ಪರಿಣಾಮ ಬೀರುವುದರಿಂದ ಅಲ್ಜಮೈರ್ನಂತ ಮೆದುಳಿನ ನರಮಂಡಲಕ್ಕೆ ಹಾನಿ ಮಾಡುವಂತ ಕಾಯಿಲೆಗಳಿಂದ ದೂರ ಇರುವಂತೆ ನೋಡಿಕೊಳ್ಳುತ್ತಿದೆ. ಹೀಗಾಗಿ ಮಾನಸಿಕ ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಲು ನಾವು ಪ್ರಯತ್ನಿಸಬೇಕು. ಖಿನ್ನತೆಯ ಲಕ್ಷಣಗಳು ನಮ್ಮಲ್ಲಿ ಕಂಡು ಬಂದಲ್ಲಿ ಕೂಡಲೇ ಯಾವುದೇ ಮುಜುಗರವನ್ನು ಮಾಡಿಕೊಳ್ಳದೇ ಮನೋರೋಗ ವೈದ್ಯರನ್ನು ಕಾಣಬೇಕು. ಅದಕ್ಕೆ ಬೇಕಾದ ಚಿಕಿತ್ಸೆ ಪಡೆಯಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ