newsfirstkannada.com

ಬ್ಯಾಕ್​ ಟು ಬ್ಯಾಕ್ ಹೀನಾಯ ​ಸೋಲು; ಪ್ಲೇ ಆಫ್​ಗೆ ಹೋಗಲು ಆರ್​​ಸಿಬಿಗೆ ಅವಕಾಶ ಇದ್ಯಾ..?

Share :

Published April 3, 2024 at 4:25pm

Update April 3, 2024 at 4:17pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​

    ಮೂರು ಐಪಿಎಲ್​​ ಪಂದ್ಯಗಳಲ್ಲಿ ಆರ್​​ಸಿಬಿಗೆ ಹೀನಾಯ ಸೋಲು

    ಪ್ಲೇ ಆಫ್​ಗೆ ಹೋಗಲು ಆರ್​​ಸಿಬಿ ಇನ್ನೆಷ್ಟು ಮ್ಯಾಚ್​​ ಗೆಲ್ಲಬೇಕು?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಟೂರ್ನಿ ಶುರುವಾಗಿ ಎರಡು ವಾರಗಳು ಆಗಿವೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ತಾನು ಆಡಿದ 4 ಪಂದ್ಯಗಳಲ್ಲಿ ಒಂದು ಮ್ಯಾಚ್​​ ಮಾತ್ರ ಗೆದ್ದಿದ್ದು, ಮೂರು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಪ್ಲೇ ಆಫ್​ಗೆ ಹೋಗಲು ಆರ್​​ಸಿಬಿಗೆ ಅವಕಾಶ ಇದ್ಯಾ? ಅನ್ನೋ ಚರ್ಚೆ ಜೋರಾಗಿದೆ.

ಹೌದು, ಎಮ್.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಆರ್​​ಸಿಬಿ ಸೋತಿತ್ತು. ಇದಾದ ಬೆನ್ನಲ್ಲೇ ನಡೆದ ಪಂಜಾಬ್​​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಬಳಿಕ ನಡೆದ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಆರ್​​ಸಿಬಿ ನಿನ್ನೆ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಮಂಡಿಯೂರಿದೆ. ಆದ್ದರಿಂದ ಆರ್​​ಸಿಬಿ ಪ್ಲೇ ಆಫ್​ಗೆ ಹೋಗಲು ಇನ್ನೆಷ್ಟು ಪಂದ್ಯಗಳು ಗೆಲ್ಲಬೇಕು? ನಿಜವಾಗಲೂ ಅವಕಾಶ ಇದ್ಯಾ? ಅನ್ನೋ ಸಹಜವಾಗಿ ಹುಟ್ಟಿಕೊಂಡಿದೆ.

ಎಷ್ಟು ಪಂದ್ಯ ಗೆಲ್ಲಬೇಕು ಆರ್​​ಸಿಬಿ?

ಇನ್ನು, ಈ ಐಪಿಎಲ್​ ಸೀಸನ್​​ನಲ್ಲಿ ಒಟ್ಟು 72 ಪಂದ್ಯಗಳು ಇದೆ. ಅದರಲ್ಲಿ ಪ್ರತೀ ಟೀಮ್​​​ 14 ಪಂದ್ಯಗಳು ಆಡಲಿವೆ. ಆರ್​​​ಸಿಬಿ ಇನ್ನೂ 10 ಪಂದ್ಯಗಳನ್ನು ಆಡಲಿದ್ದು, ಈ ಪೈಕಿ 7 ಮ್ಯಾಚ್​​ ಗೆಲ್ಲಲೇಬೇಕಿದೆ. 7 ಪಂದ್ಯ ಗೆದ್ದು ಪಾಯಿಂಟ್ಸ್​ ಟೇಬಲ್​​ನಲ್ಲಿ 4ನೇ ಸ್ಥಾನದಲ್ಲಿ ಬರಬೇಕಿದೆ. ಆಗ ಮಾತ್ರ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ನಾಯಕತ್ವದ ಆರ್​​ಸಿಬಿ ಪ್ಲೇ ಆಫ್​​ಗೆ ಹೋಗಲು ಚಾನ್ಸ್​​ ಇರಲಿದೆ. ಇಲ್ಲದೆ ಹೋದರೆ ಈ ಬಾರಿಯೂ ಮನೆಗೆ ಮರಳಬೇಕಿರುತ್ತೆ.

ಇದನ್ನೂ ಓದಿ: ಆರ್​​​ಸಿಬಿ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​.. ಈ ಬಗ್ಗೆ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಯಾಕ್​ ಟು ಬ್ಯಾಕ್ ಹೀನಾಯ ​ಸೋಲು; ಪ್ಲೇ ಆಫ್​ಗೆ ಹೋಗಲು ಆರ್​​ಸಿಬಿಗೆ ಅವಕಾಶ ಇದ್ಯಾ..?

https://newsfirstlive.com/wp-content/uploads/2024/03/Faf_Kohli_RCB.jpg

Load More