/newsfirstlive-kannada/media/post_attachments/wp-content/uploads/2024/08/SUN-SCREEN-EFFECT-1.jpg)
ಯುವಿ ರೇಡಿಯೇಷನ್​ನಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಹೆಚ್ಚು ಜನರು ಸನ್​ಸ್ಕ್ರೇನ್​ನನ್ನು ಬಳಸುತ್ತಾರೆ. ಮುಖದ ಕಾಂತಿಯೂ ಕಡುಬಿಸಿಲನಲ್ಲೂ ಕೆಡದಂತೆ ಕಾಪಾಡಿಕೊಳ್ಳಲು ಹಲವು ರೀತಿಯ ಹಲವು ಬ್ರ್ಯಾಂಡ್​ಗಳ ಸನ್​ಸ್ಕ್ರೀನ್​ಗಳನ್ನು ಮಹಿಳೆಯರು ಉಪಯೋಗಿಸುತ್ತಾರೆ. ಆದ್ರೆ ಇತ್ತೀಚೆಗೆ ಸ್ವತಂತ್ರವಾಗಿ ಲ್ಯಾಬರೋಟರಿ ಒಂದು ಕೈಗೊಂಡ ಸಂಶೋಧನೆಯ ಪ್ರಕಾರ ಸನ್​ಸ್ಕ್ರೀನ್ ಅತಿಯಾದ ಬಳಕೆಯಿಂದ ಹಲವು ರೀತಿಯ ಕ್ಯಾನ್ಸರ್​ಗಳು ಬರಬಹುದು ಎಂದು ಹೇಳಿದೆ.
/newsfirstlive-kannada/media/post_attachments/wp-content/uploads/2024/08/SUN-SCREEN-EFFECT-4.jpg)
ಈ ಅಧ್ಯಯನವು ಹೇಳುವ ಪ್ರಕಾರ ಹಲವು ಸನ್​ಸ್ಕ್ರೀನ್​ಗಳು ಬೆಂಜೆನ್​ ಅನ್ನುವ ಕೆಮಿಕಲ್ ಅನ್ನು ತಮ್ಮ ಉತ್ಪಾದನೆಯಲ್ಲಿ ಬಳಸುತ್ತವೆ. ಇದು ಚರ್ಮದ ಮೇಲೆ ಅನೇಕ ರೀತಿಯ ಪ್ರಭಾವವನ್ನು ಬೀರುತ್ತದೆ. ಆರಂಭದಲ್ಲಿ ಸೂರ್ಯನ ಕಿರಣಗಳಿಂದ ನಮ್ಮ ತ್ವಚೆಯನ್ನು ರಕ್ಷಿಸಿದರು ಕೂಡ ಮುಂದೆ ಇದೇ ಒಂದು ರಾಸಾಯನಿಕ ವಸ್ತು ಹಲವು ರೀತಿಯ ಚರ್ಮದ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಸನ್​ಸ್ಕ್ರೀನ್​ಗಳು ಪ್ರಮುಖವಾಗಿ ಬಳಸುವ ರಾಸಾಯನಿಕ ವಸ್ತುಗಳು ಅಂದ್ರೆ ಅದು ಕಾರ್ಕಿನಾಜೆನ್ ಬೆಂಜೆನ್. ಇವು ನಿಮ್ಮ ತ್ವಚೆಯ ಮೇಲೆ ಋಣಾತ್ಮಕರ ಪರಿಣಾಮ ಬೀರುವ ಸಾಧ್ಯತೆ ಜಾಸ್ತಿ ಎಂದು ಅಧ್ಯಯನದಲ್ಲಿ ವರದಿಯಾಗಿದೆ.
/newsfirstlive-kannada/media/post_attachments/wp-content/uploads/2024/08/SUN-SCREEN-EFFECT-2.jpg)
ಹೀಗಾಗಿ ಜಾಹಿರಾತುಗಳಲ್ಲಿ ಬರುವ ಎಲ್ಲಾ ಸನ್​ಸ್ಕ್ರೀನ್​ಗಳನ್ನು ನಂಬಬಾರದು. ಪ್ರಮುಖವಾಗಿ ಸ್ಕಿನ್ ಕ್ಯಾನ್ಸರ್​ಗೆ ಕಾರಣವಾಗುವುದೇ ಸೂರ್ಯನಿಂದ ಹೊರಸೂಸುವ ಯುವಿ ರೆಡಿಯೇಷನ್ ಎಂದು ಹೇಳಲಾಗುತ್ತದೆ. ಅವುಗಳನ್ನು ತಡೆಯುವ ಗುಣವಿರುವ ಸನ್​ಸ್ಕ್ರೀನ್​ಗಳಲ್ಲಿ ಅತಿಯಾದ ರಾಸಾಯನಿಕ ವಸ್ತುಗಳು ಬಳಕೆಯಾದಲ್ಲಿ ಅವು ಬೇರೆಯ ರೀತಿಯ ಪರಿಣಾಮವನ್ನು ಬೀರುತ್ತವೆ ಹೀಗಾಗಿ ವೈದ್ಯರ ಸಲಹೆಯಿಲ್ಲದೇ ಬೇಕಾಬಿಟ್ಟಿ ಸನ್​ಸ್ಕ್ರೀನ್​ಗಳ ಪ್ರಾಡಕ್ಟ್​ಗಳನ್ನು ಬಳಸಬಾರದು ಎಂದು ಈ ಅಧ್ಯಯನ ಎಚ್ಚರಿಕೆ ನೀಡಿದೆ.
/newsfirstlive-kannada/media/post_attachments/wp-content/uploads/2024/08/SUN-SCREEN-EFFECT-3.jpg)
ಇದನ್ನೂ ಓದಿ:ರಾಜ್ಯದಲ್ಲಿ ಝೀಕಾ ವೈರಸ್​ಗೆ ಮೊದಲ ಬಲಿ: ಹೈ ಅಲರ್ಟ್ ಘೋಷಣೆ; ಏನೆಲ್ಲಾ ಎಚ್ಚರಿಕೆ ವಹಿಸಬೇಕು?
ಈ ಒಂದು ಅಧ್ಯಯನ ಏಕಮುಖಿಯಾಗಿ ಬಂದಿರುವುದರಿಂಧ ಇದು ಇನ್ನೂ ವೈಜ್ಞಾನಿಕವಾಗಿ ಸಾಬೀತು ಆಗದ ಕಾರಣದಿಂದ ಇದನ್ನೇ ಅಂತಿಮ ವರದಿ ಎಂದು ನಂಬುವಂತಿಲ್ಲ ಹಾಗೆ ಕೂಡ ಅಲ್ಲಗಳೆಯುವಂತೆಯೂ ಇಲ್ಲ. ಸರಿಯಾದ ಮಾಹಿತಿ ಹಾಗೂ ಸರಿಯಾದ ವೈದ್ಯರನ್ನು ಸಂಪರ್ಕಿಸುವ ಮೂಲಕ ನೀವು ನಿಮ್ಮ ತ್ವಚೆಯ ರಕ್ಷಣೆಯನ್ನು ಮಾಡಿಕೊಳ್ಳಬಹುದು.
ಬೆಂಜೆನ್​ ರಾಸಾಯನಿಕ ವಸ್ತುವಿನಿಂದ ತ್ವಚೆಗೆ ಹಾನಿಯಾಗುವ ವಿಚಾರದದಲ್ಲಿ ಅನೇಕ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ಯಾವುದು ಉತ್ತಮ ಯಾವುದು ಪ್ರಾಡಕ್ಟ್​ ಅಧಮ ಅನ್ನೋದು ಪರಿಣಿತ ವೈದ್ಯರಿಗೆ ಸರಿಯಾಗಿ ಗೊತ್ತಿರುತ್ತದೆ ಹೀಗಾಗಿ ವೈದ್ಯರ ಸಲಹೆ ಇಲ್ಲಿ ಅತಿ ಉಪಯುಕ್ತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us