/newsfirstlive-kannada/media/post_attachments/wp-content/uploads/2024/09/cancer-in-women.jpg)
ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ರೋಗಗಳಲ್ಲಿ ಕ್ಯಾನ್ಸರ್ ಮಹಾಮಾರಿಯೂ ಒಂದು. ಕ್ಯಾನ್ಸರ್ನಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚು ಅನ್ನೋದು ತಜ್ಞ ವೈದ್ಯರ ಅಭಿಪ್ರಾಯ.
ಇದನ್ನೂ ಓದಿ:20 ವರ್ಷದ ಸುಂದರಿ ಮೇಲೆ ಅಜ್ಜನಿಗೆ ಲವ್; ಭಾರೀ ಸದ್ದು ಮಾಡ್ತಿದೆ ಈ ಮದುವೆ..! VIDEO
ಗೊತ್ತಾಗೋದು ಹೇಗೆ..?
ದೇಹದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಗ ನಮ್ಮ ದೇಹವು ನಮ್ಮನ್ನು ಎಚ್ಚರಿಸುತ್ತದೆ. ಪುರುಷರು ಮತ್ತು ಮಹಿಳೆಯರಲ್ಲಿ ಈ ಲಕ್ಷಣಗಳು ವಿಭಿನ್ನವಾಗಿವೆ. ವಿಶೇಷವಾಗಿ ಮಹಿಳೆಯರಲ್ಲಿ ಕ್ಯಾನ್ಸರ್ ಲಕ್ಷಣಗಳು ಯಾವುವು? ಅನ್ನೋ ವಿವರ ಇಲ್ಲಿದೆ.
- ಮಹಿಳೆಯರಲ್ಲಿ ರಕ್ತಸ್ರಾವವು ಕ್ಯಾನ್ಸರ್‌ನ ಮುಖ್ಯ ಲಕ್ಷಣ. ವಿಶೇಷವಾಗಿ ಮುಟ್ಟಿನ ಸಮಯದಲ್ಲಿ ತೀವ್ರವಾದ ನೋವು ಮತ್ತು ರಕ್ತಸ್ರಾವದಂತಹ ರೋಗ ಲಕ್ಷಣಗಳು ಕಂಡು ಬರುತ್ತದೆ. ಅದು ಗರ್ಭಕಂಠದ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು. ಅಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸೂಚನೆಗಳನ್ನು ಅನುಸರಿಸುವುದು ಉತ್ತಮ.
- ದೇಹದಲ್ಲಿನ ಕೆಲವು ಬದಲಾವಣೆಗಳು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳೆಂದು ವೈದ್ಯರು ಹೇಳುತ್ತಾರೆ. ಮುಖದ ಕೆಲವು ಭಾಗಗಳು ಊದಿಕೊಂಡಂತೆ ಕಾಣುತ್ತದೆ. ಸ್ತನ ಪ್ರದೇಶದಲ್ಲಿ ಊತ ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇದು ಕೂಡ ಕ್ಯಾನ್ಸರ್‌ನ ಆರಂಭಿಕ ಲಕ್ಷಣ.
- ಇದ್ದಕ್ಕಿದ್ದಂತೆ ತೂಕ ಕಳೆದುಕೊಳ್ಳುವುದು, ಹೆಚ್ಚಾಗುವುದು ಕೂಡ ಕ್ಯಾನ್ಸರ್‌ನ ಆರಂಭಿಕ ಲಕ್ಷಣ. ಈ ರೋಗ ಲಕ್ಷಣಗಳು ಮಹಿಳೆಯರಲ್ಲಿ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
- ದೇಹದ ಕೆಲವು ಭಾಗಗಳಲ್ಲಿ ದೀರ್ಘಕಾಲದವರೆಗೆ ನೋವು ಕಾಣಿಸಿಕೊಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ. ವಿಶೇಷವಾಗಿ ಎದೆ, ಹೊಟ್ಟೆಯಲ್ಲಿ ತೀವ್ರವಾದ ನೋವು
- ಚರ್ಮದ ಬಣ್ಣದಲ್ಲಿ ಬದಲಾವಣೆ ಅಥವಾ ಸುಕ್ಕುಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ. ಅಂತಹ ಲಕ್ಷಣಗಳು ಕಾರಣವಿಲ್ಲದೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ
- ಜೀರ್ಣಕ್ರಿಯೆಯ ಸಮಸ್ಯೆಗಳನ್ನೂ ಲಘುವಾಗಿ ಪರಿಗಣಿಸಬಾರದು. ನೀವು ದೀರ್ಘಕಾಲದವರೆಗೆ ಅಜೀರ್ಣ ಅಥವಾ ಇತರೆ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
ಇದನ್ನೂ ಓದಿ:ಒಂದೇ ಇನ್ನಿಂಗ್ಸ್ನಲ್ಲಿ 600ಕ್ಕೂ ಅಧಿಕ ರನ್.. ಮೂವರು ಶತಕ, ಡಬಲ್ ಸೆಂಚುರಿ ಮಿಸ್; ಬೆಚ್ಚಿಬಿದ್ದ ಕಿವೀಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ