newsfirstkannada.com

×

ಸೆಮಿ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ದೊಡ್ಡ ಹೇಳಿಕೆ ನೀಡಿದ ಕ್ಯಾಪ್ಟನ್ ರೋಹಿತ್ ಶರ್ಮಾ

Share :

Published June 27, 2024 at 1:27pm

    ನಾಲ್ವರು ಸ್ಪಿನ್ನರ್ಸ್ ಆಡಿಸುವ ಬಗ್ಗೆ ಶರ್ಮಾ ಹೇಳಿದ್ದೇನು?

    ಮಳೆ ಬಂದರೆ ಫೈನಲ್​ಗೆ ಹೋಗೋದು ಯಾರೆಂದು ಹೇಳಿದ್ದಾರೆ

    ಇಂದು ರಾತ್ರಿ 8 ಗಂಟೆಯಿಂದ ಪಂದ್ಯ ಶುರುವಾಗಲಿದೆ

T20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ ಜಬರ್ದಸ್ತ್​​​​​ ಪ್ರದರ್ಶನ ನೀಡ್ತಿದೆ. ಒಂದೂ ಸೋಲನ್ನೇ ಕಾಣದೆ ಸೆಮಿಫೈನಲ್​​ ರೇಸ್​​​ಗೆ ಎಂಟ್ರಿಕೊಟ್ಟಿದೆ. ಇದಕ್ಕೆಲ್ಲ ಕಾರಣ ಬೌಲರ್ಸ್​ ಅಂದ್ರು ತಪ್ಪಲ್ಲ. ಈ ವಿಶ್ವಕಪ್​​​ನಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಅತ್ಯಾದ್ಭುತ ಪ್ರದರ್ಶನ ನೀಡ್ತಿದ್ದಾರೆ.

ಇಂದು ಪಂದ್ಯ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಕ್ಯಾಪ್ಟನ್ ರೋಹಿತ್ ಶರ್ಮಾ.. ಪಂದ್ಯಕ್ಕೆ ಮಳೆಯ ಆತಂಕ ಇದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದು ಆದರೆ ಭಾರತ ಫೈನಲ್ ಪ್ರವೇಶ ಮಾಡೋದು ಗ್ಯಾರಂಟಿ. ಮಳೆ ಬರೋದು, ಬಿಡೋದು ನಮ್ಮ ಹಿಡಿತದಲ್ಲಿಲ್ಲ.

ಇದನ್ನೂ ಓದಿ:‘ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ’ -ಜೈಲು ಅಧಿಕಾರಿಗಳಿಗೆ ದರ್ಶನ್ ಶಾಕಿಂಗ್ ಹೇಳಿಕೆ

ಪಂದ್ಯ ಏನಾಗಲಿದೆ ಎಂಬುವುದು ನಮಗೆ ಗೊತ್ತಿಲ್ಲ. ಪಂದ್ಯವನ್ನು ಹೇಗೆ ಆಡಬೇಕು ಅನ್ನೋದನ್ನು ನಾವು ಗಮನ ಹರಿಸುತ್ತೇವೆ. ಇದು ಸೆಮಿಫೈನಲ್ ಆಗಿರೋದ್ರಿಂದ ಹೆಚ್ಚು ಒತ್ತಡ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಶಾಂತವಾಗಿ ಮತ್ತು ತಾಳ್ಮೆಯಿಂದ ಇರಲು ಗಮನಹರಿಸುತ್ತೇವೆ. ತಂಡದಲ್ಲಿ ಯಾರು ಯಾವ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಗೊತ್ತಿದೆ. ನಮ್ಮ ಆಟಗಾರರ ಮೇಲೆ ನಮಗೆ ವಿಶ್ವಾಸ ಇದೆ ಎಂದಿದ್ದಾರೆ.

ಇದನ್ನೂ ಓದಿ:ಈ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ಜೊತೆಯಿದೆ ​​ಅದೃಷ್ಟದ ದೇವತೆ.. ‘ನಮ್ಗೆ ತಿರುಮಂತ್ರ ಗೊತ್ತು’ ಎಂದ ರೋಹಿತ್ ಪಡೆ

ಇದೇ ವೇಳೆ ನಾಲ್ವರು ಸ್ಪಿನ್ನರ್​​ಗಳನ್ನು ಆಡಿಸುವ ಬಗ್ಗೆ ಮಾತನಾಡಿರುವ ಅವರು.. ಸದ್ಯ ಅಂತಹ ಯಾವುದೇ ನಿರ್ಧಾರ ನಮ್ಮ ಮುಂದೆ ಇಲ್ಲ. ಪರಿಸ್ಥಿತಿಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರವೀಂದ್ರ ಜಡೇಜಾ ಕೂಡ ಉತ್ತಮವಾಗಿ ಬೌಲಿಂಗ್ ಮಾಡ್ತಿದ್ದಾರೆ.

ಇದನ್ನೂ ಓದಿ:IND vs ENG ಸೆಮಿಫೈನಲ್ ಪಂದ್ಯ ಕ್ಯಾನ್ಸಲ್..? ವೆದರ್​​ ರಿಪೋರ್ಟ್​​ನಲ್ಲಿ ಶಾಕಿಂಗ್ ಮಾಹಿತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಮಿ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ದೊಡ್ಡ ಹೇಳಿಕೆ ನೀಡಿದ ಕ್ಯಾಪ್ಟನ್ ರೋಹಿತ್ ಶರ್ಮಾ

https://newsfirstlive.com/wp-content/uploads/2024/06/Rohit-Sharma-speaking.jpg

Load More