newsfirstkannada.com

‘ಏನು ಅರ್ಥವೇ ಆಗ್ತಿಲ್ಲ’- ಗೆದ್ರೂ ಅಸಮಾಧಾನ ಹೊರಹಾಕಿದ ಕ್ಯಾಪ್ಟನ್​ ರೋಹಿತ್!

Share :

Published June 6, 2024 at 3:20pm

Update June 6, 2024 at 3:22pm

    ಟೀಮ್​ ಇಂಡಿಯಾ, ಐರ್ಲೆಂಡ್​​ ತಂಡದ ಮಧ್ಯೆ ನಡೆದ ರೋಚಕ ಪಂದ್ಯ

    ಐರ್ಲೆಂಡ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ

    ಮೊದಲ ಗೆಲುವಿನ ಬಗ್ಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಹೇಳಿದ್ದೇನು ಗೊತ್ತಾ?

ಇತ್ತೀಚೆಗೆ ನ್ಯೂಯಾರ್ಕ್​​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ.

ಇನ್ನು, ಐರ್ಲೆಂಡ್​​​ ತಂಡದ ವಿರುದ್ಧ ಗೆದ್ದ ಬಳಿಕ ಮಾತಾಡಿದ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ, ಈ ಗೆಲುವು ನಮಗೆ ಖುಷಿ ತಂದಿದೆ ಎಂದರು. ಜತೆಗೆ ನಮಗೆ ಈ ಪಿಚ್​​ ಬಗ್ಗೆ ಯಾವುದೇ ಐಡಿಯಾ ಇಲ್ಲ. ಇದು ಕೇವಲ 5 ತಿಂಗಳ ಹಳೆ ಪಿಚ್​​ ಆಗಿದೆ. ಹಾಗಾಗಿ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡೆವು ಎಂದರು.

ನಮಗೆ ಕಂಡೀಷನ್ಸ್​ ಇನ್ನೂ ಅರ್ಥ ಆಗಿಲ್ಲ. ಸೆಕೆಂಡ್​ ಇನ್ನಿಂಗ್ಸ್​ ಬ್ಯಾಟಿಂಗ್​ನಲ್ಲೂ ಪಿಚ್​ ಸೆಟಲ್​ ಆಗಿರಲಿಲ್ಲ. ನಾವು ಬ್ಯಾಟಿಂಗ್​ ಮಾಡುವಾಗಲೂ ವಿಕೆಟ್​ ಯಾವಾಗ ಬೇಕಾದ್ರೂ ಬೀಳಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೂ ನಾವು ನೋಡಿಕೊಂಡು ಆಡಬೇಕು. 4 ಸ್ಪಿನ್ನರ್ಸ್​​ ತಂಡದಲ್ಲಿದ್ರೂ ನಾವು ಆಡಿಸಲು ಆಗಲಿಲ್ಲ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಇಡೀ ತಂಡದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ರು ಎಂದಿದ್ದಾರೆ ರೋಹಿತ್​.

ಟಾಸ್​ ಸೋತ್ರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಐರ್ಲೆಂಡ್​ 16 ಓವರ್​ನಲ್ಲಿ ಕೇವಲ 96 ರನ್​ಗೆ ಆಲೌಟ್​ ಆಗಿತ್ತು. ಬಳಿಕ ಚೇಸ್​ ಮಾಡಿದ ಟೀಮ್​ ಇಂಡಿಯಾ 12.2 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 97 ರನ್​ ಗಳಿಸಿ ಮೊದಲ ಗೆಲುವು ಸಾಧಿಸಿದೆ.

ಟೀಮ್​ ಇಂಡಿಯಾ ಪರ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಜೋಡಿ ಓಪನಿಂಗ್​ ಮಾಡಿತು. ವಿರಾಟ್​ ಕೊಹ್ಲಿ 1 ರನ್​ಗೆ ವಿಕೆಟ್​ ಒಪ್ಪಿಸಿ ಕೈಕೊಟ್ಟರು. ಬಳಿಕ ಕ್ರೀಸ್​ನಲ್ಲೇ ನಿಂತು ಆಡಿದ ರೋಹಿತ್​ ಶರ್ಮಾ ತಾನು ಆಡಿದ 37 ಬಾಲ್​ನಲ್ಲಿ ಅರ್ಧಶತಕ ದಾಖಲಿಸಿದ್ರು. ಬರೋಬ್ಬರಿ 3 ಭರ್ಜರಿ ಸಿಕ್ಸರ್​​, 4 ಫೋರ್​ ಸಿಡಿಸಿದ್ರು. ರಿಷಭ್​ ಪಂತ್​ ಕೊನೆವರೆಗೂ ಬ್ಯಾಟ್​ ಬೀಸಿ 2 ಸಿಕ್ಸರ್​, 3 ಫೋರ್​ನೊಂದಿಗೆ 36 ರನ್​ ಚಚ್ಚಿದ್ರು.

ಇದನ್ನೂ ಓದಿ: ರೋಹಿತ್​ ಶರ್ಮಾ ಅಬ್ಬರದ ಬ್ಯಾಟಿಂಗ್​​.. ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಏನು ಅರ್ಥವೇ ಆಗ್ತಿಲ್ಲ’- ಗೆದ್ರೂ ಅಸಮಾಧಾನ ಹೊರಹಾಕಿದ ಕ್ಯಾಪ್ಟನ್​ ರೋಹಿತ್!

https://newsfirstlive.com/wp-content/uploads/2024/06/Rohit-Sharma-speaking.jpg

Load More