newsfirstkannada.com

ರೋಹಿತ್​ ಶರ್ಮಾ ಅಬ್ಬರದ ಬ್ಯಾಟಿಂಗ್​​.. ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Share :

Published June 5, 2024 at 11:23pm

    ಇಂದು ಟೀಮ್​ ಇಂಡಿಯಾ, ಐರ್ಲೆಂಡ್​​ ತಂಡದ ಮಧ್ಯೆ ರೋಚಕ ಪಂದ್ಯ

    ಐರ್ಲೆಂಡ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ

    ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಭರ್ಜರಿ ಬ್ಯಾಟಿಂಗ್​​​..!

ಇಂದು ನ್ಯೂಯಾರ್ಕ್​​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ.

ಐರ್ಲೆಂಡ್​ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಟೀಮ್​ ಇಂಡಿಯಾ ಪರ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಜೋಡಿ ಓಪನಿಂಗ್​ ಮಾಡಿತು. ವಿರಾಟ್​ ಕೊಹ್ಲಿ 1 ರನ್​ಗೆ ವಿಕೆಟ್​ ಒಪ್ಪಿಸಿ ಕೈಕೊಟ್ಟರು.

ಬಳಿಕ ಕ್ರೀಸ್​ನಲ್ಲೇ ನಿಂತು ಆಡಿದ ರೋಹಿತ್​ ಶರ್ಮಾ ತಾನು ಆಡಿದ 37 ಬಾಲ್​ನಲ್ಲಿ ಅರ್ಧಶತಕ ದಾಖಲಿಸಿದ್ರು. ಬರೋಬ್ಬರಿ 3 ಭರ್ಜರಿ ಸಿಕ್ಸರ್​​, 4 ಫೋರ್​ ಸಿಡಿಸಿದ್ರು. ರಿಷಭ್​ ಪಂತ್​ ಕೊನೆವರೆಗೂ ಬ್ಯಾಟ್​ ಬೀಸಿ 2 ಸಿಕ್ಸರ್​, 3 ಫೋರ್​ನೊಂದಿಗೆ 36 ರನ್​ ಚಚ್ಚಿದ್ರು.

ಟೀಮ್​ ಇಂಡಿಯಾ 12.2 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 97 ರನ್​ ಗಳಿಸಿ ಮೊದಲ ಗೆಲುವು ಸಾಧಿಸಿದೆ. ಟಾಸ್​ ಸೋತ್ರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಐರ್ಲೆಂಡ್​ 16 ಓವರ್​ನಲ್ಲಿ ಕೇವಲ 96 ರನ್​ಗೆ ಆಲೌಟ್​ ಆಗಿತ್ತು.

ಇದನ್ನೂ ಓದಿ: ಐರ್ಲೆಂಡ್​ ಫಸ್ಟ್​ ಬ್ಯಾಟಿಂಗ್​.. ಟೀಮ್​ ಇಂಡಿಯಾದಿಂದ ಸ್ಟಾರ್​ ಆಟಗಾರರೇ ಔಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​ ಶರ್ಮಾ ಅಬ್ಬರದ ಬ್ಯಾಟಿಂಗ್​​.. ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ ಜಯ

https://newsfirstlive.com/wp-content/uploads/2024/06/Kohli_Rohit1.jpg

Load More