ಟಿ20 ಕ್ರಿಕೆಟ್​​ ನಿವೃತ್ತಿ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಕೊಟ್ಟ ರೋಹಿತ್.. ಏನದು?

author-image
Ganesh Nachikethu
Updated On
ಟಿ20 ಕ್ರಿಕೆಟ್​​ ನಿವೃತ್ತಿ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಕೊಟ್ಟ ರೋಹಿತ್.. ಏನದು?
Advertisment
  • ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ!
  • ಈ ಬೆನ್ನಲ್ಲೇ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ರೋಹಿತ್​ ಶರ್ಮಾ ಗುಡ್​ಬೈ
  • ಟೀಮ್​ ಇಂಡಿಯಾ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಹಿಟ್​ಮ್ಯಾನ್​​

ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಎಂಎಸ್ ಧೋನಿ ನಂತರ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಎರಡನೇ ಭಾರತೀಯ ನಾಯಕ ರೋಹಿತ್​ ಅನ್ನೋ ಕೀರ್ತಿಗೆ ಪಾತ್ರರಾಗಿದ್ದಾರೆ. ಇದರ ಮಧ್ಯೆ ರೋಹಿತ್​ 2027ರ ಏಕದಿನ ವಿಶ್ವಕಪ್‌ ಆಡುತ್ತಾರಾ? ಅನ್ನೋ ಚರ್ಚೆ ಜೋರಾಗಿದೆ.

2027ರ ಏಕದಿನ ವಿಶ್ವಕಪ್‌ ಬಗ್ಗೆ ರೋಹಿತ್ ಏನಂದ್ರು?

ನಾನು ಈಗ ನನ್ನ ಕರಿಯರ್​ನಲ್ಲೇ ದಿ ಬೆಸ್ಟ್​​ ಪ್ರದರ್ಶನ ನೀಡುತ್ತಿದ್ದೇನೆ. ಆದ್ದರಿಂದ ಇನ್ನೂ ಕೆಲವು ವರ್ಷಗಳ ಕಾಲ ಭಾರತ ತಂಡದ ಪರ ಆಡಲು ಬಯಸುತ್ತೇನೆ. 50 ಓವರ್‌ಗಳ ವಿಶ್ವಕಪ್ ಗೆಲ್ಲುವುದು ನನ್ನ ಪ್ರಮುಖ ಗುರಿ. ಮೊದಲು 2025ರಲ್ಲಿ ಲಾರ್ಡ್ಸ್‌ನಲ್ಲಿ ನಡೆಯೋ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೇಲೆ ಫೋಕಸ್​ ಮಾಡುತ್ತೇನೆ. ಬಳಿಕ ಮುಂದಿನ ವಿಶ್ವಕಪ್​ ನನ್ನ ಆದ್ಯತೆ ಎಂದಿದ್ದಾರೆ.

ಕಳೆದ ವರ್ಷ ನಡೆದ 2023ರ ಏಕದಿನ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಸೋತಿತ್ತು. ಅಂದು ರೋಹಿತ್​ ಶರ್ಮಾ ನಿರಾಸೆಯಾಗಿದ್ರು. ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ರೋಹಿತ್​ ನಾಯಕತ್ವದಲ್ಲಿ ಭಾರತ ತಂಡ ಸೋಲು ಕಂಡಿತ್ತು.

ಇದನ್ನೂ ಓದಿ:ಕೊಹ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ ಪಾಕ್​ ಕ್ರಿಕೆಟರ್.. ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment