newsfirstkannada.com

ಡಿವೈಡರ್​ಗೆ ಡಿಕ್ಕಿ ಹೊಡೆದು ಬುಗುರಿಯಂತೆ ತಿರುಗಿದ ಕಾರು; ಬೆಚ್ಚಿ ಬೀಳಿಸಿದ ಭಯಾನಕ ಅಪಘಾತ

Share :

Published April 7, 2024 at 7:08pm

    ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್ ಕಾರು

    ಡಿವೈಡರ್​ಗೆ ಡಿಕ್ಕಿ ಹೊಡೆದು ಮುಂದೆ ಬರುತ್ತಿದ್ದ ಬರ್ತಿದ್ದ ಆಟೋಗೆ ಡಿಕ್ಕಿ

    ಅಪಘಾತಕ್ಕೀಡಾದ ಕಾರಿನಲ್ಲಿ ಒಟ್ಟು ಮೂವರು ಇರುವ ಬಗ್ಗೆ ಶಂಕೆ

ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ಬುಗುರಿಯಂತೆ ತಿರುಗಿದ ಘಟನೆ ನಗರದ ಹೊಸ ಬಡಾವಣೆ ಪೊಲೀಸ್ ಠಾಣೆಯ ಮುಂಭಾಗ ಸಂಭವಿಸಿದೆ. ಅಪಘಾತ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಇದನ್ನೂ ಓದಿ: VIDEO: ಕನ್ನಡತಿ ಅಕ್ಕ ಅನುಗೆ ದಿಢೀರ್​ ಮದುವೆ ಆಯ್ತಾ..? ಈ​ ವಿಡಿಯೋ ಹಿಂದಿನ ಅಸಲಿಯತ್ತೇನು?

ಮಾಹಿತಿ ಪ್ರಕಾರ KA52M8188 ನಂಬರಿನನ ಟಾಟಾ ನೆಕ್ಸಾನ್ ಕಾರಿನ ಚಾಲನೊಬ್ಬ ಕುಡಿತದ ಮತ್ತಿನಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಕ್ಕೆ ಈ ಘಟನೆ ಸಂಭವಿಸಿದೆ. ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ಎದುರುಗಡೆಯಿಂದ ಬರುತ್ತಿದ್ದ ಆಟೋಗೆ ಕಾರು ಗುದ್ದಿದೆ. ಸದ್ಯ ಆಟೋದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತಕ್ಕೀಡಾದ ಕಾರಿನಲ್ಲಿ ಒಟ್ಟು ಮೂವರು ಇದ್ದರಂತೆ.

ಕಾರು ಚಾಲಕ ಮತ್ತು ಸಹ ಪ್ರಯಾಣಿಕರು ಮದ್ಯದ ಪಾರ್ಟಿ ಮಾಡುತ್ತಾ ಬಂದಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಕಾರಿನಲ್ಲಿ ಮದ್ಯದ ಬಾಟಲ್​ಗಳು ಮತ್ತು ಪ್ಲಾಸ್ಟಿಕ್ ಲೋಟಗಳು ಪತ್ತೆಯಾಗಿದೆ. ಅಪಘಾತ ಆಗುತ್ತಿದ್ದಂತೆ ಕಾರಿನಲ್ಲಿದ್ದವರು ಎಸ್ಕೇಪ್​ ಆಗಿದ್ದಾರೆ. ಸದ್ಯ ಸ್ಥಳಕ್ಕೆ ಹೊಸ ಬಡಾವಣೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿವೈಡರ್​ಗೆ ಡಿಕ್ಕಿ ಹೊಡೆದು ಬುಗುರಿಯಂತೆ ತಿರುಗಿದ ಕಾರು; ಬೆಚ್ಚಿ ಬೀಳಿಸಿದ ಭಯಾನಕ ಅಪಘಾತ

https://newsfirstlive.com/wp-content/uploads/2024/04/accident1.jpg

Load More