/newsfirstlive-kannada/media/post_attachments/wp-content/uploads/2024/03/Syrian_town.jpg)
ಸಿರಿಯಾದ ಅಜಾಜ್ ನಗರದ ಮಾರ್ಕೆಟ್ನಲ್ಲಿ ಭೀಕರವಾಗಿ ಕಾರು ಬಾಂಬ್ ಸ್ಫೋಟಗೊಂಡ ಪರಿಣಾಮ 7 ಜನರು ಸ್ಥಳದಲ್ಲೇ ಮೃತಪಟ್ಟು 30ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೃತ್ಯ ಎಸಗಿದವರು ಯಾರೆಂಬುದು ಇನ್ನು ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ.
ಅಜಾಜ್ ನಗರದ ಮಾರ್ಕೆಟ್ ಎಂದಿನಂತೆ ಜನರಿಂದ ತುಂಬಿತ್ತು. ರಂಜಾನ್‌ನಲ್ಲಿ ಉಪವಾಸದಲ್ಲಿದ್ದ ಜನರು ಸಂಜೆ ವೇಳೆಗೆ ಭಾರೀ ಸಂಖ್ಯೆಯಲ್ಲಿ ಮಾರ್ಕೆಟ್ಗೆ ಶಾಪಿಂಗ್ ಮಾಡಲೆಂದು ಬಂದಿದ್ದ ವೇಳೆ ಈ ಬಾಂಬ್ ಅನ್ನು ಸ್ಫೋಟಿಸಲಾಗಿದೆ. ಕಾರಿನಲ್ಲಿದ್ದ ಬಾಂಬ್ ಭಯಾನಕವಾಗಿ ಸ್ಫೋಟಗೊಂಡಿದ್ದರಿಂದ ಸ್ಥಳದಲ್ಲೇ 7 ಜನರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ತೀರ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಿಟಿಯೆಲ್ಲ ತೋರಿಸ್ತೀನೆಂದು ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ.. ಉಬರ್ ಕ್ಯಾಬ್ ಡ್ರೈವರ್ನಿಂದ ಕೃತ್ಯ
https://twitter.com/i/status/1774198509412999602
ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯಕ್ಕೆ ಈ ಕೃತ್ಯ ಯಾವ ಗುಂಪು ಮಾಡಿದೆ ಎಂದು ತಿಳಿದು ಬಂದಿಲ್ಲ. ಜೊತೆಗೆ ಯಾವ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಟರ್ಕಿಯ ಗಡಿಯ ಸಮೀಪದ ಹಾಗೂ ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ಅಜಾಜ್‌ನಲ್ಲಿ ಭಯ ಹುಟ್ಟಿಸಲು ಇಂಥಹ ಹಿಂಸಾತ್ಮಕ ಕೃಥ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ