ಕಾಲುವೆಗೆ ಉರುಳಿ ಬಿದ್ದ ಕಾರು; 6 ಜನರು ಸಾವು, ಓರ್ವ ಮಹಿಳೆ ಗಂಭೀರ

author-image
AS Harshith
Updated On
ಕಾಲುವೆಗೆ ಉರುಳಿ ಬಿದ್ದ ಕಾರು; 6 ಜನರು ಸಾವು, ಓರ್ವ ಮಹಿಳೆ ಗಂಭೀರ
Advertisment
  • ಒಂದೇ ಕುಟುಂಬದ ಆರು ಜನರು ಅಪಘಾತದಲ್ಲಿ ಸಾವು
  • ಕಾಲುವೆಗೆ ಉರುಳಿ ಬಿದ್ದ ಮಾರುತಿ ಸುಜುಕಿ ಆಲ್ಟೋ ಕಾರು
  • ಮಧ್ಯರಾತ್ರಿ ನಡೆದ ದುರ್ಘಟನೆ.. ಅಪಘಾತದಲ್ಲಿ ಮಹಿಳೆ ಗಂಭೀರ

ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಅಪಘಾತದಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಬಳಿ ಕಾರು ಅಪಘಾತವಾಗಿದೆ. ಮಧ್ಯರಾತ್ರಿ 12;30 ವೇಳೆಗೆ ಆಲ್ಟೋ ಕಾರು ಚಿಂಚಣಿ ಪ್ರದೇಶದಲ್ಲಿರುವ ಟಕಾರಿ ನಾಲೆಗೆ ಉರುಳಿ ಬಿದ್ದಿದೆ. ಪರಿಣಾಮ 6 ಜನರು ಉಸಿರು ಚೆಲ್ಲಿದ್ದಾರೆ.

ಇದನ್ನೂ ಓದಿ: ಮದುವೆ ಬ್ಯುಸಿಯಲ್ಲಿ ನಟಿ ಐಶ್ವರ್ಯ! ಸರ್ಜಾ ಕುಟುಂಬದಲ್ಲಿ ಸಂತಸದ ಸಂಭ್ರಮ

publive-image

ಮೃತರನ್ನು ಸಿವಿಲ್​ ಇಂಜಿನಿಯರ್​ ಜಗನ್ನಾಥ್​ ಪಾಟೀಲ್​​ (60) ಪತ್ನಿ ಸುಜಾತ ಪಾಟೀಲ್​ (55) ಪುತ್ರಿ ಪ್ರಿಯಾಂಕಾ ಖರಾಡೆ (30), ಮೊಮ್ಮಗಳು ಧ್ರುವ (3), ರಾಜೀವಿ(2) ಮತ್ತು ಕಾರ್ತಿಕಿ (1) ಸಾವನ್ನಪ್ಪಿದ್ದಾರೆ. ಮತ್ತೋರ್ವ ಪುತ್ರಿ ಸ್ವಪ್ನಲಿ(30) ಗಾಯಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment