newsfirstkannada.com

VIDEO: ಭೀಕರ ಅಪಘಾತ; ನೋಡ ನೋಡುತ್ತಿದ್ದಂತೆ ಕಾರಿನಿಂದ ಹಾರಿದ ಡ್ರೈವರ್​!

Share :

Published March 31, 2024 at 7:59pm

  ಕಾರಿನಿಂದ ದೂರ ಓಡಿ ಹೋಗಿ ಪ್ರಾಣ ಉಳಿಸಿಕೊಂಡ ಚಾಲಕ

  ವ್ಯಕ್ತಿಯೊರ್ವ ಅಚ್ಚರಿಯ ರೀತಿಯಲ್ಲಿ ಬಚಾವ್​ ಆದ ಘಟನೆ ಇದು

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

ಕುವೈತ್ ನಗರ: ಭೀಕರ ಅಪಘಾತದಲ್ಲಿ ವ್ಯಕ್ತಿಯೊರ್ವ ಅಚ್ಚರಿಯ ರೀತಿಯಲ್ಲಿ ಬಚಾವ್​ ಆದ ಘಟನೆ ಕುವೈತ್‌ನ ಅಬು ಅಲ್ ಹಸನಿಯಾ ಬೀಚ್‌ನಲ್ಲಿ ನಡೆದಿದೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: ದುಬಾರಿ ಕಾರ್​​ ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

ಕುವೈತ್‌ನ ಅಬು ಅಲ್ ಹಸನಿಯಾ ಬೀಚ್‌ನ ದಡದಲ್ಲಿ ವ್ಯಕ್ತಿಯೊರ್ವ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅನೇಕ ಬಾರಿ ಕಾರು ಪಲ್ಟಿಯಾಗಿದೆ. ಈ ವೇಳೆ ಚಾಲಕ ಕೂಡ ಕಾರಿನ ಜೊತೆಗೆ ಗಾಳಿಯಲ್ಲಿ ಹಾರಿ ನೀರಿಗೆ ಬಿದ್ದಿದ್ದಾನೆ. ಬಳಿಕ ಕಾರಿನಿಂದ ದೂರ ಓಡಿ ಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.

ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ದಡದಲ್ಲಿ ಉರುಳಿ ಬಿದ್ದ ಕಾರನ್ನು ಹೊರ ತೆಗೆದಿದ್ದಾರೆ. ಸದ್ಯ ಕಾರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಭೀಕರ ಅಪಘಾತ; ನೋಡ ನೋಡುತ್ತಿದ್ದಂತೆ ಕಾರಿನಿಂದ ಹಾರಿದ ಡ್ರೈವರ್​!

https://newsfirstlive.com/wp-content/uploads/2024/03/death-2024-03-31T191434.890.jpg

Load More