ಮಟಮಟ ಮಧ್ಯಾಹ್ನ ಕಾರಿನಲ್ಲೇ ಕಾಮತೃಷೆಗೆ ಬಿದ್ದ ಜೋಡಿ..!
ಕಾರಿನ ಹಿಂಭಾಗದ ಸೀಟಿನಲ್ಲಿ ಬೆತ್ತಲಾಗಿದ್ದ ಯುವಕ-ಯುವತಿ..!
ಪಾರ್ಕ್ನಲ್ಲಿ ಜನರಿದ್ದರೂ ಡೋಂಟ್ ಕೇರ್ ಎಂದ ಜೋಡಿ
ಬೆಂಗಳೂರು: ಮಟಮಟ ಮಧ್ಯಾಹ್ನ.. ಕಾರಿನ ಹಿಂಬದಿ ಸೀಟಿನಲ್ಲಿ ಬೆತ್ತಲಾಗಿ ಕಾಮತೃಷೆ ಈಡೇರಿಸಿಕೊಳ್ತಿದ್ದ ಜೋಡಿಯೊಂದು ತಪ್ಪಿಸಿಕೊಳ್ಳುವ ಭರದಲ್ಲಿ ಪೊಲೀಸ್ ಅಧಿಕಾರಿಗೆ ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಿದ್ದೇನು..?
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪಾರ್ಕ್ ಒಂದರ ಬಳಿ ಕಾರನ್ನು ನಿಲ್ಲಿಸಿಕೊಂಡು ಇಬ್ಬರು ಬೆತ್ತಲಾಗಿದ್ದರು. ಪಾರ್ಕ್ನಲ್ಲಿ ಸಾರ್ವಜನಿಕರಿದ್ದರೂ ಕೇರ್ ಮಾಡದೇ ಸೆಕ್ಸ್ನಲ್ಲಿ ಮುಳುಗಿದ್ದರಂತೆ. ಇದನ್ನು ಗಮನಿಸಿ ಪಾರ್ಕ್ಗೆ ಬಂದ ಜನರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಅಲ್ಲೇ ಇದ್ದ ರಿಸರ್ವ್ ಸಬ್ ಇನ್ಸ್ಪೆಕ್ಟರ್ ಅಧಿಕಾರಿ ಮಹೇಶ್ ಬುದ್ಧಿ ಹೇಳಲು ಮುಂದಾಗಿದ್ದಾರೆ. ಕಾರಿನ ಬಳಿ ಹೋಗಿ ನಂಬರ್ ಪ್ಲೇಟ್ ಚೆಕ್ ಮಾಡ್ತಿದ್ದಂತೆ ಗಾಬರಿಗೆ ಬಿದ್ದಿದೆ ಜೋಡಿ.
ಆತುರದಲ್ಲಿ ಕಾರನ್ನು ಚಲಾಯಿಸಲು ಯುವಕ ಮುಂದಾಗಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ಕಾರಿನ ಬಾನೆಟ್ ಹಿಡಿದು ನಿಲ್ಲಿಸುವಂತೆ ಸೂಚಿಸುತ್ತಾರೆ. ಆಗ ಯುವಕ ಕಾರನ್ನು ರಿವರ್ಸ್ ತೆಗೆದುಕೊಂಡಿದ್ದಾನೆ. ಪರಿಣಾಮ ಅಧಿಕಾರಿ ಮಹೇಶ್ ನೆಲಕ್ಕೆ ಬಿದ್ದಿದ್ದಾರೆ. ಈ ಮೂಲಕ ಹಿಟ್ ಅಂಡ್ ರನ್ ಮಾಡಿ ಜೋಡಿ ಪರಾರಿಯಾಗಿದೆ. ಗಾಯಗೊಂಡಿರುವ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ