newsfirstkannada.com

ನಾಳೆ ಎಂಗೇಜ್ಮೆಂಟ್.. ಮಾರುತಿ ಮಂದಿರಕ್ಕೆ ಹೋಗ್ತಿದ್ದಾಗ ಭೀಕರ ಅಪಘಾತ; ಸರ್ಕಾರಿ ನೌಕರ ಸಾವು

Share :

Published January 20, 2024 at 2:05pm

Update January 20, 2024 at 2:06pm

  ಕಾರು-ಲಾರಿನ ಮಧ್ಯೆ ಭೀಕರ ಆಕ್ಸಿಡೆಂಟ್ ಕಾರು ಫುಲ್ ಜಖಂ

  ​ಕಾರು ಚಾಲನೆ ಮಾಡ್ತಿದ್ದ ನೌಕರನಿಗೆ ನಾಳೆ ಎಂಗೇಜ್ಮೆಂಟ್ ಇತ್ತು

  ಆಂಜನೇಯ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುವಾಗ ಅಪಘಾತ

ಚಿತ್ರದುರ್ಗ: ಇಂದು ಶನಿವಾರದ ನಿಮಿತ್ತ ಮಾರುತಿ ದೇವಾಲಯಕ್ಕೆ ತೆರಳುವಾಗ ಕಾರು-ಲಾರಿ ಮಧ್ಯೆ ಭಯಾನಕ ಆಕ್ಸಿಡೆಂಟ್ ಸಂಭವಿಸಿ ಕೃಷಿ ಇಲಾಖೆ ನೌಕರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ತಿರುಮಲ ಡಾಬಾ ಬಳಿ ನಡೆದಿದೆ.

ಚಿತ್ರದುರ್ಗ ಮುನ್ಸಿಪಲ್ ಕಾಲೋನಿಯ 5ನೇ ಕ್ರಾಸ್ ನಿವಾಸಿ ವಿಶಾಲ್ (28) ಮೃತ ದುರ್ದೈವಿ. ಇವರು ಹೊಳಲ್ಕೆರೆಯ ಕೃಷಿ ಇಲಾಖೆಯಲ್ಲಿ ಟೆಕ್ನಿಕಲ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ನಾಳೆಯೇ ಇವರ ಎಂಗೇಜ್ಮೆಂಟ್ ಇತ್ತು. ಇಂದು ಶನಿವಾರ ನಿಮಿತ್ತ ಹೊಳಲ್ಕೆರೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.

ಇದನ್ನೂ ಓದಿ: PHOTO: ಬಣ್ಣ, ಬಣ್ಣದ ಹೂಗಳಿಂದ ಅಲಂಕಾರ.. ಅಯೋಧ್ಯೆ ರಾಮಮಂದಿರ ನೋಡೋದೇ ಪರಮಾನಂದ!

ಈ ವೇಳೆ ಚಿತ್ರದುರ್ಗದ ತಿರುಮಲ ಡಾಬಾದ ಬಳಿ ಬರುತ್ತಿದ್ದಂತೆ ಕಾರು ಮತ್ತು ಲಾರಿ ಮಧ್ಯೆ ಭೀಕರವಾದ ಅಪಘಾತ ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ ವಿಶಾಲ್ ಮೃತಪಟ್ಟಿದ್ದಾನೆ. ಅಪಘಾತದಿಂದ ಲಾರಿ ನೆಲಕ್ಕೆ ಉರುಳಿ ಬಿದ್ದಿದ್ದರೇ, ಕಾರು ಕೆಲಸಕ್ಕೆ ಬಾರದ ರೀತಿ ಫುಲ್ ಜಖಂ ಆಗಿದೆ. ವಿಶಾಲ್​ಗೆ ಶಿವಮೊಗ್ಗದ ಸಾಗರ ಮೂಲದ ಯುವತಿಯೊಂದಿಗೆ ನಾಳೆ ಎಂಗೇಜ್ಮೆಂಟ್ ನಡೆಯಬೇಕಿತ್ತು. ಖುಷಿ ಸಂಗತಿಯಲ್ಲಿ ಇರುವಾಗಲೇ ಯಮರಾಯ ಬಂದು ಜೀವ ತೆಗೆದಿದ್ದಾನೆ. ಇದು ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಎಂಗೇಜ್ಮೆಂಟ್.. ಮಾರುತಿ ಮಂದಿರಕ್ಕೆ ಹೋಗ್ತಿದ್ದಾಗ ಭೀಕರ ಅಪಘಾತ; ಸರ್ಕಾರಿ ನೌಕರ ಸಾವು

https://newsfirstlive.com/wp-content/uploads/2024/01/CTR_OFFICER_DEATH.jpg

Load More