ಜುಲೈ 2 ರಂದು ಮಲೇಷ್ಯಾದಿಂದ ಹೊರಟಿದ್ದ ಶಿಪ್
ಹೆಲಿಕಾಪ್ಟರ್, ಬೋಟ್ಗಳ ಸಹಾಯದಿಂದ ಸಿಬ್ಬಂದಿ ರಕ್ಷಣೆ
ಕಂಟೈನರ್ಗಳನ್ನು ಸಾಗಿಸುತ್ತಿದ್ದ ಹಡಗಿನಲ್ಲಿ ಬೆಂಕಿ
ಕಾರವಾರ: ಕಂಟೈನರ್ ಶಿಪ್ನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಕಾರವಾರದಿಂದ 50 ನಾಟಿಕಲ್ ಮೈಲಿ ದೂರದಲ್ಲಿ ಸಾಗುತ್ತಿದ್ದ ಶಿಪ್ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಬೆಂಕಿ ನಂದಿಸಲು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಪ್ರಯತ್ನ ಮಾಡಿದ್ದಾರೆ. ಜುಲೈ 2ರಂದು ಮಲೇಷಿಯಾದಿಂದ ಹೊರಟಿದ್ದ ಶಿಪ್ ಗೋವಾಗೆ ಬಂದಿತ್ತು. ಅಲ್ಲಿಂದ ನಿನ್ನೆ ಲಂಕಾದತ್ತ ಹೊರಟಿತ್ತು. ಶ್ರೀಲಂಕಾಗೆ ಜುಲೈ 21ನೇ ತಾರೀಕು ತಲುಪಬೇಕಿತ್ತು. ಕೋಸ್ಟ್ ಗಾರ್ಡ್ ಏರ್ ಕ್ರಾಫ್ಟ್, ಹೆಲಿಕಾಪ್ಟರ್ ಹಾಗೂ ಮೂರು ಬೋಟ್ಗಳ ಸಹಾಯದಿಂದ ಹಡಗಿನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ.
ಫಿಲಿಪಿನ್ಸ್ ಓರ್ವ ವ್ಯಕ್ತಿ ಸೇರಿ ಒಟ್ಟು 21 ಸಿಬ್ಬಂದಿ ಇದ್ದರು. ಬೆಂಕಿ ಅನಾಹುತದಿಂದ ಯಾರಿಗೂ ಯಾವುದೇ ಗಾಯಗಳಾಗಲಿ, ಜೀವಹಾನಿ ಆಗಿಲ್ಲ ಎಂದು ಕೋಸ್ಟ್ಗಾರ್ಡ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕರೆಂಟ್ ಬಿಟ್ಟಿಲ್ಲ ಎಂದು ಶಾಪ ಹಾಕೋ ಜನಗಳೇ ಇಲ್ನೋಡಿ.. ನಿಮ್ಮ ಮನೆ ಬೆಳಗಲು ಜೀವವನ್ನೇ ಒತ್ತೆಯಿಟ್ಟು ಕೆಲಸ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ