newsfirstkannada.com

ಜಾತಿ ನಿಂದನೆ ಕೇಸ್​ಗೆ​ ಹೆದರಿ ಆತ್ಮಹತ್ಯೆಗೆ ಶರಣಾದ 23 ವರ್ಷದ ಯುವಕ

Share :

Published May 2, 2024 at 12:01pm

  ನಾಲ್ಕು ದಿನದ ಹಿಂದೆ ಜಾತ್ರೆ ವೇಳೆ ನಡೆದ ಗಲಾಟೆ

  ಕ್ಷುಲ್ಲಕ ಕಾರಣಕ್ಕೆ ಅವರಿವರ ನಡುವೆ ನಡೆದ ಗಲಾಟೆ

  ಜಮೀನಿನಲ್ಲಿ ನೇಣಿಗೆ ಶರಣಾದ 23 ವರ್ಷದ ಯುವಕ.. ಅಷ್ಟಕ್ಕೂ ಆಗಿದ್ದೇನು?

ಕಲಬುರಗಿ: ಜಾತಿ ನಿಂದನೆ ಕೇಸ್ ದಾಖಲಿಸಿದಕ್ಕೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಲಾಡಮುಗಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನಿಖಿಲ್ ಪೂಜಾರಿ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ.

ನಿಖಿಲ್ ಪೂಜಾರಿ ಲಾಡಮುಗಳಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ. ನಾಲ್ಕು ದಿನದ ಹಿಂದೆ ಲಾಡಮುಗುಳಿ ಗ್ರಾಮದಲ್ಲಿ ಜಾತ್ರೆ ವೇಳೆ ಗಲಾಟೆ ನಡೆದಿತ್ತು. ಎರಡು ಸಮುದಾಯದ ಯುವಕರ ನಡುವೆ ಕ್ಷುಲ್ಲಕ‌ ವಿಚಾರಕ್ಕೆ ಗಲಾಟೆ ನಡೆದಿತ್ತು. ಗಲಾಟೆಯ ಬಳಿಕ ಊರವರ ಸಮ್ಮುಖದಲ್ಲಿ ರಾಜಿ ಸಂಧಾನ ಕೂಡ ನಡೆದಿತ್ತು.

ಇದನ್ನೂ ಓದಿ: ಇದು ಪ್ರಜ್ವಲ್​ ರೇವಣ್ಣ ರಿಟರ್ನ್ ಫ್ಲೈಟ್​​ ಟಿಕೆಟ್​? ನಾಳೆ ಡೌಟ್​, ಯಾವಾಗ ಭಾರತಕ್ಕೆ ಬರೋದು ಗೊತ್ತಾ?

ಬಳಿಕ ಇನ್ನೊಂದು ಸಮುದಾಯ ಯುವಕರು ನಿಖಿಲ್ ಪೂಜಾರಿ ಸೇರಿ ಹಲವರ ವಿರುದ್ದ ದೂರು ನೀಡಿದ್ದರು.ನರೋಣಾ ಪೊಲೀಸ್ ಠಾಣೆಯಲ್ಲಿ ನಿಖಿಲ್ ಸೇರಿ ಹಲವರ ವಿರುದ್ದ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ಇದರಿಂದ ಹೆದರಿ ನಿಖಿಲ್ ಪೂಜಾರಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾತಿ ನಿಂದನೆ ಕೇಸ್​ಗೆ​ ಹೆದರಿ ಆತ್ಮಹತ್ಯೆಗೆ ಶರಣಾದ 23 ವರ್ಷದ ಯುವಕ

https://newsfirstlive.com/wp-content/uploads/2024/05/Kalaburgai-Suicide.jpg

Load More