newsfirstkannada.com

ಹೃದಯ ಸಂಬಂಧಿ ಕಾಯಿಲೆ ಇದ್ಯಾ? ನಿದ್ದೆ ಬರ್ತಿಲ್ಲವೇ? ಹಾಗಾದ್ರೆ ಈ ಸ್ಟೋರಿ ನೀವು ಓದಲೇಬೇಕು

Share :

Published September 2, 2024 at 6:12am

    ಸರಿಯಾದ ನಿದ್ರೆ ಮಾಡದಿದ್ದರೆ ಕಾಡಲಿವೆ ಅನೇಕ ಹೃದಯದ ಕಾಯಿಲೆಗಳು!

    ವೀಕೆಂಡ್​​ನಲ್ಲಾದರೂ ಚೆನ್ನಾಗಿ ನಿದ್ರಿಸುವುದರಿಂದ ನೀವು ಸುರಕ್ಷಿತವಾಗಿರಬಹುದು

    ವೀಕೆಂಡ್​ನಲ್ಲಿ ಸಂತೃಪ್ತಿಯ ನಿದ್ರೆ ಮಾಡುವವರಿಗೆ ಕಾಡುವುದಿಲ್ಲ ಹೃದಯ ಕಾಯಿಲೆ

ಲಂಡನ್: ಮನುಷ್ಯನ ಜೀವನ ಶೈಲಿ ಈಗ ಬದಲಾಗಿದೆ. ಯಶಸ್ಸು ದುಡ್ಡಿನ ಬೆನ್ನಿಗೆ ಬಿದ್ದಿರುವ ನಿದ್ರೆ, ಊಟ ಹಾಗೂ ದಣಿವನ್ನು ಮರೆತು ನಿರಂತರ ದುಡಿತಕ್ಕೆ ನಿಂತಿದ್ದಾನೆ. ಸ್ಪರ್ಧಾತ್ಮಕ ಜಗತ್ತಿನೆದುರು ನಿಲ್ಲಬೇಕಾದರೆ ದಣಿವರಿಯದಂತೆ ದುಡಿಯುವುದ ಇಂದು ಅನಿವಾರ್ಯವಾಗಿದೆ. ಅದೇ ಈಗ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಸರಿಯಾಗಿ ನಿದ್ದೆ ಮಾಡದ ಕಾರಣ ಅನೇಕ ರೋಗಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಅದರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಒಂದು. ಆದ್ರೆ ಇದಕ್ಕೂ ಕೂಡ ಒಂದು ಪರಿಹಾರವಿದೆ. ನಿಮಗೆ ಸಿಕ್ಕ ವೀಕಾಫ್ ಅಥವಾ ವಿಕೆಂಡ್​ಗಳಲ್ಲಿ ಸಖತ್ತಾಗಿ ನಿದ್ದೆ ಮಾಡಿ. ಸಂತೃಪ್ತಿಯ ನಿದ್ರೆಯಿಂದ ನೀವು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು.

ಇದನ್ನೂ ಓದಿ: ಅ. 19ಕ್ಕೆ ನ್ಯೂಸ್​ಫಸ್ಟ್​ನಿಂದ “ಪಾತ್​​​ ಟೂ ಪೇರೆಂಟ್​​ಹುಡ್” ಈವೆಂಟ್​​; ಸಂತಾನಹೀನತೆಗೆ ಸಿಗಲಿದೆ ಪರಿಹಾರ!

ತೃಪ್ತಿಕರ ನಿದ್ರೆಯನ್ನು ಮಾಡುವುದರಿಂದಾಗಿ ಅದರಲ್ಲೂ ವಿಕೆಂಡ್​ಗಳಲ್ಲಿ ಚೆನ್ನಾಗಿ ನಿದ್ರಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಶೇಕಡಾ 20 ರಷ್ಟು ನಾವು ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಸೇರಿದಂತೆ ಹಲವು ಅಧ್ಯಯನಗಳು ಹೇಳಿವೆ. ಫವಾಯಿ ಹಾಸ್ಪಿಟಲ್ ಸೇರಿದಂತೆ ಹಲವು ವೈದ್ಯಕೀಯ ಸಂಘಟನೆಗಳು ಸೇರಿ ಮಾಡಿದ ಅಧ್ಯಯನದಲ್ಲಿ ಇಂತಹದೊಂದು ವಿಷಯ ಬಹಿರಂಗವಾಗಿದೆ. 90,903 ಜನರನ್ನು ಅಧ್ಯಯನಕ್ಕೆ ಒಳಪಡಿಸಿ ಅದರಿಂದ ಬಂದ ಫಲಿತಾಂಶದನ್ವಯ ಈ ಒಂದು ಗುಟ್ಟು ಗೊತ್ತಾಗಿದೆ. ವಿಕೇಂಡ್​ಗಳಲ್ಲಿ ಸಂತೃಪ್ತವಾದ ನಿದ್ರೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ನಡುವಿನ ಸಂಬಂಧವು ಈ ಅಧ್ಯಯನ ಮೂಲಕ ಬಯಲಾಗಿದೆ.

ಇದನ್ನೂ ಓದಿ: ಮಖಾನ ತಿಂದ್ರೆ ದೇಹಕ್ಕೆ ಹಲವು ಲಾಭ.. ಮೂಳೆಯ ಆರೋಗ್ಯ ವೃದ್ಧಿಸುತ್ತೆ ಕಣ್ರಿ ಫಾಕ್ಸ್​ ನಟ್​!

ಒಟ್ಟು ಅಧ್ಯಯನಕ್ಕೆ ಒಳಪಡಿಸಲಾದ ಜನರಲ್ಲಿ ನಾಲ್ಕು ಗ್ರೂಪ್​ಗಳನ್ನು ಮಾಡಲಾಗಿದೆ. 7 ಗಂಟೆಗಿಂತ ಕಡಿಮೆ ಮಲಗುವವರು ಯಾರು. 8 ರಿಂದ 10 ಗಂಟೆಗಳ ಕಾಲ ಮಲಗುವವರು ಯಾರು, ಹೀಗೆ ಒಟ್ಟು ನಾಲ್ಕು ಗುಂಪಗಳ ಅನ್ವಯ ಈ ಅಧ್ಯಯನವನ್ನು ಮಾಡಲಾಗಿದೆ. ಇದರಲ್ಲಿ 10 ರಿಂದ 12 ಗಂಟೆಗೂ ಹೆಚ್ಚು ಕಾಲ ನಿದ್ರಿಸುವವರಲ್ಲಿ ಹೃದಯಸಂಬಂಧಿ ಕಾಯಿಲೆಗಳು ಕಡಿಮೆ ಇವೆ ಎಂಬುದು ತಿಳಿದು ಬಂದಿದೆ. ಅವರಲ್ಲಿ ಆ ರೀತಿಯ ಕಾಯಿಲೆಗಳು ಬರುವ ಸಾಧ್ಯತೆ ಸುಮಾರು ಶೇಕಡಾ 21ರಷ್ಟು ಕಡಿಮೆ ಎಂದು ಅಂದಾಜಿಸಲಾಗಿದೆ.

ಒಟ್ಟಾರೆ ನಿದ್ರೆಯೂ ಕೂಡ ನಮ್ಮ ದೈನಂದಿನ ಚಟುವಟಿಕೆಗಳ ಒಂದು ಭಾಗ. ಹೀಗಾಗಿ ಸಮಯ ಸಿಕ್ಕಾಗ ಚೆನ್ನಾಗಿ ನಿದ್ರಿಸಿ, ನಿಮ್ಮ ಹೃದಯದ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಎನ್ನುತ್ತಾರೆ ವೈದ್ಯರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೃದಯ ಸಂಬಂಧಿ ಕಾಯಿಲೆ ಇದ್ಯಾ? ನಿದ್ದೆ ಬರ್ತಿಲ್ಲವೇ? ಹಾಗಾದ್ರೆ ಈ ಸ್ಟೋರಿ ನೀವು ಓದಲೇಬೇಕು

https://newsfirstlive.com/wp-content/uploads/2024/07/sleep2-1.jpg

Load More