newsfirstkannada.com

RCB ಮಾಡಿದೆ 7 ಬಿಗ್​​ ಮಿಸ್ಟೇಕ್ಸ್; ತವರಿನ ಅಂಗಳದಲ್ಲಿ ಮುಖಭಂಗ ಆಗಲು ಇಲ್ಲಿದೆ ಕಾರಣ..!

Share :

Published March 30, 2024 at 11:59am

Update March 30, 2024 at 12:00pm

    ಕೆಕೆಆರ್​​​ ವಿರುದ್ಧ ಆರ್​​ಸಿಬಿಗೆ ಹೀನಾಯ ಸೋಲು

    ಪಂದ್ಯದಲ್ಲಿ RCB ಎಡವಿದ್ದೆಲ್ಲಿ? ಸೋಲಿಗೆ ಕಾರಣ ಏನು?

    ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತ ಆರ್​​ಸಿಬಿ

2ನೇ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಿದ್ದ KKR ವಿರುದ್ಧವೂ ಗೆದ್ದು ಬೀಗೋ ಅಪಾರ ಆತ್ಮವಿಶ್ವಾಸದಲ್ಲಿತ್ತು. ಆದರೆ ಹೋಮ್​ಗ್ರೌಂಡ್​​​ ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿ ಹೀನಾಯ ಸೋಲಿಗೆ ಗುರಿಯಾಗಿದೆ. ಆರ್​​ಸಿಬಿ ಲೆಕ್ಕಾಚಾರ ತಪ್ಪಾಗಿದ್ದೆಲ್ಲಿ? ಸೋಲಿಗೆ ಕಾರಣಗಳೇನು?

ಕಾರಣ ನಂ.1: ಟಾಸ್​​ ಸೋಲು, ಪ್ಲೇಯಿಂಗ್​-XI ಆಯ್ಕೆ ಯಡವಟ್ಟು
ನಿನ್ನೆಯ ಪಂದ್ಯದಲ್ಲಿ ಟಾಸ್​ ಸೋತ ಆರ್​​ಸಿಬಿ, ಮೊದಲು ಬ್ಯಾಟಿಂಗ್​ ನಡೆಸ್ತು. ಚಿನ್ನಸ್ವಾಮಿ ಮೈದಾನದಲ್ಲಿ ಚೇಸಿಂಗ್​ ಆರ್​​ಸಿಬಿಯ ಮೇನ್​​​ ಸ್ಟ್ರೆಂಥ್​​. ಆದ್ರೆ ನಿನ್ನೆ ಮೊದಲು ಬ್ಯಾಟಿಂಗ್​ ನಡೆಸ್ತು. ಇದೇ ವೇಳೆ ತಂಡದ ಆಯ್ಕೆಯಲ್ಲೂ ಕ್ಯಾಪ್ಟನ್​ ಎಡವಿದ್ರು. ಕಳಪೆ ಫಾರ್ಮ್​ನಲ್ಲಿರೋ ಅಲ್ಜಾರಿ ಜೋಸೆಫ್​ಗೆ ಮಣೆ ಹಾಕಿದ್ದಲ್ಲದೇ, ಅನುಭವಿ ಸ್ಪಿನ್ನರ್​ ಕರಣ್​ ಶರ್ಮಾನ ಕೈ ಬಿಟ್ಟು ತಪ್ಪು ಮಾಡಿದ್ರು.

ಕಾರಣ ನಂ.2: ಕ್ಯಾಪ್ಟನ್ ​​ಫಾಫ್​ ಡುಪ್ಲೆಸಿ ಫ್ಲಾಪ್​ ಶೋ
ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿ ಕೆಕೆಆರ್​ ವಿರುದ್ಧವೂ ಫಾರ್ಮ್​ ಕಂಡುಕೊಳ್ಳುವಲ್ಲಿ ಎಡವಿದ್ರು. ಕೇವಲ 8 ರನ್​ಗಳಿಗೆ ಆಟ ಅಂತ್ಯಗೊಳಿಸಿದ್ರು. ಡುಪ್ಲೆಸಿ ವಿಕೆಟ್​​ ಪತನದಿಂದ ಆರಂಭದಲ್ಲೇ ಆರ್​​ಸಿಬಿ ಹಿನ್ನಡೆ ಎದುರಿಸಿತು.

ಕಾರಣ ನಂ.3: ರಜತ್​ ಪಟಿದಾರ್​-ಅನುಜ್​​ ರಾವತ್​​ ವೈಫಲ್ಯ
ರಜತ್​ ಪಟಿದಾರ್​ ವೈಫಲ್ಯ 3ನೇ ಪಂದ್ಯದಲ್ಲೂ ಮುಂದುವರೆಯಿತು. ಜಸ್ಟ್​​ 3 ರನ್​ಗಳಿಸಿ ರಜತ್​​ ಔಟಾದ್ರೆ, ಬಳಿಕ ಕಣಕ್ಕಿಳಿದ ಅನುಜ್​ ರಾವತ್​ ಕೂಡ ಬೇಗನೇ ಪೆವಿಲಿಯನ್​ ಸೇರಿದ್ರು. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಪತನ ತಂಡಕ್ಕೆ ಹಿನ್ನಡೆಯಾಯ್ತು.

ಕಾರಣ ನಂ.4: ಮಿಡಲ್​ ಹಾಗೂ ಡೆತ್​ ಓವರ್​​​​ನಲ್ಲಿ ಸ್ಲೋ ಬ್ಯಾಟಿಂಗ್​
​​ಪವರ್​​ ಪ್ಲೇನಲ್ಲಿ ಪವರ್​ ಫುಲ್​ ಬ್ಯಾಟಿಂಗ್​ ಮಾಡಿದ ಆರ್​ಸಿಬಿ ಮೊದಲ 6 ಓವರ್​ಗಳಲ್ಲಿ 61 ರನ್​ಗಳಿಸಿತು. ಆದರೆ ನಂತರದ 5 ಓವರ್​ ಅಂದ್ರೆ 7 ರಿಂದ 11 ಓವರ್​​​ವರೆಗೆ ಜಸ್ಟ್​ 26 ರನ್​ಗಳಿಸ್ತು. ಕೊನೆಯ 16,17,18 ಈ ಮೂರು ಓವರ್​​​​ಗಳಲ್ಲಿ ಕೇವಲ 19 ರನ್​​ ಕಲೆ ಹಾಕಿತು. ಈ ಸ್ಲೋ ಇನ್ನಿಂಗ್ಸ್​ ತಂಡಕ್ಕೆ ಮುಳುವಾಯ್ತು.

ಕಾರಣ ನಂ.5: ಪವರ್​ ಪ್ಲೇನಲ್ಲಿ ಪವರ್​ಲೆಸ್​ ಬೌಲಿಂಗ್​..!
183 ರನ್​ಗಳ ಟಾರ್ಗೆಟ್​ ಬೆನ್ನತ್ತಲು ಕಣಕ್ಕಿಳಿದ ಕೆಕೆಆರ್​​, ಅಗ್ರೆಸ್ಸಿವ್​ ಆಟವಾಡಿತು. ಪವರ್​​ಲೆಸ್​​​ ಬೌಲಿಂಗ್​ ಮಾಡಿದ ಆರ್​​ಸಿಬಿ ಬೌಲರ್ಸ್​​ ಮೊದಲ 6 ಓವರ್​​ಗಳಲ್ಲೇ, 85 ರನ್​​ ಬಿಟ್ಟು ಕೊಟ್ರು. ಇದೇ ನೋಡಿ ಸೋಲಿಗೆ ಮುನ್ನುಡಿ ಬರೆದಿದ್ದು.!

ಕಾರಣ ನಂ.6: ಅತ್ಯಂತ ಕಳಪೆ ಫೀಲ್ಡಿಂಗ್​
ಬೌಲಿಂಗ್​ ಒಂದೆಡೆಯಾದ್ರೆ, ಆರ್​​ಸಿಬಿ ಫೀಲ್ಡಿಂಗ್​ ಇನ್ನೊಂದೆಡೆ ಹಿನ್ನಡೆಯಾಯ್ತು. ಕ್ಯಾಚ್​​ಗಳನ್ನ ಡ್ರಾಪ್​ ಮಾಡಿದ್ದಲ್ಲದೇ, ಬೈಸ್​​ ರೂಪದಲ್ಲಿ ಬಿಟ್ಟಿ ರನ್​ ಕೂಡ ಕೊಟ್ರು.

ಕಾರಣ ನಂ.7: ತ್ರಿಮೂರ್ತಿಗಳ ದುಬಾರಿ ಬೌಲಿಂಗ್​.!
ಆರ್​​ಸಿಬಿ ವೇಗಿಗಳಾದ ಮೊಹಮ್ಮದ್​ ಸಿರಾಜ್​, ಅಲ್ಜಾರಿ ಜೋಸೆಫ್​, ಯಶ್​ ದಾಯಾಳ್​ ದಾರಾಳವಾಗಿ ರನ್​ ಬಿಟ್ಟು ಕೊಟ್ರು. ಅಲ್ಜಾರಿ ಜೋಸೆಫ್​ 17ರ ಎಕಾನಮಿಯಲ್ಲಿ ರನ್​ ಹೊಡೆಸಿಕೊಂಡ್ರೆ, ಸಿರಾಜ್​​ 15.30, ಯಶ್​ ದಯಾಳ್​ 11.50ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ರು.

ಇದನ್ನೂ ಓದಿ: ಸೋತರೂ ಬೌಲಿಂಗ್​ನಲ್ಲಿ ಮಿಂಚಿದ ಕನ್ನಡಿಗ ವೈಶಾಖ್; ಅತಿ ಹೆಚ್ಚು ರನ್​ ಹೊಡೆಸಿಕೊಂಡ RCB ಬೌಲರ್ ಯಾರು?

ಇಷ್ಟೇ ಅಲ್ಲ.. ಕೆಕೆಆರ್​​ನಲ್ಲಿದ್ದ ಗೆಲುವಿನ ಹಸಿವು, ಅಗ್ರೆಸ್ಸಿವ್​ ಇಂಟೆಂಟ್​ ಆರ್​​ಸಿಬಿಯಲ್ಲಿ ಕಂಡು ಬರಲೇ ಇಲ್ಲ. ಪಂದ್ಯದಲ್ಲಿ ಆರ್​​ಸಿಬಿ ಫಿಯರ್​ಲೆಸ್​ ಬ್ಯಾಟಿಂಗ್​, ಧಮ್​ಧಾರ್​ ಬೌಲಿಂಗ್​ ಮಾಡ್ಲೇ ಇಲ್ಲ. ಇದು ಕೂಡ ಸೋಲಿನ ಪ್ರಮುಖ ಕಾರಣವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಮಾಡಿದೆ 7 ಬಿಗ್​​ ಮಿಸ್ಟೇಕ್ಸ್; ತವರಿನ ಅಂಗಳದಲ್ಲಿ ಮುಖಭಂಗ ಆಗಲು ಇಲ್ಲಿದೆ ಕಾರಣ..!

https://newsfirstlive.com/wp-content/uploads/2024/03/RCB-19.jpg

Load More