/newsfirstlive-kannada/media/post_attachments/wp-content/uploads/2024/09/CBSC_EXAMS.jpg)
ನವದೆಹಲಿ: 2025ರ 10 ಹಾಗೂ 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ದಿನಾಂಕ, ಸಮಯವನ್ನು ಡಿಸೆಂಬರ್‌ನಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್​​ಸಿ) ರಿಲೀಸ್ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಪರೀಕ್ಷೆ ನಡೆಯುವ ದಿನಾಂಕ ಹಾಗೂ ಸಮಯದ ವಿವರಗಳ ಪಟ್ಟಿಯನ್ನು ಸಿಬಿಎಸ್​​ಸಿ ಅಧಿಕೃತವಾಗಿ ಇದುವರೆಗೂ ಘೋಷಣೆ ಮಾಡಿಲ್ಲ. ಆದರೆ ಕಳೆದ ಬಾರಿಯಂತೆ ಈ ಬಾರಿಯು ಡಿಸೆಂಬರ್​ನಲ್ಲೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಸಂಸ್ಥೆ ಡಿಸೆಂಬರ್​​ನಲ್ಲಿ ವೆಬ್​ಸೈಟ್​​ನಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ರಿಲೀಸ್ ಮಾಡಿದರೆ ವಿದ್ಯಾರ್ಥಿಗಳು ಅದನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ:KRCL Recruitment; ವಿವಿಧ ಸರ್ಕಾರಿ ಹುದ್ದೆಗಳು.. ಸಂದರ್ಶನ ಮಾತ್ರ, ಪರೀಕ್ಷೆ ಇಲ್ಲ!
/newsfirstlive-kannada/media/post_attachments/wp-content/uploads/2024/09/CBSC_STUDENT_1.jpg)
2025ರ 10 ಹಾಗೂ 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳು ಈ ಬಾರಿಯು ಡಿಸೆಂಬರ್ 15 ರಂದು ಪ್ರಾರಂಭವಾಗಿ ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳಬಹುದು. ಪ್ರಾಕ್ಟಿಕಲ್ ಪರೀಕ್ಷೆಗಳ ದಿನಾಂಕಗಳನ್ನು ಬೋರ್ಡ್ ಎಕ್ಸಾಂಗೂ ಮೊದಲೇ ಪ್ರಕಟ ಮಾಡಲಾಗುತ್ತದೆ. ಇನ್ನು 2024ರಲ್ಲಿ ಡಿಸೆಂಬರ್ 12 ರಂದು ಎಕ್ಸಾಂ ದಿನಾಂಕ ಘೋಷಣೆ ಮಾಡಿತ್ತು. ಅದರಂತೆ ಪರೀಕ್ಷೆ ಫೆಬ್ರವರಿ 15 ರಂದು ಪ್ರಾರಂಭವಾಗಿ ಏಪ್ರಿಲ್ 2 ರಂದು ಮುಕ್ತಾಯಗೊಂಡಿದ್ದವು. ಫಲಿತಾಂಶವನ್ನು ಮೇ 13ರಂದು ಘೋಷಣೆ ಮಾಡಲಾಗಿತ್ತು. ಬಳಿಕ ಪೂರಕ ಪರೀಕ್ಷೆಗಳನ್ನ (supplementary exams) ಜುಲೈ 15 ರಿಂದ 22 ಒಳಗೆ ನಡೆಸಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us