ಏಕೀಕೃತ ಪಿಂಚಣಿ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ
ಕೇಂದ್ರದ UPS ಲಾಭ ರಾಜ್ಯದ ನೌಕರರಿಗೂ ಸಿಗುತ್ತದೆಯೇ?
ನೂತನ ಪಿಂಚಣಿ ಯೋಜನೆಯ ಜಾರಿಗೆ ಬರೋದು ಯಾವಾಗ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಏಕೀಕೃತ ಪಿಂಚಣಿ ಯೋಜನೆಗೆ (UPS: Unified Pension Scheme) ಅನುಮೋದನೆ ನೀಡಿದೆ. ಇದರ ಅಡಿಯಲ್ಲಿ ಕೇಂದ್ರ ನೌಕರರಿಗೆ ವೇತನದ ಶೇಕಡಾ 50 ರಷ್ಟು ಪಿಂಚಣಿ ಸಿಗಲಿದೆ. ನೂತನ ಪಿಂಚಣಿ ಸ್ಕೀಮ್ 2025 ಏಪ್ರಿಲ್ 1 ರಂದು ಜಾರಿಗೆ ಬರಲಿದೆ.
ಕೇಂದ್ರದ ಹೊಸ ಪಿಂಚಣಿ ಯೋಜನೆ ಉದ್ದೇಶವು ತನ್ನ ನೌಕರರಿಗೆ ಗ್ಯಾರಂಟಿ ಪಿಂಚಣಿ ( guarantees a pension), ಕುಟುಂಬ ಪಿಂಚಣಿ (family pension) ಹಾಗೂ ಕನಿಷ್ಠ ಖಚಿತ ಪಿಂಚಣಿ (guarantees an assured minimum pension) ಒದಗಿಸುವುದಾಗಿದೆ. ಸಂಪುಟ ಸಭೆ ಬೆನ್ನಲ್ಲೇ ಮಾತನಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್.. ಕನಿಷ್ಠ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರರಿಗೆ 50% ಗ್ಯಾರಂಟಿ ಪಿಂಚಣಿ ಯೋಜನೆ ಸಿಗಲಿದೆ. ನೌಕರನ ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ 50 ಪ್ರತಿಶತವನ್ನು ಪಿಂಚಣಿಯಾಗಿ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಳೆದ ಬಾರಿ ಹಸರಂಗ ಯಾಕೆ IPL ಆಡಲಿಲ್ಲ? ಇಲ್ಲೂ ಇದೆ ಆರ್ಸಿಬಿಯ ಒಂದು ನಿರ್ಧಾರದ ಕತೆ..!
ಕುಟುಂಬ ಪಿಂಚಣಿ ಯೋಜನೆಯಡಿಯಲ್ಲಿ.. ಪಿಂಚಣಿದಾರ ಸೇವಾ ಅವಧಿಯಲ್ಲಿ ಸಾವನ್ನಪ್ಪಿದ್ರೆ ಕುಟುಂಬವು (ಪತ್ನಿ, ಸಂಬಂಧಿ) ಶೇಕಡಾ 60 ರಷ್ಟು ಪಿಂಚಣಿ ಪಡೆಯುತ್ತದೆ. ಅದೇ ಸಮಯದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ತಿಂಗಳಿಗೆ 10,000 ರೂಪಾಯಿ ಪಿಂಚಣಿ ಸಿಗಲಿದೆ. ಪ್ರಸ್ತುತ ಪಿಂಚಣಿ ಯೋಜನೆಯ ಪ್ರಕಾರ, ನೌಕರರು ಶೇಕಡಾ 10 ರಷ್ಟು ಕೊಡುಗೆ ನೀಡಿದರೆ ಕೇಂದ್ರ ಸರ್ಕಾರವು ಶೇಕಡಾ 14 ರಷ್ಟು ಕೊಡುಗೆ ನೀಡುತ್ತದೆ. ಇದನ್ನು ಯುಪಿಎಸ್‌ನೊಂದಿಗೆ ಶೇಕಡಾ 18ಕ್ಕೆ ಹೆಚ್ಚಿಸಲಾಗುತ್ತದೆ.
ರಾಜ್ಯದ ನೌಕರರಿಗೂ ಈ ಲಾಭ?
ರಾಜ್ಯ ಸರ್ಕಾರ ಯುಪಿಎಸ್ ಜಾರಿಗೊಳಿಸಲು ಬಯಸಿದರೆ ಜಾರಿಗೆ ತರಬಹುದು. ಸಮಗ್ರ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ರಾಜ್ಯ ಸರ್ಕಾರಗಳಿಗೂ ನೀಡಲಾಗುವುದು. ರಾಜ್ಯ ಸರ್ಕಾರಗಳು ಯುಪಿಎಸ್ ಆಯ್ಕೆಯನ್ನು ಆರಿಸಿದರೆ, ಫಲಾನುಭವಿಗಳ ಸಂಖ್ಯೆ ಅಂದಾಜು 90 ಲಕ್ಷಕ್ಕೆ ಹೆಚ್ಚಾಗುತ್ತದೆ. ಈ ಯೋಜನೆಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಇಂಡಸ್ಟ್ರಿ ಬಗ್ಗೆ ಕೆಟ್ಟದಾಗಿ ಮಾತನಾಡೋರ ವಿರುದ್ಧ ಡಾಲಿ ಧನಂಜಯ ಆಕ್ರೋಶ.. ಏನಂದ್ರು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್