ಅವಮಾನ ಎದುರಿಸಿದ್ರಾ ಲಂಕಾದ ಸ್ಟಾರ್ ಆಲ್ರೌಂಡರ್?
ಆರ್ಸಿಬಿಯಿಂದ SRH ತಂಡ ಕೂಡಿಕೊಂಡಿರುವ ಹಸರಂಗ
10.75 ಕೋಟಿ ರೂಪಾಯಿ ನೀಡಿ ಖರೀದಿಸಿದ್ದ ಆರ್ಸಿಬಿ
ಐಪಿಎಲ್ ಮೆಗಾ ಹರಾಜಿಗೆ ತಯಾರಿ ನಡೆಯುತ್ತಿದ್ದು, ಫ್ರಾಂಚೈಸಿಗಳ ಕುರಿತ ಒಂದೊಂದೇ ಕುತೂಹಲಕಾರಿ ವಿಚಾರಗಳು ಬೆಳಕಿಗೆ ಬರುತ್ತಿವೆ. ವಿಶೇಷ ಅಂದರೆ ಆರ್ಸಿಬಿ ತಂಡದ ಸ್ಟಾರ್ ಆಲ್ರೌಂಡರ್ ಆಗಿದ್ದ ವನಿಂದು ಹಸರಂಗ ಕಳೆದ ಬಾರಿ ಎಸ್ಆರ್ಹೆಚ್ ತಂಡವನ್ನು ಸೇರಿದ್ದರು. ಆದರೆ ಅವರು 2024ರ ಐಪಿಎಲ್ ಆಡಿರಲಿಲ್ಲ, ಅದಕ್ಕೆ ಕಾರಣ ರಿವೀಲ್ ಆಗಿದೆ.
ಕಾರಣ ಏನು..?
2024 ಹರಾಜಿನ ವೇಳೆ ಆರ್ಸಿಬಿ ಪ್ರಮುಖ ಬದಲಾವಣೆ ಮಾಡಿತ್ತು. ಅದರಲ್ಲಿ ವನಿಂದು ಹಸರಂಗ ಅವರನ್ನು ತಂಡದಿಂದ ಕೈಬಿಟ್ಟಿರೋದು. ಈ ವಿಚಾರ ಆರ್ಸಿಬಿ ಅಭಿಮಾನಿಗಳಿಗೆ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿಯುಂಟು ಮಾಡಿತ್ತು. ಅಂದ್ಹಾಗೆ ಹಸರಂಗ ಆರ್ಸಿಬಿ ಪರ ಎರಡು ಆವೃತ್ತಿಗಳನ್ನು ಆಡುತ್ತಿದ್ದ ವೇಳೆ, 10.75 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.
ಇದನ್ನೂ ಓದಿ:IND vs BAN: ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಚಾನ್ಸ್..?
2024ರ ಹರಾಜಿನ ಸಂದರ್ಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಅವರನ್ನ 1.5 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಇದರಿಂದ ಅವಮಾನಕ್ಕೆ ಒಳಗಾದ ಹಸರಂಗ ಐಪಿಎಲ್ ಆರಂಭಕ್ಕೂ ಮುನ್ನ ಈ ಋತುವಿನಿಂದ ಹೊರಗುಳಿಯಲು ನಿರ್ಧರಿಸಿದರು. ಅದಕ್ಕೆ ಗಾಯದ ಸಮಸ್ಯೆ ಎಂದು ಸಮಾಜಿಯಿಸಿ ನೀಡಿದ್ದರು. ಜೊತೆಗೆ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಬೇಕು ಎಂಬ ಹೇಳಿಕೆ ಕೂಡ ಹೊರಬಿದ್ದಿತ್ತು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಮಾಹಿತಿ ಪ್ರಕಾರ.. ಹಸರಂಗ ಅವರು ಐಪಿಎಲ್ನಲ್ಲಿ ತಮ್ಮ ಮೌಲ್ಯ ದಿಢೀರ್ ಕಡಿಮೆ ಆಗಿರೋದ್ರಿಂದ ಕಳೆದ ಬಾರಿಯ ಟೂರ್ನಿಯಲ್ಲಿ ಆಡಿಲ್ಲ ಎಂದು ಕ್ರಿಕೆಟ್ ತಜ್ಞರು ಹೇಳ್ತಿದ್ದಾರೆ. ಇನ್ನೊಂದು ವಿಚಾರ ಅಂದರೆ ಎಸ್ಆರ್ಹೆಚ್ ಅವರನ್ನು ಈ ಬಾರಿ ಕೈಬಿಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಪಂತ್ ಕಂಬ್ಯಾಕ್.. ಕೊಹ್ಲಿ, ರೋಹಿತ್ ಗ್ಯಾರಂಟಿ; ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಹೇಗಿರುತ್ತೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ