ಸೆಪ್ಟೆಂಬರ್ನಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸರಣಿ
2 ಟೆಸ್ಟ್ ಮತ್ತು 3 ಟಿ20 ಪಂದ್ಯಗಳ ಆಡಲಿರುವ ಎರಡು ತಂಡಗಳು
ಸೆಫ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ನಡೆಯಲಿದೆ
ಭಾರತ-ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸರಣಿ ಸೆಪ್ಟೆಂಬರ್ನಲ್ಲಿ ಆಯೋಜನೆಗೊಂಡಿದೆ. ಎರಡು ತಂಡಗಳ ನಡುವೆ 2 ಟೆಸ್ಟ್ ಮತ್ತು 3 ಟಿ20 ಪಂದ್ಯಗಳು ನಡೆಯಲಿವೆ.
ಸರಣಿಯು ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಿ ಅಕ್ಟೋಬರ್ 12 ರವರೆಗೆ ಮುಂದುವರಿಯುತ್ತದೆ. ಹೀಗಾಗಿ ಟೆಸ್ಟ್ ತಂಡದ ಮೇಲೆ ಭಾರೀ ಕುತೂಹಲ ಮೂಡಿಸಿದೆ. ಯಾಕೆಂದರೆ ಸೆಫ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ನಡೆಯಲಿದೆ. ಅಲ್ಲಿ ಮಿಂಚಿದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಬಿಸಿಸಿಐ ಇದೆ.
ಇದನ್ನೂ ಓದಿ:ಹೆಂಗಿದ್ದರು.. ಹೆಂಗಾದರು ನೋಡಿ.. ಶಮಿ ತಲೆ ಕೂದಲಿನ ರಹಸ್ಯ ಇಲ್ಲಿದೆ..!
ದುಲೀಫ್ ಟ್ರೋಫಿ ಟೂರ್ನಿ ಮೇಲೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಸರಣಿ ಆಡೋದು ಖಚಿತವಾಗಿದೆ. ಈ ವರ್ಷ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 2 ಶತಕ ಮತ್ತು 2 ಅರ್ಧಶತಕ ಗಳಿಸಿದ್ದ ಗಿಲ್ ಕೂಡ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಎನ್ನಲಾಗ್ತಿದೆ. ಅದೇ ರೀತಿ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 712 ರನ್ ಗಳಿಸುವ ಮೂಲಕ ತಮ್ಮ ಸ್ಥಾನವನ್ನು ಖಚಿತಪಡಿಸಿದ್ದಾರೆ. ಕೆ.ಎಲ್. ರಾಹುಲ್ ಮತ್ತು ರಿಷಬ್ ಪಂತ್ ವಿಕೆಟ್ ಕೀಪರ್ ಕೋಟಾದಲ್ಲಿ ತಂಡವನ್ನು ಕೂಡಿಕೊಳ್ಳಬಹುದು.
ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿ ಎಂಟ್ರಿ ಕೊಡಲಿದೆ. ಅವರಿಗೆ ಸಾಥ್ ನೀಡಲು ಕುಲದೀಪ್ ಯಾದವ್ ಮೂರನೇ ಸ್ಪಿನ್ನರ್ ಆಗಿ ಕಣಕ್ಕಿಳಿಯಲಿದ್ದಾರೆ. ಸಿರಾಜ್ ದೀರ್ಘಕಾಲದಿಂದ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಎರಡನೇ ವೇಗದ ಬೌಲರ್ ಯಾರು ಅನ್ನೋದು ಖಚಿತ ಆಗಿಲ್ಲ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಮೊಹಮ್ಮದ್ ಶಮಿ ತಂಡಕ್ಕೆ ಮರಳುತ್ತಿಲ್ಲ. ಬುಮ್ರಾ ಕೂಡ ಟೆಸ್ಟ್ ತಂಡದಲ್ಲಿ ಇರಲ್ಲ. ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್ ಮೇಲೆ ಆಯ್ಕೆಗಾರರು ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ:IPLನಲ್ಲಿ ಈ ತಂಡದ ವಿರುದ್ಧ ಆಡುವಾಗ ಎಕ್ಸೈಟ್ ಆಗಿರ್ತೇನೆ-ಕೊಹ್ಲಿ ನೆಚ್ಚಿನ ತಂಡ ಯಾವ್ದು?
ಸಂಭಾವ್ಯ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಬ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್/ಖಲೀಲ್ ಅಹ್ಮದ್/ಅರ್ಷ್ದೀಪ್ ಸಿಂಗ್.
ಇದನ್ನೂ ಓದಿ:ಬಯೋಪಿಕ್ ಬಗ್ಗೆ ದ್ರಾವಿಡ್ ಅಚ್ಚರಿ ಹೇಳಿಕೆ.. ರಹಸ್ಯವಾಗಿ ಉಳಿದಿರುವ ಆ ಪ್ರಶ್ನೆಗಳಿಗೆ ಸಿಗುತ್ತಾ ಉತ್ತರ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್