ಶಾಸಕ ಮುನಿರತ್ನ ರೀತಿ ಚೆನ್ನಾರೆಡ್ಡಿ ಬಂಧನ ಏಕಾಗಿಲ್ಲ? ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

author-image
Gopal Kulkarni
Updated On
ಶಾಸಕ ಮುನಿರತ್ನ ರೀತಿ ಚೆನ್ನಾರೆಡ್ಡಿ ಬಂಧನ ಏಕಾಗಿಲ್ಲ? ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Advertisment
  • ಶಾಸಕ ಮುನಿರತ್ನ ಬಂಧನದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ
  • ’ಮುನಿರತ್ನ ರೀತಿಯೇ ಶಾಸಕ ಚೆನ್ನಾರೆಡ್ಡಿ ಅವರ ಬಂಧನವನ್ನೂ ಏಕೆ ಮಾಡಲಿಲ್ಲ’
  • ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ..!

ಬೀದರ್: ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಬಂಧನದ ವಿಚಾರವಾಗಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಮುನಿರತ್ನ ಅವರು ಜಾತಿ ನಿಂದನೆ, ಧರ್ಮ ನಿಂದನೆ ಮಾಡಿದ್ರೆ ಅದು ಅಕ್ಷಮ್ಯ ಅಪರಾಧ. ಎಫ್​ಐಆರ್ ಆದ 10 ಗಂಟೆಯಲ್ಲಿಯೇ ಮುನಿರತ್ನ ಅವರನ್ನು ಬಂಧನ ಮಾಡುತ್ತಾರೆ. ಆದ್ರೆ ಯಾದಗಿರಿ ಎಂಎಲ್​ಎ ಚನ್ನಾರೆಡ್ಡಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದ್ರೂ ಕೂಡ ಬಂಧನ ಮಾಡಿಲ್ಲ. ಎಂಎಲ್​ಎಗೆ ಪೊಲೀಸ್ ಸೆಕ್ಯೂರಿಟಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:₹20 ಲಕ್ಷ ಕೊಟ್ರೂ ಇನ್ನೂ ಹಣಕ್ಕೆ ಬೇಡಿಕೆ ಇಟ್ಟಿದ್ರಾ ಮುನಿರತ್ನ..? ಸೇಡಿನ ರಾಜಕಾರಣ ಎಂದಿದ್ದೇಕೆ BJP ಶಾಸಕ?

ಬೀದರ್​ನಲ್ಲಿ ಹುಮನಾಬಾದ್​ ಶಾಸಕರ ನಾಲಿಗೆ ಕಟ್ ಮಾಡ್ತಿವಿ ಅಂತ ಮಾತನಾಡಿದ್ರೂ ಕೂಡ ಪ್ರಕರಣ ದಾಖಲಾಗಿಲ್ಲ. ಯಾವ ವಸ್ತುವಿನಿಂದ ನಾಲಿಗೆ ಕಟ್ ಮಾಡ್ತಾರೆ. ನಾಲಿಗೆ ಕಟ್ ಮಾಡಬೇಕಾಗಿರೋದು ನಮ್ಮ ಶಾಸಕರದ್ದಲ್ಲಾ, ಹೊರದೇಶದಲ್ಲಿ ಕುಳಿತು ನಮ್ಮ ದೇಶದ ಬಗ್ಗೆ ಹಗುರವಾಗಿ ಮಾತಾಡ್ತಾರಲ್ಲ ಅವರ ನಾಲಿಗೆ ಕಟ್ ಮಾಡಿ ಎಂದು ಪರೋಕ್ಷವಾಗಿ ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭದ್ರತಾ ಲೋಪ.. ಓಡೋಡಿ ಬಂದು ವೇದಿಕೆ ಏರಿದ ಯುವಕ

ಹೆಸರು ಹೇಳದೇ ರಾಹುಲ್ ಗಾಂಧಿಯ ವಿಚಾರವನ್ನು ಪ್ರಸ್ತಾಪಿಸಿದ ಛಲವಾದಿ ನಾರಾಯಣ ಸ್ವಾಮಿ, ಪ್ರಜಾಪ್ರಭುತ್ವಕ್ಕೆ ಬೆಂಕಿ ಇಟ್ಟವರು ಯಾರು? ಇಂದಿರಾ ಗಾಂಧಿಯೇ ಬೆಂಕಿ ಹಾಕಿ, ಎಮರ್ಜೆನ್ಸಿ ಡಿಕ್ಲೇರ್ ಮಾಡಿದ್ರು. ಎಮರ್ಜೆನ್ಸಿ ಡಿಕ್ಲೇರ್ ಮಾಡೋಕೆ ಕಾರಣ ಏನೂ ಇರಲಿಲ್ಲ, ಆದ್ರೂ ಎಮರ್ಜೆನ್ಸಿ ಹೇರಿದ್ರು. ಈ ರೀತಿ ಮಾತನಾಡುವವರ ನಾಲಿಗೆ ಕಟ್ ಮಾಡಿ ನಮ್ಮ ಶಾಸಕರದ್ದಲ್ಲ ಎಂದು ಗುಡುಗಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment