/newsfirstlive-kannada/media/post_attachments/wp-content/uploads/2024/06/darshan2.jpg)
ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಅನ್ನೋ ಕಾರಣಕ್ಕೆ ವ್ಯಕ್ತಿಯನ್ನು ಕರೆಸಿ ಹಲ್ಲೆ ಮಾಡಿ ಹತ್ಯೆಗೈದಿರೋ ಆರೋಪ ಕೇಳಿಬಂದಿದೆ.
ಈ ಕೇಸ್‌ನಲ್ಲಿ ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಇದೀಗ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕ್ತಿದ್ದು ಅದರ ಆಧಾರದಲ್ಲಿ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.. ಸದ್ಯ ವಿಶೇಷ ಕೋರ್ಟ್ ದರ್ಶನ್ ಸೇರಿ ಒಟ್ಟು 13 ಜನರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಆರು ದಿನಗಳ ಕಾಲ ದರ್ಶನ್ ಗ್ಯಾಂಗ್ಗೆ ಫುಲ್ ಗ್ರಿಲ್ ನಡೆಯಲಿದೆ.
ಇದನ್ನೂ ಓದಿ:ಲಾಕಪ್ನಲ್ಲಿ ಚಾಲೆಂಜಿಂಗ್ ಸ್ಟಾರ್.. ನಿನ್ನೆ ರಾತ್ರಿ ಕಳಂಕಿತ ಡಿ ಗ್ಯಾಂಗ್ಗೆ ಪೊಲೀಸರ ಆತಿಥ್ಯ ಹೇಗಿತ್ತು..?
ಏನೆಲ್ಲ ತನಿಖೆ ನಡೆಯುತ್ತೆ..?
- ಕೊಲೆ ಕೇಸ್ ಸಂಬಂಧ ಸಾಕ್ಷ್ಯಗಳ ಬಗ್ಗೆ ಪೊಲೀಸರು ಕಲೆ ಹಾಕುತ್ತಾರೆ, ಇಂದಿನಿಂದಲೇ ಆ ಕೆಲಸ ನಡೆಯಲಿದೆ
- ಕಿಡ್ನ್ಯಾಪ್ ಮಾಡಿ ಕರೆದೊಯ್ದ ಜಾಗಗಳ ಮಹಜರು ನಡೆಯಲಿದೆ. ಜೊತೆಗೆ ರೇಣುಕಾಸ್ವಾಮಿಯನ್ನು ಕೂಡಿ ಹಾಕಿ ಹಲ್ಲೆ ಮಾಡಿದ ಜಾಗದಲ್ಲೂ ಮಹಜರು ಕಾರ್ಯ ನಡೆಯಲಿದೆ. ಕೊಲೆಯಾದ ಸ್ಥಳ, ಬಾಡಿ ಬಿಸಾಡಿದ ಜಾಗಕ್ಕೆ ಆರೋಪಿಗಳನ್ನು ಕರೆದೊಯ್ದು ಮಹಜರು ಮಾಡಲಿದ್ದಾರೆ
- ಬಾಡಿ ಬಿಸಾಡಲು ಯಾರೆಲ್ಲ ಹೋಗಿದ್ದರು? ಯಾವ ಸ್ಥಳದಲ್ಲಿ ಮೃತದೇಹ ಬಿಸಾಡಿದ್ದರು? ಅನ್ನೋದ್ರ ಬಗ್ಗೆಯೂ ತನಿಖೆ ಆಗಲಿದೆ
ಹಲ್ಲೆಗೆ ಬಳಸಿದ ವೆಪನ್ಗಳ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ. ಜೊತೆಗೆ ಅವುಗಳನ್ನೂ ವಶಕ್ಕೆ ಪಡೆಯಲಿದ್ದಾರೆ - ರೇಣುಕಾಸ್ವಾಮಿಯನ್ನು ಕರೆತಂದ ಜಾಗದಿಂದ ಹಿಡಿದು ಎಲ್ಲೆಲ್ಲಿಗೆ ಕರೆದೊಯ್ದರು? ಆ ಎಲ್ಲ ಕಡೆಯೂ ಮಹಜರು ನಡೆಯಲಿದೆ.
ಮಾಹಿತಿಗಳ ಪ್ರಕಾರ.. ರೇಣುಕಾಸ್ವಾಮಿ ಮೇಲೆ ಹಲವು ಜಾಗಗಳಲ್ಲಿ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಯಾವೆಲ್ಲ ಆಯುಧಗಳಿಂದ ಹಲ್ಲೆ ಮಾಡಲಾಗಿದೆ? ಎಲ್ಲೆಲ್ಲಿ ವೆಪನ್ಗಳನ್ನು ಬೀಸಾಡಿದ್ದಾರೆ ಅನ್ನೋದನ್ನು ತಿಳಿದುಕೊಂಡು, ಅವುಗಳನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯಲಿದೆ. ಜೊತೆಗೆ ಆರೋಪಿಗಳ ಮೊಬೈಲ್ ಡೇಟಾವನ್ನೂ ಪೊಲೀಸರು ಸಂಗ್ರಹ ಮಾಡಲಿದ್ದಾರೆ. ಕೃತ್ಯ ನಡೆದಾಗ ಯಾವ್ಯಾವ ಆರೋಪಿಗಳು ಎಲ್ಲೆಲ್ಲಿ ಇದ್ದರು ಅನ್ನೋದ್ರ ಬಗ್ಗೆಯೂ ತನಿಖೆ ನಡೆಸಲಿದ್ದಾರೆ. ಒಟ್ಟಾರೆ 6 ದಿನಗಳಲ್ಲಿ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಅಪಹರಣ ಮಾಡಿದ್ದ ಆರೋಪಿಯೂ ಅರೆಸ್ಟ್.. ಯಾರು ಈತ ಭಯಂಕರ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ