newsfirstkannada.com

×

6 ಕೋಟಿಗೆ ತಮಿಳು ಸಿನಿಮಾ ಖರೀದಿಸಿ ಕನ್ನಡ ನೆಲದಲ್ಲಿ 37 ಕೋಟಿ ಸಂಪಾದಿಸಿದರು, ಅವರನ್ಯಾಕೆ ಹೋರಾಟಕ್ಕೆ ಕರೆಯಲ್ಲ? -ದರ್ಶನ್

Share :

Published September 25, 2023 at 9:12am

    ಕಾವೇರಿ ಹೋರಾಟದಲ್ಲಿ ಸೆಲೆಬ್ರಿಟಿ ವಿರುದ್ಧದ ಟೀಕೆಗೆ ಫೈರ್

    ‘ದರ್ಶನ್, ಸುದೀಪ್, ಶಿವಣ್ಣ ಮಾತ್ರ ಕಾಣೋದಾ ನಿಮಗೆ’

    ‘ತಮಿಳು ಸಿನಿಮಾಗೆ 37 ಕೋಟಿ ಸಂಪಾದಿಸಿ ಕೊಟ್ಟವರು ಯಾರು?’

ಮೈಸೂರು: ಕಾವೇರಿ ಹೋರಾಟ ಬಂದಾಗಲೆಲ್ಲಾ ದರ್ಶನ್, ಸುದೀಪ್, ಶಿವಣ್ಣ, ಯಶ್ ಮತ್ತೊಬ್ಬರು ಮಾತ್ರ ಕಾಣಿಸೋದಾ? ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ. ಬಂಡೂರು ಪಟ್ಟಣದಲ್ಲಿ ಗಂಗಾ ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ನೈಸರ್ಗಿಕ ಕೃಷಿಕರಿಗೆ 100 ಹಳ್ಳಿಕಾರ್ ತಳಿಯ ಗೋದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮದಲ್ಲಿ, ಕಾವೇರಿ ಚಳವಳಿಗೆ ಕನ್ನಡ ಚಿತ್ರರಂಗದ ಸ್ಟಾರ್​ಗಳು ಬರ್ತಿಲ್ಲ ಅನ್ನೋ ಆರೋಪಕ್ಕೆ ತಿರುಗೇಟು ನೀಡಿರುವ ದರ್ಶನ್, ಇತ್ತೀಚೆಗೆ ತಮಿಳು ಸಿನಿಮಾ ಒಂದು ಬಿಡುಗಡೆಯಾಯಿತು. ಆ ಸಿನಿಮಾವನ್ನು ಕನ್ನಡದ ವಿತರಕರೊಬ್ಬರು ಕರ್ನಾಟಕ‌ದಲ್ಲಿ ಹಂಚಿಕೆ ಮಾಡಲು ಬರೋಬ್ಬರಿ 6 ಕೋಟಿಗೆ ಖರೀದಿ ಮಾಡಿದ್ದರು. ಅದರಿಂದ ಅವರು ಸುಮಾರು 36 ರಿಂದ 37 ಕೋಟಿ ರೂಪಾಯಿ ಸಂಪಾದಿಸಿದರು. ಅಂದು ಕನ್ನಡದವರು ತಮಿಳು ಸಿನಿಮಾಗೆ 37 ಕೋಟಿ ರೂಪಾಯಿ ಕೊಂಡೊಯ್ಯಲು ಬಿಟ್ಟು ಈಗ, ಕನ್ನಡ ಕಲಾವಿದರನ್ನು ಮಾತ್ರ ಹೋರಾಟಕ್ಕೆ ಕರೆಯೋದು ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದರು.

37 ಕೋಟಿ ರೂಪಾಯಿ ಕನ್ನಡ ನೆಲದಲ್ಲಿ ಸಂಪಾದಿದ್ದ ಸಿನಿಮಾ ದೊಡ್ಡ ಕಲಾವಿದರದ್ದು. ಅವರ ಬಗ್ಗೆ ನಾನು ಯಾವುದೇ ಮಾತಾಡಲ್ಲ. ತಮಿಳು ಸಿನಿಮಾಕ್ಕೆ 37 ಕೋಟಿ ಕೊಟ್ಟರಲ್ಲ ಅವರನ್ನು ಹೋರಾಟಕ್ಕೆ ಕರೆಯಿರಿ. ಕನ್ನಡಿಗರು ಕನ್ನಡ ಸಿನಿಮಾನೇ ನೋಡಲ್ಲ. ತಮಿಳು ಸಿನಿಮಾಗೆ 37 ಕೋಟಿ ಕೊಡ್ತೀರಿ. ಇಷ್ಟೆಲ್ಲ ಹಣ ಕನ್ನಡಿಗರು ಸಿನಿಮಾವನ್ನು ನೋಡಿರೋದ್ರಿಂಲೇ ಬಂದಿರೋದು ತಾನೇ. ದರ್ಶನ್, ಸುದೀಪ್, ಶಿವಣ್ಣ, ಯಶ್​ ಅವರನ್ನು ಮಾತ್ರ ಕರೆಯೋದಲ್ಲ. ಅವರನ್ನೂ ಕರೆಯಿರಿ ಎಂದು ಟಾಂಗ್ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6 ಕೋಟಿಗೆ ತಮಿಳು ಸಿನಿಮಾ ಖರೀದಿಸಿ ಕನ್ನಡ ನೆಲದಲ್ಲಿ 37 ಕೋಟಿ ಸಂಪಾದಿಸಿದರು, ಅವರನ್ಯಾಕೆ ಹೋರಾಟಕ್ಕೆ ಕರೆಯಲ್ಲ? -ದರ್ಶನ್

https://newsfirstlive.com/wp-content/uploads/2023/09/DARSHAN-1-1.jpg

Load More