‘ಯಮ ಬಂದು ಕರೆದರೂ ಒಂದು ನಿಮಿಷ ಇರಪ್ಪ ಅಂತೀನಿ’ ಎಂದಿದ್ದೇಕೆ?
ಆಪರೇಷನ್ ಇದ್ರೂ ಸುಮಲತಾ ಅಮ್ಮನಿಗಾಗಿ ಬಂದ ದರ್ಶನ್
ಮಂಡ್ಯದಲ್ಲಿ ದರ್ಶನ್ ಸುಮಲತಾ ಬಗ್ಗೆ ಏನ್ ಹೇಳಿದರು..?
ಮಂಡ್ಯ ಲೋಕಸಭೆ ಚುನಾವಣೆ ಸಂಬಂಧ ಸಂಸದೆ ಸುಮಲತಾ ಅಂಬರೀಶ್ ಅವರು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ನಟ ದರ್ಶನ್ ಭಾಗಿಯಾಗಿ ಮಾತನಾಡಿದರು.
ದರ್ಶನ್ ಏನಂದ್ರು..?
5 ವರ್ಷದ ಹಿಂದೆ ಪ್ರಚಾರ ಮಾಡುವಾಗ ಜನ ನಮಗೆ ಪ್ರೀತಿ ಕೊಟ್ಟಿದ್ರು. ನಾನು ಎಲ್ಲೆಲ್ಲಿ ಹೋಗಿದ್ದೆ, ಅಲ್ಲೆಲ್ಲ ಎಳೆನೀರು ಕೊಟ್ಟು ಪ್ರೀತಿ ತೋರಿಸಿದ್ರಿ. ಎಲ್ಲಾ ರೈತರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಜಿಲ್ಲೆಯ ಎಲ್ಲಾ ತಾಯಿಯಂದಿರಗೂ ನಾನು ಧನ್ಯವಾದ ಹೇಳ್ತೇನೆ. ಯಮ ಕೂಡ ನನ್ನನ್ನು ಬಂದು ಕರೆದರೆ ಇರಪ್ಪ, ನಮ್ಮಮ್ಮನ ಒಂದೇ ಒಂದು ಕೆಲಸ ಇದೆ. ಮುಗಿಸಿಕೊಂಡು ಬರುತ್ತೇನೆ ಎಂದು ಹೇಳ್ತೇನೆ. ಯಾಕೆಂದರೆ ಆ ಮನೆಗೂ, ನಮಗೂ ಅಷ್ಟೊಂದು ಬಾಂಧವ್ಯ ಇದೆ.
ಕಳೆದ ಚುನಾವಣೆ ವೇಳೆ ಬಲಗೈ ಮುರಿದಿತ್ತು, ಈಗ ಎಡಗೈ ಪೆಟ್ಟಾಗಿದೆ. ನಿಜ ಹೇಳಬೇಕು ಎಂದರೆ ಇವತ್ತು ಕೈ ಆಪರೇಷನ್ ಇತ್ತು. ಆದರೆ ಅಮ್ಮನಿಗೆ ಡೇಟ್ ಕೊಟ್ಟಿದ್ದೀನಿ ಎಂದು ಕ್ಯಾನ್ಸಲ್ ಮಾಡಿಸಿಕೊಂಡೆ. ಇವತ್ತಿನ ಈ ಕಾರ್ಯಕ್ರಮ ಮುಗಿಸಿಕೊಂಡು ಹೋಗಿ, ರಾತ್ರಿ ಆಸ್ಪತ್ರೆಗೆ ಅಡ್ಮಿಟ್ ಆಗ್ತೇನೆ. ನಾಳೆ ಬೆಳಗ್ಗೆ ಆಪರೇಷನ್ ಮಾಡಿಸಿಕೊಳ್ತೇನೆ ಎಂದರು.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆ ಏನಾಗಿದೆ.. ಅಭಿಮಾನಿಗಳಲ್ಲಿ ತಳಮಳ..
ರಾಜಕೀಯವಾಗಿ ನಾನು ಏನೂ ಮಾತನಾಡಲ್ಲ. ಆದರೆ ಒಂದೇ ಒಂದು ಮಾತು ಹೇಳ್ತೇನೆ. ಮನೆ ಮಕ್ಕಳು ಮಕ್ಕಳ ರೀತಿಯಲ್ಲೇ ಇರಬೇಕು. ಇವತ್ತು ತಾಯಿ ಅನ್ಕೊಂಡು ನಾಳೆ, ಅವರಿಗೂ ನಮಗೂ ಸಂಬಂಧ ಇಲ್ಲ ಎಂದು ಹೇಳೋದಲ್ಲ. ಸಾಯೋವರೆಗೂ ತಾಯಿ ತಾಯಿನೇ. ಅಮ್ಮ ಏನೇ ಹೇಳಿದ್ದರೂ ಮಾಡ್ತೀನಿ. ಹಾಳು ಬಾವಿಗೆ ಅವರು ಬೀಳು ಎಂದರೂ ಬೀಳೋಕೆ ರೆಡಿನೇ ನಾನು. ಯಾಕೆಂದ್ರೆ ಆ ಮನೆಗೂ, ನಮಗೂ ಅಷ್ಟೊಂದು ಪ್ರೀತಿ ಕೊಟ್ಟಿದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ