newsfirstkannada.com

BREAKING: ಚಂದನ್ ಶೆಟ್ಟಿ, ನಿವೇದಿತಾ ಗೌಡ ದಾಂಪತ್ಯ ಜೀವನ ಅಂತ್ಯ; ಡಿವೋರ್ಸ್‌ಗೆ 3 ಕಾರಣ!

Share :

Published June 7, 2024 at 5:29pm

    ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ

    ವಿಚ್ಚೇದನಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ನ್ಯಾಯಾಧೀಶರು

    ಆರೋಪ ಪ್ರತ್ಯಾರೋಪ ಇಲ್ಲದ ಕಾರಣ ವಿಚ್ಛೇದನ ಅರ್ಜಿ ಪುರಸ್ಕಾರ

ಬೆಂಗಳೂರು: ಕನ್ನಡದ ಱಪರ್‌ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಡಿವೋರ್ಸ್‌ ಅರ್ಜಿಗೆ ಫ್ಯಾಮಿಲಿ ಕೋರ್ಟ್ ಅನುಮತಿ ನೀಡಿದೆ. ಪ್ರಮುಖ ಮೂರು ಅಂಶಗಳ ಮೇಲೆ ಇವರಿಬ್ಬರ ವಿಚ್ಛೇದನಕ್ಕೆ ಕೋರ್ಟ್ ಅನುಮತಿ ನೀಡಿದ್ದು, ಆದೇಶದ ಪ್ರತಿ ಸಿಕ್ಕ ಮೇಲೆ ಡಿವೋರ್ಸ್ ಅಧಿಕೃತವಾಗಲಿದೆ.

ನಾಲ್ಕು ವರ್ಷಗಳ ಹಿಂದೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಡಿವೋರ್ಸ್‌ಗೆ ಅರ್ಜಿ ಪುರಸ್ಕರಿಸಿ ಅನುಮತಿ ನೀಡಿದೆ.

ಇದನ್ನೂ ಓದಿ: 6 ದಿನದ ಹಿಂದೆ ಒಟ್ಟಿಗೆ ಕಾಣಿಸಿಕೊಂಡಿದ್ದ ನಿವೇದಿತಾ, ಚಂದನ್​​.. ಡಿವೋರ್ಸ್​ಗೆ ಕಾರಣ ಇದೇನಾ? 

ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರ ಡಿವೋರ್ಸ್ ಅರ್ಜಿಯಲ್ಲಿ ಈ ಮೂರು ಅಂಶಗಳಗಳನ್ನು ಉಲ್ಲೇಖ ಮಾಡಲಾಗಿದೆ.
1. ನಮ್ಮ ಕರಿಯರ್ ಬದಲಾವಣೆ ಬಯಸಿದ್ದೇವೆ
2. ನಿವೇದಿತಾ ವಿದೇಶದಲ್ಲಿ ವಿದ್ಯಾಭ್ಯಾಸ
3. ಕೆಲ ಭಿನ್ನಾಭಿಪ್ರಾಯಗಳ ಬಗ್ಗೆ ಉಲ್ಲೇಖ

ಈ ಮೂರು ಅಂಶಗಳು ಮತ್ತು ಇಬ್ಬರ ಮಧ್ಯೆ ಆರೋಪ ಪ್ರತ್ಯಾರೋಪ ಇಲ್ಲದ ಕಾರಣ ದಂಪತಿಗಳ ವಿಚ್ಛೇದನ ಅರ್ಜಿಯನ್ನು ಕೋರ್ಟ್‌ ಪುರಸ್ಕರಿಸಿದೆ. ದಂಪತಿಗಳ ಪರ ವಕೀಲರು ಡಿವೋರ್ಸ್‌ಗೆ ಅರ್ಜಿ ಪ್ರತಿ ಪಡೆದ ಮೇಲೆ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರ ಡಿವೋರ್ಸ್ ಅಧಿಕೃತವಾಗಲಿದೆ.

ಕೋರ್ಟ್‌ ಹಾಲ್‌ನಲ್ಲಿ ನಡೆದಿದ್ದೇನು?
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಮಿಡಿಯೇಷನ್‌ನಲ್ಲಿ ಡಿವೋರ್ಸ್ ಬಗ್ಗೆ ಒಪ್ಪಂದವಾಗಿದೆ. ಅದರ ಅಗ್ರಿಮೆಂಟ್ ಅನ್ನು ನ್ಯಾಯಾಧೀಶರ ಮುಂದೆ ಸಲ್ಲಿಕೆ ಮಾಡಲಾಗಿದ್ದು, ಅವರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ವಿಚಾರಣೆ ವೇಳೆ ನ್ಯಾಯಾಧೀಶರು ಇಬ್ಬರನ್ನು ಕರೆದು ಪ್ರಶ್ನಿಸಿದ್ದಾರೆ. ಪರಸ್ಪರ ಒಪ್ಪಿ ಬೇರೆ ಆಗಲು ನಿರ್ಧರಿಸಿದ್ದೇವೆ ಎಂದು ಜಡ್ಜ್ ಮುಂದೆ ದಂಪತಿ ಹೇಳಿಕೆ ನೀಡಿದ್ದಾರೆ. ಆಗ ಯಾವ ಕಾರಣಕ್ಕೆ ಎಂದು ಜಡ್ಜ್ ಪ್ರಶ್ನಿಸಿದ್ದು, ಸ್ವಲ್ಪ ಭಿನ್ನಾಭಿಪ್ರಾಯ ಇದೆ. ಇಬ್ಬರಿಗೂ ಕರಿಯರ್ ಬಗ್ಗೆ ಕನಸುಗಳು ಇವೆ. ಹೀಗಾಗಿ ಖುಷಿಯಾಗಿಯೇ ಒಪ್ಪಿದ್ದೇವೆ ಎಂಬ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಚಂದನ್ ಶೆಟ್ಟಿ, ನಿವೇದಿತಾ ಗೌಡ ದಾಂಪತ್ಯ ಜೀವನ ಅಂತ್ಯ; ಡಿವೋರ್ಸ್‌ಗೆ 3 ಕಾರಣ!

https://newsfirstlive.com/wp-content/uploads/2024/06/Chandan-Shetty-Nivedita-Gowda-2.jpg

Load More